ಗರ್ಭಾವಸ್ಥೆಯಲ್ಲೂ ರಸ್ತೆಗಿಳಿದು ಕಾರ್ಯ ನಿರ್ವಹಿಸಿದ ಡಿಎಸ್ಪಿ ಶಿಲ್ಪಾ ಸಾಹುಗೆ ಎಲ್ಲೆಡೆ ಮೆಚ್ಚುಗೆ
ಐದು ತಿಂಗಳ ಗರ್ಭಿಣಿ ಶಿಲ್ಪಾ ಸಾಹು ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲದು. ಆದರೆ ಜನ ಮಾತ್ರ ನಿರ್ಲಕ್ಷ್ಯತನದಿಂದ ತೋರುತ್ತಿದ್ದಾರೆ. ಈ ವೇಳೆ ತನ್ನ ಕರ್ತವ್ಯಕ್ಕೆ ಹಾಜರಾದ ಗರ್ಭಿಣಿ ಡಿಎಸ್ಪಿ ಶಿಲ್ಪಾ ಸಾಹು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ರಸ್ತೆಗೆ ಇಳಿದು ಜನರಿಗೆ ಸಂದೇಶ ನೀಡಿದರು.
ಛತ್ತೀಸ್ಗಢ್: ಸರ್ಕಾರದ ಕೆಲಸ ದೇವರ ಕೆಲಸ ಎಂದು ಹಲವರು ಹೇಳುತ್ತಾರೆ. ಆದರೆ ಅದನ್ನು ಪಾಲಿಸುವುದು ಕೆಲವರು ಮಾತ್ರ. ಹಲವು ನೆಪಗಳನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ಈ ಕಾಲದಲ್ಲಿ ತುಂಬು ಗರ್ಭಿಣಿ ಅಧಿಕಾರಿಯೊಬ್ಬರು ಕರ್ತವ್ಯದಿಂದ ಹಿಂದೆ ಸರಿಯದೆ ತನ್ನ ಕೆಲಸದಲ್ಲಿ ನಿರತರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿ ಶಿಲ್ಪಾ ಸಾಹು ಎಂಬುವವರು ಸದ್ಯ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ವಿಡಿಯೋ ಹರಿಡಾಡುತ್ತಿದೆ.
ಐದು ತಿಂಗಳ ಗರ್ಭಿಣಿ ಶಿಲ್ಪಾ ಸಾಹು ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲದು. ಆದರೆ ಜನ ಮಾತ್ರ ನಿರ್ಲಕ್ಷ್ಯತನದಿಂದ ತೋರುತ್ತಿದ್ದಾರೆ. ಈ ವೇಳೆ ತನ್ನ ಕರ್ತವ್ಯಕ್ಕೆ ಹಾಜರಾದ ಗರ್ಭಿಣಿ ಡಿಎಸ್ಪಿ ಶಿಲ್ಪಾ ಸಾಹು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ರಸ್ತೆಗೆ ಇಳಿದು ಜನರಿಗೆ ಸಂದೇಶ ನೀಡಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ತಿಳಿ ಹೇಳಿದರು.
ಕೊರೊನ ಹಿನ್ನೆಲೆ ಛತ್ತೀಸ್ಗಢದ ದಂತೇವಾಡ ಲಾಕ್ಡೌನ್ ಆಗಿದೆ. ಆದರೂ ಕೆಲವರು ಚಲಿಸುತ್ತಿದ್ದಾರೆ. ವಾಹನಗಳಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುವ ಜನರನ್ನು ತಡೆದು ಮೊದಲು ಮಾಸ್ಕ್ ಹಾಕಿಕೊಳ್ಳಿ ಎಂದು ಡಿಎಸ್ಪಿ ಶಿಲ್ಪಾ ಸಾಹು ಮನವಿ ಮಾಡಿದರು. ಸುಡು ಬಿಸಿಲಿನಲ್ಲಿ ನಿಂತು ತನ್ನ ತಂಡದೊಂದಿಗೆ ಕೆಲಸವನ್ನು ನಿರ್ವಹಿಸಿದ ಮಹಿಳಾ ಅಧಿಕಾರಿಯ ಈ ಕಾರ್ಯ ಕ್ಷಮತೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಗರ್ಭಿಣಿ ಮಹಿಳೆಗೆ ವಿಶ್ರಾಂತಿ ಅನಿವಾರ್ಯ. ಗರ್ಭ ಧರಿಸುವ ಹೆಣ್ಣು ಕಾಲ ಕಾಲಕ್ಕೆ ಉತ್ತಮ ಆಹಾರವನ್ನು ಪಡೆಯಬೇಕು. ಹೆಚ್ಚು ಆಯಾಸ ಪಡದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಈ ನಡುವೆ ಡಿಎಸ್ಪಿ ಶಿಲ್ಪಾ ಸಾಹು ರಸ್ತೆಯಲ್ಲಿ ನಿಂತು ಕಾರ್ಯ ನಿರ್ವಹಿಸುವ ಮೂಲಕ ಜನರ ಜೀವದ ಬಗ್ಗೆ ಕಾಳಜಿ ವಹಿಸಿದ್ದು, ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
ಇದನ್ನೂ ಓದಿ
ಕೊರೊನಾ ಎಫೆಕ್ಟ್: 15 ಕೆಜಿ ಟೊಮ್ಯಾಟೋಗೆ ಕೇವಲ 15 ರೂಪಾಯಿ; ಮನನೊಂದ ರೈತನಿಂದ ಫಸಲು ತುಂಬಿದ ಹೊಲ ನಾಶ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೂಲ್ಸ್ ಬ್ರೇಕ್; ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದ ಜನ
(During pregnancy DSP Shilpa Sahu advises people to follow the Corona guideline)