ಶಾಸಕ ರೇಣುಕಾಚಾರ್ಯ ಆರೋಗ್ಯದಲ್ಲಿ ಏರುಪೇರು; ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ನಿರ್ಧಾರ

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಇಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗುವುದಕ್ಕೆ ನಿರ್ಧಾರ ಮಾಡಲಾಗಿದೆ.

ಶಾಸಕ ರೇಣುಕಾಚಾರ್ಯ ಆರೋಗ್ಯದಲ್ಲಿ ಏರುಪೇರು; ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ನಿರ್ಧಾರ
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ
Updated By: Digi Tech Desk

Updated on: Apr 19, 2021 | 1:37 PM

ದಾವಣಗೆರೆ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಇಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗುವುದಕ್ಕೆ ನಿರ್ಧಾರ ಮಾಡಲಾಗಿದೆ. ಮೈ ಕೈ ನೋವು, ಸ್ವಲ್ಪ ಸುಸ್ತು ಇದ್ದ ಹಿನ್ನೆಲೆ ಜಿಲ್ಲಾ ಆಸ್ಪತ್ರೆ ಗೆ ಭರ್ತಿ ಆಗಲು ವೈದ್ಯರು ಸಲಹೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಚಾರ್ಯ ಸದ್ಯ ಹೊನ್ನಾಳಿಯ ಮನೆಯಲ್ಲಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಿನ್ನೆಯಿಂದ ಹೊನ್ನಾಳಿಯ ತಮ್ಮ ಸ್ವಗೃಹದಲ್ಲಿ ಶಾಸಕ ರೇಣುಕಾಚಾರ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ರೇಣುಕಾಚಾರ್ಯ ನಿವಾಸ ಇದೆ.

ಇನ್ನೆರಡು ಕೊವಿಡ್ ಟೆಸ್ಟ್ ಸೆಂಟರ್ ತೆರೆಯುವಂತೆ ಆಗ್ರಹ:

ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್​ ಕೊಡಲು ನೂರಾರು ಜನರು ಬರುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಟೆಸ್ಟ್​ ಸೆಂಟರ್ ಇದೆ. ಬೆಳಿಗ್ಗೆಯಿಂದ ನೂರಾರು ಜನ ಕ್ಯೂ ನಲ್ಲಿ ನಿಂತು ಟೆಸ್ಟ್​ ಕೊಡುತ್ತಿದ್ದಾರೆ. ಇನ್ನೂ ಎರಡು ಟೆಸ್ಟಿಂಗ್ ಸೆಂಟರ್ ಆರಂಭಿಸುವಂತೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ:
‘1928ರಲ್ಲಿ ಈ ಕೊರೊನಾ ಬಂದು ಹೋಗಿದೆ, ಸುಖಾಸುಮ್ಮನೆ ಯಾರನ್ನು ಕರೆದೊಯ್ಯುವುದಿಲ್ಲ’

Published On - 1:26 pm, Mon, 19 April 21