Sand Mining new rules | ಮರಳು ಗಣಿಗಾರಿಕೆ ನಿಯಮ ಸದ್ಯದಲ್ಲೇ ಸರಳವಾಗಲಿದೆ; ಎತ್ತಿನಗಾಡಿ, ಟ್ರ್ಯಾಕ್ಟರ್​​ನಲ್ಲಿಯೂ ಮರಳು ತರಬಹುದು – ಗಣಿ ಸಚಿವ ಮುರುಗೇಶ್ ನಿರಾಣಿ

|

Updated on: Feb 10, 2021 | 4:01 PM

Sand Mining new rules | ಸಚಿವ ಮುರುಗೇಶ್ ನಿರಾಣಿ ಮಹಾರಾಷ್ಟ್ರದಲ್ಲಿ ಗಾಡಿ, ಬೈಕ್ ಜೊತೆಗೆ ಕತ್ತೆಗಳಲ್ಲಿ ಮರಳನ್ನು ಸಾಗಿಸಿದರೂ ಎಫ್ಐಆರ್ ಹಾಕುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅವುಗಳಿಗೆ ಅವಕಾಶ ನೀಡಬಾರದೆಂದು ಚಿಂತನೆ ನಡೆಸಿದ್ದೇವೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗಣಿ ನೀತಿಗಳನ್ನ ಸರಳೀಕರಣಗೊಳಿಸಿದ್ದೇವೆ ಎಂದು ಹೇಳಿದರು

Sand Mining  new rules | ಮರಳು ಗಣಿಗಾರಿಕೆ ನಿಯಮ ಸದ್ಯದಲ್ಲೇ ಸರಳವಾಗಲಿದೆ; ಎತ್ತಿನಗಾಡಿ, ಟ್ರ್ಯಾಕ್ಟರ್​​ನಲ್ಲಿಯೂ ಮರಳು ತರಬಹುದು - ಗಣಿ ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ
Follow us on

ಬೆಂಗಳೂರು: ಮರಳು ಗಣಿಗಾರಿಕೆಗಿದ್ದ ನಿಯಮಗಳನ್ನು ಸರಳಗೊಳಿಸಿದ್ದೇವೆ ಎಂದು ವಿಕಾಸಸೌಧದಲ್ಲಿ ಸ್ಪಷ್ಟಪಡಿಸಿದ ಗಣಿ ಸಚಿವ ಮುರುಗೇಶ್ ನಿರಾಣಿ, ಮರಳು ಸುಲಭವಾಗಿ ಸಿಗಲು 2021ರ ನೂತನ ಗಣಿ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಹೇಳಿದರು. ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ತರಲು ಕಡಿವಾಣ ಹಾಕಲಾಗಿತ್ತು. ಇದರಿಂದ ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಮರಳಿನ ಸಮಸ್ಯೆ ಎದುರಾಗಿತ್ತು. ಆದರೆ ಈಗ ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ಬಳಸಲು ಅವಕಾಶ ನೀಡುತ್ತೇವೆ. ಎತ್ತಿನಗಾಡಿ, ಟ್ರ್ಯಾಕ್ಟರ್​ಗಳಲ್ಲಿ ಮರಳನ್ನು ತರಲು ಅವಕಾಶ ನಿಡುತ್ತೇವೆ ಎಂದರು.

ಜನಸಾಮಾನ್ಯರಿಗೆ ಅನುಕೂಲ
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಹಾರಾಷ್ಟ್ರದಲ್ಲಿ ಗಾಡಿ, ಬೈಕ್ ಜೊತೆಗೆ ಕತ್ತೆಗಳಲ್ಲಿ ಮರಳನ್ನು ಸಾಗಿಸಿದರೂ ಎಫ್ಐಆರ್ ಹಾಕುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅವುಗಳಿಗೆ ಅವಕಾಶ ನೀಡಬಾರದೆಂದು ಚಿಂತನೆ ನಡೆಸಿದ್ದೇವೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗಣಿ ನೀತಿಗಳನ್ನ ಸರಳೀಕರಣಗೊಳಿಸಿದ್ದೇವೆ ಎಂದು ಹೇಳಿದರು.

ಮೈನಿಂಗ್ ಯೂನಿವರ್ಸಿಟಿ ತರುವ ನಿರ್ಧಾರ
ಗಣಿ ಇಲಾಖೆಯಲ್ಲಿ ಗಣಿ ಸಮಸ್ಯೆ ಬಗ್ಗೆ ಸಾವಿರಾರು ಪ್ರಕರಣಗಳಿವೆ. ಎಲ್ಲಾ ಪ್ರಕರಣಗಳ ಬಗ್ಗೆ ಗಮನಹರಿಸಿ ಅದಾಲತ್ ಮೂಲಕ ಬಗೆ ಹರಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ. ಶೀಘ್ರವೇ ಮೈನಿಂಗ್ ಅದಾಲತ್ ಜಾರಿಗೆ ತರುತ್ತೇವೆ ಎಂದರು. ಅಲ್ಲದೇ ಒಂದು ಮೈನಿಂಗ್ ಯೂನಿವರ್ಸಿಟಿ ತರುವ ನಿರ್ಧಾರವಿದೆ. ಜಾರ್ಖಂಡ್​ನ ದರ್ಬಾಂಗ್​ನಲ್ಲಿ ಒಂದು ವಿವಿ ಇದೆ. ಅದೇ ರೀತಿ ರಾಜ್ಯದಲ್ಲೂ ವಿಶ್ವವಿದ್ಯಾಲಯ ತರುತ್ತೇವೆ. ಮೈನಿಂಗ್​ನಿಂದ ಪ್ರಸ್ತುತ ₹ 3,700 ಕೋಟಿ ರಾಯಲ್ಟಿ ಬರುತ್ತಿದೆ. ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಉತ್ತರ ಕರ್ನಾಟಕ, ಕರಾವಳಿಯಲ್ಲಿ ಒಂದೊಂದು ನೀತಿ ಇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಹೊಸ ಮರಳು ನೀತಿಯನ್ನು ಜಾರಿಗೆ ತರುತ್ತೇವೆ. (Sand Mining new rules)  ಸದ್ಯ ಈಗ ಮೂರು ಕಮಿಟಿಗಳನ್ನು ರಚನೆ ಮಾಡಿದ್ದೇವೆ. ಆಂಧ್ರಪ್ರದೇಶಕ್ಕೆ ಇಂದು ಒಂದು ಕಮಿಟಿ ಹೋಗಿದೆ. ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಿ ನಂತರ ಅಲ್ಲಿನ ನೀತಿಯ ಬಗ್ಗೆ ವರದಿಯನ್ನು ನೀಡಲಿದೆ ಎಂದರು. ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು. ಇದರಿಂದ ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಮರಳು, ಮಣ್ಣು, ಗರಸು ಎಂದು ವಿಭಾಗಿಸುತ್ತೇವೆ. ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ CM ಆಗಲು ಗುಲಾಂ ನಬಿ ಆಜಾದ್ ಕಾರಣರಾಗಿದ್ರು, ಮುಂದೆ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್ ಡಿ ದೇವೇಗೌಡ

Published On - 3:36 pm, Wed, 10 February 21