ಹತ್ತು ರೂಪಾಯಿ ಲಂಚ ಪಡೆದಿದ್ದು ಸಾಬೀತಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಮುರುಗೇಶ್​ ನಿರಾಣಿ

| Updated By: Lakshmi Hegde

Updated on: Feb 27, 2021 | 6:46 PM

ನಮ್ಮ ಫೌಂಡೇಷನ್ ಮೂಲಕವೇ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಸ್ಥಿತಿಯಲ್ಲಿದ್ದೇವೆ. ಅಂತಹದ್ದರಲ್ಲಿ ಬೇರೆಯವರ ಬಳಿ ಲಂಚ ಕೇಳುವ ಸ್ಥಿತಿ ನನಗೆ ಬಂದಿಲ್ಲ. ಒಂದು ವೇಳೆ ಯಾರಾದರೂ ನನ್ನ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಹತ್ತು ರೂಪಾಯಿ ಲಂಚ ಪಡೆದಿದ್ದು ಸಾಬೀತಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಮುರುಗೇಶ್​ ನಿರಾಣಿ
ಸಚಿವ ಮುರುಗೇಶ್​ ನಿರಾಣಿ
Follow us on

ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸಿಡಿಮಿಡಿಗೊಂಡಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಕೊಪ್ಪಳದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ನಾವು ನಮ್ಮ ಫೌಂಡೇಷನ್ ಮೂಲಕ ₹5000 ಕೋಟಿ ವ್ಯವಹಾರ ನಡೆಸುತ್ತಿದ್ದೇವೆ. 75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ನನಗೆ ಯಾರಾದರೂ ₹10 ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೂ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಯಾರಾದರೂ ಸಾಬೀತು ಮಾಡಲಿ ಎಂದು ಬಹಿರಂಗ ಸವಾಲೆಸೆದಿದ್ದಾರೆ.

ನಮ್ಮ ಫೌಂಡೇಷನ್ ಮೂಲಕವೇ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಸ್ಥಿತಿಯಲ್ಲಿದ್ದೇವೆ. ಅಂತಹದ್ದರಲ್ಲಿ ಬೇರೆಯವರ ಬಳಿ ಲಂಚ ಕೇಳುವ ಸ್ಥಿತಿ ನನಗೆ ಬಂದಿಲ್ಲ. ಒಂದು ವೇಳೆ ಯಾರಾದರೂ ನನ್ನ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉದ್ಯಮಿಯಾಗಿ ₹5-10 ಲಕ್ಷಕ್ಕೆ ಬೇರೆಯವರಿಗೆ ಕೈ ಒಡ್ಡುವಂತಹ ದಯನೀಯ ಸ್ಥಿತಿಗೆ ಬಂದಿಲ್ಲ. ನನ್ನ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ₹10-20 ಲಕ್ಷದ ಬದಲಿಗೆ ₹10 ಕೊಟ್ಟಿರುವುದು ಸಾಬೀತಾದರೂ ಒಂದೇ ಒಂದೂ ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ಗುಡುಗಿದ್ದಾರೆ.

ಇಲಾಖೆಯಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೂ ನಾನು ಸಹಿಸುವುದಿಲ್ಲ. ಅಂತಹ ಮಾಹಿತಿ ಇದ್ದರೆ ನೇರವಾಗಿ ನನಗೆ ದೂರು ಕೊಡಬಹುದು. ಇಲಾಖೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಮುನ್ನಡೆಸುವ ಗುರಿ ಇಟ್ಟುಕೊಂಡಿದ್ದೇನೆ. ಇಡೀ ದೇಶವೇ ಹೊಲಸಾಗಿ ಹೋಗಿದೆ. ಯಾರು ಕೂಡ ಸ್ವಚ್ಛ ಮಾಡದಷ್ಟು ಕಲುಷಿತಗೊಂಡಿದೆ. ಮೊದಲು ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸಬೇಕು. ನಂತರ ಬೇರೆಯವರೆ ಬಗ್ಗೆ ಮಾತನಾಡಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ

ಮರಳು, ಕ್ರಷರ್ ಇಲ್ಲದೆ ನಮ್ಮ ಅಭಿವೃದ್ಧಿಯಾಗಲ್ಲ – ಗಣಿ ಸಚಿವ ಮರುಗೇಶ್ ನಿರಾಣಿ