ರಾಯಚೂರು: ರಾಜಕೀಯ ವೈಷಮ್ಯ ಹಿನ್ನೆಲೆ ಇಬ್ಬರ ನಡುವೆ ಜಗಳವಾಗಿ ಓರ್ವನ ಕೊಲೆಯಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ (ಫೆಬ್ರವರಿ 15) ಜಗದೀಶ್ ಮತ್ತು ಶರಣಬಸವ ಮಧ್ಯೆ ಮಾರಾಮಾರಿ ನಡೆದಿತ್ತು. ಹೊಡೆದಾಟದಲ್ಲಿ ಗುಡದನಾಳದ ಶರಣಬಸವ (35) ಎಂಬುವವರು ಮೃತಪಟ್ಟಿದ್ದಾರೆ. ಜಗದೀಶ್ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರಕರಣ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತನ ತಾಯಿ ಹಣಂತಮ್ಮ ಹೊನ್ನಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದರು. ಹನಮಂತಮ್ಮನ ವಿರುದ್ದ ಸ್ಪರ್ಧಿಸಿದ್ದ ಪಾರ್ವತಿ ಸೋತಿದ್ದರು. ಇದೇ ವೈಷಮ್ಯದಿಂದ ಕಳೆದ ರಾತ್ರಿ ಘರ್ಷಣೆ ನಡೆದಿತ್ತು. ಕೊಲೆ ಆರೋಪಿ ಜಗದೀಶ್ ಸೇರಿ 10 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಿಕ್ಷುಕರಿಗೆ ಶಾಕ್ ಕೊಟ್ಟ ಪೊಲೀಸ್ ಕಮಿಷನರ್ ಪಂತ್; ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡಿದ್ರೆ ಅಂದರ್ ಆಗ್ತೀರಿ