ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ಪ್ರಮಾಣವಚನ ಸ್ವೀಕಾರ

ಎನ್​​.ವಿ.ರಮಣ 1957ರ ಆಗಸ್ಟ್​ 27ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂನಲ್ಲಿ ಜನಿಸಿದ್ದಾರೆ. ಇವರದ್ದು ಮೂಲತಃ ಕೃಷಿ ಕುಟುಂಬ. 1983ರಿಂದ ವಕೀಲಿ ವೃತ್ತಿ ಶುರು ಮಾಡಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ಪ್ರಮಾಣವಚನ ಸ್ವೀಕಾರ
ನ್ಯಾಯಮೂರ್ತಿ ರಮಣ
Lakshmi Hegde

|

Apr 24, 2021 | 11:33 AM

ಸುಪ್ರೀಂಕೋರ್ಟ್​​​​ನ 48ನೇ ಮುಖ್ಯನ್ಯಾಯಮೂರ್ತಿಯಾಗಿ (CJI) ಎನ್​.ವಿ.ರಮಣ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ನೂತನ ಸಿಜೆಐಗೆ ಪ್ರಮಾಣವಚನ ಬೋಧಿಸಿದರು. ಎನ್​. ವಿ.ರಮಣ ಸಿಜೆಐ ಆಗಿ 2022ರ ಆಗಸ್ಟ್ 26ರವರೆಗೆ ಮುಂದುವರಿಯಲಿದ್ದಾರೆ. ಈ ಹಿಂದಿನ ಸಿಜೆಐ ಎಸ್​ಎ.ಬೊಬ್ಡೆ ನಿನ್ನೆ ನಿವೃತ್ತರಾಗಿದ್ದು, ತನ್ನ ನಂತರದ ಸಿಜೆಐ ಆಗಿ ರಮಣ ಅವರನ್ನು ಶಿಫಾರಸ್ಸು ಮಾಡಿದ್ದರು.

ಎನ್​​.ವಿ.ರಮಣ 1957ರ ಆಗಸ್ಟ್​ 27ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂನಲ್ಲಿ ಜನಿಸಿದ್ದಾರೆ. ಇವರದ್ದು ಮೂಲತಃ ಕೃಷಿ ಕುಟುಂಬ. 1983ರಿಂದ ವಕೀಲಿ ವೃತ್ತಿ ಶುರು ಮಾಡಿದರು. 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್​ ಹಿರಿಯ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು ದೆಹಲಿ ಹೈಕೋರ್ಟ್​ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದರು.

ಇನ್ನು 2019ರ ನವೆಂಬರ್​ನಲ್ಲಿ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಸಿದ್ದ ಎಸ್​.ಎ.ಬೋಬ್ಡೆ ನಿನ್ನೆ ನಿವೃತ್ತರಾಗಿದ್ದು, ವಿದಾಯದ ಭಾಷಣ ಮಾಡಿದರು. ನಾನು ಮುಖ್ಯನ್ಯಾಯಮೂರ್ತಿಯಾದ ಮೇಲೆ ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ನನ್ನಲ್ಲಿ ಸಮ್ಮಿಶ್ರ ಭಾವ ಇದೆ. ಈ ಹೊತ್ತಲ್ಲಿ ಖುಷಿಯಿಂದಲೇ ನ್ಯಾಯಾಲಯ ಬಿಟ್ಟು ಹೋಗುತ್ತಿದ್ದೇನೆ ಎಂದೂ ಹೇಳಿದ್ದರು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ: ಕಡಿಮೆ ಮಾತು, ಖಚಿತ ನಿಲುವು- ಇದು ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಕಾರ್ಯಶೈಲಿ

ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಸ್ಥಾನಕ್ಕೆ ಎನ್​.ವಿ.ರಮಣ ಹೆಸರನ್ನು ಶಿಫಾರಸು ಮಾಡಿದ ಸಿಜಿಐ ಬೋಬ್ಡೆ..; ಕೇಂದ್ರ ಸಚಿವರ ಪತ್ರಕ್ಕೆ ಉತ್ತರ

Justice NV Ramana Takes Oath As Next CJI Of Supreme Court of India

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada