ಬೆಂಗಳೂರು, ಜೂನ್.06: ಬಹುಕೋಟಿ ಬಿಟ್ ಕಾಯಿನ್ ಹಗರಣ (Bitcoin) ಪ್ರಕರಣದ ಆರೋಪಿಯಾಗಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದಾಗಿ (Sriki) ಆತನ ಗರ್ಲ್ ಫ್ರೆಂಡ್ಗೂ ಸಂಕಷ್ಟ ಎದುರಾಗಿದೆ. ಎಸ್‌ಐಟಿ (SIT) ಅಧಿಕಾರಿಗಳು ಆರೋಪಿ ಶ್ರೀಕಿ ಗರ್ಲ್ ಫ್ರೆಂಡ್ ಪೂಜಾ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ತುರ್ತಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ನಲ್ಲಿ (Notice) ತಿಳಿಸಲಾಗಿದೆ.
ಶ್ರೀಕಿ ಬಿಟ್ ಕಾಯಿನ್ ವಹಿವಾಟು, ಶ್ರೀಕಿಯಿಂದ ಕಾರು, ಮನೆ ಪಡೆದುಕೊಂಡಿರೋ ಹಿನ್ನೆಲೆ ಶ್ರೀಕಿ ಗರ್ಲ್ ಫ್ರೆಂಡ್ ಪೂಜಾ ಭಟ್ಗೆ ನೋಟಿಸ್ ನೀಡಲಾಗಿದೆ. ಸದ್ಯ ರಾಜಸ್ಥಾನದಲ್ಲಿ ಇರುವ ಪೂಜಾ ಭಟ್ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಬೇಕಿದೆ.
2017ರಲ್ಲಿ ಆರೋಪಿ ಶ್ರೀಕಿ ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್‌ಗಳನ್ನು (ಮಾರುಕಟ್ಟೆ ಮೌಲ್ಯ ₹32.48 ಕೋಟಿ ಮೌಲ್ಯ) ಕಳ್ಳತನ ಮಾಡಿದ್ದ. ಈ ಸಂಬಂಧ ಸದ್ಯ ಎಸ್‌ಐಟಿ ಅಧಿಕಾರಿಗಳು, ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕಿ ಬಂಧನ
ಇನ್ನು ಈ ಘಟನೆ ಸಂಬಂಧ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿ ನಿರ್ದೇಶಕ ಬಿ.ವಿ. ಹರೀಶ್ ಅವರು ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊದಲಿಗೆ ಆರೋಪಿ ಯಾರು ಎಂದು ಪತ್ತೆಯಾಗದ ಹಿನ್ನೆಲೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪರಿಶೀಲಿಸಿದಾಗ, ಶ್ರೀಕಿಯೇ ಆರೋಪಿ ಎಂಬುದು ಸಾಭೀತಾಗಿದೆ.
ಮತ್ತೊಂದೆಡೆ ಈ ಪ್ರಕರಣದ ವಿಚಾರಣೆ ವೇಳೆ ಕೆಲವು ಬಾರಿ ಶ್ರೀಕಿ ಗೈರಾಗಿದ್ದ. ಅಲ್ಲದೆ ತಲೆಮರೆಸಿಕೊಂಡು ಸುತ್ತಾಡುತ್ತಿದ್ದ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ವೊಂದರಲ್ಲಿ ಆತ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅದೇ ಹೋಟೆಲ್‌ನಲ್ಲಿಯೇ ಆತನನ್ನು ಒಂದು ತಿಂಗಳ ಹಿಂದೆ ಬಂಧಿಸಲಾಗಿದೆ. ಸದ್ಯ ಇದೀಗ ರಾಜಸ್ಥಾನದಲ್ಲಿರುವ ಶ್ರೀಕಿ ಗರ್ಲ್ ಫ್ರೆಂಡ್ ಪೂಜಾ ಭಟ್ಗೆ ನೋಟಿಸ್ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ