ಕೆಆರ್​ಎಸ್ ಬಿರುಕು ಬಿಟ್ಟಿರುವುದನ್ನು ಸಾಬೀತುಪಡಿಸಿ, ಇಲ್ಲವೇ ಕ್ಷಮೆಯಾಚಿಸಿ: ಸವಾಲೆಸೆದ ಸಂಸದ ಪ್ರತಾಪ್ ಸಿಂಹ

| Updated By: guruganesh bhat

Updated on: Jul 09, 2021 | 6:22 PM

ನಾನು ಯಾವ ಭಾಗದ ಸಂಸದ ಎಂಬ ಗೊಂದಲ ಜನರಿಗಿಲ್ಲ. ಯಾಕೆಂದ್ರೆ ನಾನು ಮೈಸೂರಲ್ಲೇ ವಾಸವಿದ್ದೇನೆ. ಆದರೆ ಮಂಡ್ಯ ಜನರಿಗೆ ಸಂಸದರ ಬಗ್ಗೆ ಗೊದಲವಿರಬಹುದು. ಏಕೆಂದರೆ ಅವರು ಯಾರಿಗೆ ಮತ ಹಾಕಿದ್ದಾರೋ ಅವರು ಮಂಡ್ಯದಲ್ಲಿ ಇದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಕೆಆರ್​ಎಸ್ ಬಿರುಕು ಬಿಟ್ಟಿರುವುದನ್ನು ಸಾಬೀತುಪಡಿಸಿ, ಇಲ್ಲವೇ ಕ್ಷಮೆಯಾಚಿಸಿ: ಸವಾಲೆಸೆದ ಸಂಸದ ಪ್ರತಾಪ್ ಸಿಂಹ
ಪ್ರತಾಪ್​ ಸಿಂಹ, ಸುಮಲತಾ ಅಂಬರೀಶ್
Follow us on

ಕೊಡಗು: ಕೆಆರ್​ಎಸ್ ಆನೇಕಟ್ಟು ಬಿರುಕು ಬಿಟ್ಟಿದೆ ಎಂಬುದು ಗಂಭೀರ ವಿಚಾರ. ಅದು ಬಿರುಕು ಬಿಟ್ಟಿರುವುದಕ್ಕೆ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಿ ಎಂದು ಸಂಸದೆ ಸುಮಲತಾ​ ಅಂಬರೀಶ್​ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಕೆಆರ್​ಎಸ್ ಜಲಾಶಯ ಮಂಡ್ಯ ಸಂಸದರ ಆಸ್ತಿಯಲ್ಲ. ಕೆಆರ್​ಎಸ್ ಕಟ್ಟೆಗೆ ನೀರು ಬರುವುದು ಕೊಡಗಿನಿಂದ. ಕೆಆರ್​ಎಸ್​ ಜಲಾಶಯ ಎಲ್ಲರಿಗೂ ಸೇರಿದೆ. ಅದು ಬಿರುಕು ಬಿಟ್ಟಲ್ಲಿ ಅದನ್ನು ಸಾಬೀತುಪಡಿಸಿ.ಇಲ್ಲದೇ ಇದ್ದಲ್ಲಿ ಹೇಳಿಕೆ ನೀಡಿದ್ದು ತಪ್ಪಾಗಿದೆ ಎಂದು ಕ್ಷಮೆ ಕೇಳುವಂತೆಯೂ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ನಾನು ಯಾವ ಭಾಗದ ಸಂಸದ ಎಂಬ ಗೊಂದಲ ಜನರಿಗಿಲ್ಲ. ಯಾಕೆಂದ್ರೆ ನಾನು ಮೈಸೂರಲ್ಲೇ ವಾಸವಿದ್ದೇನೆ. ಆದರೆ ಮಂಡ್ಯ ಜನರಿಗೆ ಸಂಸದರ ಬಗ್ಗೆ ಗೊದಲವಿರಬಹುದು. ಏಕೆಂದರೆ ಅವರು ಯಾರಿಗೆ ಮತ ಹಾಕಿದ್ದಾರೋ ಅವರು ಮಂಡ್ಯದಲ್ಲಿ ಇದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಟೀಕಿಸಿದ ಸಂಸದ ಪ್ರತಾಪ್ ಸಿಂಹ, ನೀವು ಅದನ್ನು ಕಣ್ಣಾರೆ ಕಂಡಿದ್ದರೆ ಸಿಎಂ ಬಳಿ ನಿಯೋಗ ತೆರಳಿ ಪರಿಹಾರ ಕೇಳಿ. ಬಿರುಕು ಬಿಟ್ಟಿರುವುದಕ್ಕೆ ಸಾಕ್ಷ್ಯ ಗಳಿದ್ದರೆ ಬಹಿರಂಗಪಡಿಸಿ ಎಂದು ಸಂಸದೆ ಸುಮಲತಾ ಅಂಬರೀಶ್​ಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: 

ಅಕ್ರಮ ಗಣಿಗಾರಿಕೆ ನಿಲ್ಲದಿದ್ದಲ್ಲಿ ನಾನೂ ಸುಮಲತಾರ ಹಾದಿಯಲ್ಲೇ ಹೋರಾಡುವೆ: ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ 

ಪ್ರತಾಪ್​ ಸಿಂಹ ಜೆಡಿಎಸ್​ ಸೇರಿದ್ರಾ? ಅವರು ಮೈಸೂರಿಗೆ ಸಂಸದರೋ? ಮಂಡ್ಯಕ್ಕೋ?; ಸುಮಲತಾ

(MP Pratap Simha Challenges If KRS Dam cracked, prove it or apologize to MP Sumalatha Ambarish)

Published On - 5:57 pm, Fri, 9 July 21