ಬೆಂಗಳೂರು, ನ.6: ಗ್ಯಾರಂಟಿ ಯೋಜನೆಗಳ ಜಾರಿ ಬಳಿಕ ಕರ್ನಾಟಕ ಸರ್ಕಾರವು ಜನರ ಹಣ ಉಳಿತಾಯಕ್ಕೆ ಎಂಎಸ್‌ಐಎಲ್ ಚಿಟ್ ಫಂಡ್ (MSIL Chit Fund) ಯೋಜನೆ ಜಾರಿ ಮಾಡಲು ಮುಂದಾಗಿದೆ. ಆ ಮೂಲಕ ಬೇರೆ ಕಡೆ ಹಣ ಹಾಕಿ ಮೊಸ ಹೋಗುವುದನ್ನು ತಡೆಯಲು ಹೊಸ ಪ್ಲ್ಯಾನ್ ಮಾಡಿಕೊಂಡಿದೆ.
ಜನರು ಹಣ ಉಳಿತಾಯ ಮಾಡುವ ಯೋಜನೆ ಇದಾಗಿದ್ದು, ಸರ್ಕಾರ ಈಗಾಗಲೇ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. ಎಸ್‌ಐಎಲ್‌ನಲ್ಲಿ 10 ಸಾವಿರದ ವರೆಗೆ ಚಿಟ್‌ಫಂಡ್ ವ್ಯವಹಾರ ನಡೆಸಬಹುದು.
ವ್ಯವಹಾರದಲ್ಲಿ ಈಗಾಗಲೇ ನೆರೆಯ ರಾಜ್ಯ ಕೇರಳ ಯಶ್ವಸಿಯಾಗಿದ್ದು, ಸುಮಾರು 27 ಸಾವಿರ ಕೋಟಿಯಷ್ಟು ವ್ಯವಹಾರವಿದೆ. ಕರ್ನಾಟಕದಲ್ಲಿ 22 ಸಾವಿರ ಗ್ರಾಹಕರು 305 ಕೋಟಿ ಮಾತ್ರ ಇದೆ. ಹೀಗಾಗಿ ಇದನ್ನ ಉತ್ತೇಜಿಸಲು ಸರ್ಕಾರ ಹೊಸ ಪ್ಲ್ಯಾನ್ ರೂಪಿಸಿದೆ. ಇದು ಶಿಕ್ಷಣ, ಆರೋಗ್ಯಕ್ಕೆ ಅನುಕೂಲವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸ್ತಾರೋ? ಸಂಚಲನ ಮೂಡಿಸಿದ ಪ್ರಧಾನಿ ಮೋದಿ ಹೇಳಿಕೆ
ಚಿಟ್ ಫಂಡ್ಗೆ ಗ್ಯಾರೆಂಟಿ ಹಣ ಬಳಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯ ಆ ರೀತಿ ಯಾವುದೇ ಯೋಜನೆಗಳಿಲ್ಲ. ಟಿಬಿಟಿ ಮೂಲಕ ನಾವು ದುಡ್ಡು ಕಳಿಸುತ್ತೇವೆ. ಈ ಯೋಜನೆ ಹಾಗೇ ಮುಂದುವರಿಯುತ್ತದೆ. ಆ ಹಣವನ್ನ ಫಲಾನುಭವಿಗಳು ಅದ್ಬಳಕೆ ಮಾಡಿಕೊಳ್ಳಬೇಕು. ಅದು ಅವರಿಗೆ ಬಿಟ್ಟ ವಿಚಾರ. ಚಿಟ್ ಫಂಡ್ಗೆ ಗ್ಯಾರೆಂಟಿ ಹಣ ಬಳಕೆಗೆ ಯಾವ ತೀರ್ಮಾನವನ್ನೂ ಮಾಡಿಲ್ಲ ಎಂದರು.
ಈ ಬಗ್ಗೆ ಟ್ವೀಟ್ ಮಾಡಿದ ಸಚಿವ ಎಂಬಿ ಪಾಟೀಲ್, ಎಂಎಸ್‌ಐಎಲ್ ಚಿಟ್ಸ್ ಅನ್ನು ಭಾರತದ ಪ್ರಮುಖ ಚಿಟ್ ಫಂಡ್ ಮಾಡುವ ಮೂಲಕ ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಕರ್ನಾಟಕವು ಮಹತ್ತರ ಪ್ರಯಾಣ ಆರಂಭಿಸುತ್ತಿದೆ ಎಂದಿದ್ದಾರೆ.
MSIL ವಿಶ್ವಾಸಾರ್ಹ ಬ್ರ್ಯಾಂಡ್, ಸುಭದ್ರ, ಸುರಕ್ಷಿತ ಮತ್ತು ಪ್ರಗತಿ ವರ್ಧಕ, AI ಪ್ಲಾಟ್ ಫಾರ್ಮ್ನಲ್ಲಿ ಇರಲಿದೆ, ಕೆಲವೇ ವರ್ಷಗಳಲ್ಲಿ ರೂ. 300 ಕೋಟಿಯಿಂದ 10,000 ಕೋಟಿ ವಹಿವಾಟು ತಲುಪುವ ಗುರಿ ಹೊಂದಲಾಗಿದೆ ಎಂದು ಎಂಬಿ ಪಾಟೀಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ