ತಮ್ಮ ಸಿಎಂ ಕುರ್ಚಿ ಬಗ್ಗೆ ಅನುಮಾನ ವ್ತಕ್ತಪಡಿಸಿದ ಮೋದಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಲೂಟಿ ಹೊಡೆಯುತ್ತಿದ್ದವರು ಯಾರು? 40% ಅಂತಾ ಯಾರು ಹೇಳಿದ್ದು. ಹಿಂದಿನ ಸರ್ಕಾರದ ಆರೋಪದ ಬಗ್ಗೆ ತನಿಖೆ ಮಾಡಿಸುತ್ತಿದ್ದೇವೆ. ಪ್ರಧಾನಿ ದಾಖಲಾತಿ ಇಟ್ಟುಕೊಂಡು ಹೇಳಲಿ, ಸುಳ್ಳು ಹೇಳಬಾರದು. ಗುಪ್ತಚರ, ಸಿಬಿಐ ಎಲ್ಲವೂ ಅವರ ಬಳಿಯೇ ಇದೆ, ತನಿಖೆ ಮಾಡಿಸಲಿ. ಕೇಂದ್ರ ಸರ್ಕಾರಕ್ಕೆ ಇನ್ನೂ ಬರ ಪರಿಹಾರ ಕೂಡ ಕೊಡಲು ಆಗಿಲ್ಲ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಎಂ, ಡಿಸಿಎಂ ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ತಮ್ಮ ಸಿಎಂ ಕುರ್ಚಿ ಬಗ್ಗೆ ಅನುಮಾನ ವ್ತಕ್ತಪಡಿಸಿದ ಮೋದಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ
Follow us
Anil Kalkere
| Updated By: ವಿವೇಕ ಬಿರಾದಾರ

Updated on:Nov 06, 2023 | 3:18 PM

ಬೆಂಗಳೂರು ನ.06: ನವೆಂಬರ್ 05 ರಂದು ಮಧ್ಯಪ್ರದೇಶದ ಖಂಡವಾದಲ್ಲಿ ನಡೆದಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರ್ನಾಟಕದ ಕಾಂಗ್ರೆಸ್ ಸರ್ಕಾರ (Congress Government) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ​ ಗುಡುಗಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಭಾಷಣ ಮಾಡಿದ್ದಾರೆ. ದಾಖಲಾತಿ ಇಟ್ಟುಕೊಂಡು ಮಾತನಾಡಲಿ, ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ಕೊಡುವುದಕ್ಕೆ ಆಗಿಲ್ಲ. ಐದು ಗ್ಯಾರಂಟಿ ಜಾರಿ ಮಾಡಲ್ಲ ಎಂದಿದ್ದರು, ನಾವು ಜಾರಿ ಮಾಡಿಲ್ವಾ? ಈ ರೀತಿಯ ಹೇಳಿಕೆ ಪ್ರಧಾನಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಲೂಟಿ ಹೊಡೆಯುತ್ತಿದ್ದವರು ಯಾರು? 40% ಅಂತಾ ಯಾರು ಹೇಳಿದ್ದು. ಹಿಂದಿನ ಸರ್ಕಾರದ ಆರೋಪದ ಬಗ್ಗೆ ತನಿಖೆ ಮಾಡಿಸುತ್ತಿದ್ದೇವೆ. ಪ್ರಧಾನಿ ದಾಖಲಾತಿ ಇಟ್ಟುಕೊಂಡು ಹೇಳಲಿ, ಸುಳ್ಳು ಹೇಳಬಾರದು. ಗುಪ್ತಚರ, ಸಿಬಿಐ ಎಲ್ಲವೂ ಅವರ ಬಳಿಯೇ ಇದೆ, ತನಿಖೆ ಮಾಡಿಸಲಿ. ಕೇಂದ್ರ ಸರ್ಕಾರಕ್ಕೆ ಇನ್ನೂ ಬರ ಪರಿಹಾರ ಕೂಡ ಕೊಡಲು ಆಗಿಲ್ಲ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಎಂ, ಡಿಸಿಎಂ ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದರು.

ನಮ್ಮ ಕೆಲಸ ಸಹಿಸೋಕೆ ಆಗದೆ ಕಿಡಗೇಡಿ ಮಾತುಗಳನ್ನು ಆಡಿದ್ದಾರೆ

ಇನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪೈಪೋಟಿ ಮೇಲೆ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ ನಮ್ಮ ಸರ್ಕಾರವನ್ನು ಅಲುಗಾಡಿಸಲು ಈ ಹಿಂದೆ ಆಪರೇಷನ್ ಕಮಲ ಎಲ್ಲ ಮಾಡಿದ್ದಾರೆ. ಆ ರೀತಿಯ ಆಲೋಚನೆ ಇರಬಹುದೆಂದು ಅವರ ಮಾತಿನಿಂದ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹೇಳಿಕೆಗೆ ಸತೀಶ್​ ಜಾರಕಿಹೊಳಿ ಜಾಣತನದ ಉತ್ತರ

ಆದರೆ (ಬಿಜೆಪಿ) ಅವರ ಯಾವ ಪ್ರಯತ್ನವೂ ಇಡೇರುವದಿಲ್ಲ. ನಮ್ಮೆಲ್ಲರಲ್ಲೂ ಸಹಮತವಿದೆ, ನಾವು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಇವತ್ತು ಮುಖ್ಯವಾಗಿ ಆಗಬೇಕಿರುವದು ಜನಗಳ ಕೆಲಸ. ಜನಗಳ ಕೆಲಸದ ಕಡೆ ನಾವು ಗಮನಕೊಡಬೇಕು. ಅವರ (ಬಿಜೆಪಿ) ಆಪರೇಷನ್ ಮಾಡುತ್ತಾರೋ, ಇನ್ನೊಂದು ಮಾಡುತ್ತಾರೋ ಮಾಡಲಿ, ಅವರನ್ನು ಎದುರಿಸುವ ಶಕ್ತಿ ನಮಗೆ ಹಾಗೂ ನಮ್ಮ ಪಕ್ಷಕ್ಕೆ ಇದೆ ಎಂದರು.

ಜನ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ, ನಾವು ಜನರಿಗೆ ಉತ್ತರ ಕೊಡಬೇಕು. ಬಿಜೆಪಿಯವರು ಅಂಬಾನಿ, ಅದಾನಿ ಅಂತವರಿಗೆ ಅನುಕೂಲ ಮಾಡುತ್ತಾರೆ. ನಾವು ಅಪ್ಪಣ್ಣನಿಗೆ, ತಿಮ್ಮಣ್ಣನಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡುತ್ತೇವೆ. ಇದನ್ನು ಸಹಿಸಲು ಆಗದೆ ಈ ರೀತಿಯ ಕಿಡಿಗೇಡಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು. ಅವರ ಮಾತುಗಳಿಂದ ನಾವು ದೃತಿಗೆಡಲ್ಲ, ನಮ್ಮ ಗುರಿಯಿಂದಲೂ ನಾವು ಅಲುಗಾಡಲ್ಲ. ದುಡಿಯೋ ವರ್ಗದ ಜನರ ತಲೆಯ ಮೇಲೆ ಯಾರೂ ಹೆಜ್ಜೆ ಇಡಬಾರದು. ದುಡಿಯೋ ವರ್ಗದ ಜನರ ಪರವಾಗಿ ಕೆಲಸ‌ಮಾಡುವದು ನಮ್ಮ ಮೊದಲ ಆದ್ಯತೆ. ಅದು ಅವರಿಗೆ ಹಿಡಿಸದೇ ಇರಬಹುದು, ಅದಕ್ಕಾಗಿ ಅವರು (ಬಿಜೆಪಿ) ನಮ್ಮ ಸರ್ಕಾರವನ್ನು ಕಿತ್ತಾಕುವ ಪ್ರಯತ್ನ ಮಾಡುತ್ತಿರಬಹುದು. ಬಡವರು ನಮಗೆ ಆಶಿರ್ವಾದ ಮಾಡಿದ್ದಾರೆ, ಆಶಿರ್ವಾದ ನಮ್ಮ ಕೈ ಹಿಡಿಯುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Mon, 6 November 23