ಯುಗಾದಿ ಹೊಸ ತೊಡಕು; ಮಾಂಸದಂಗಡಿಗಳ ಮುಂದೆ ಜನವೋ ಜನ

|

Updated on: Apr 14, 2021 | 8:40 AM

ರಾಮನಗರ, ಮಂಡ್ಯ, ಕೋಲಾರ, ಹುಬ್ಬಳ್ಳಿಯಲ್ಲೂ ಮಟನ್ ಖರೀದಿ ಜೋರಾಗಿದೆ. ಮಾಂಸ ಪ್ರಿಯರು ಬ್ಯಾಗ್ ಹಿಡಿದು ಸಾಲಲ್ಲಿ ನಿಂತಿದ್ದು ದೈಹಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಬಳಿ ಮಾರ್ಕಿಂಗ್ ಮಾಡಲಾಗಿದೆ. ಆದ್ರೆ ಕೆಲವೆಡೆ ಗ್ರಾಹಕರು ಮಾಸ್ಕ್ ಧರಿಸದೆ, ದೈಹಿಕ ಅಂತರ ಪಾಲಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ.

ಯುಗಾದಿ ಹೊಸ ತೊಡಕು; ಮಾಂಸದಂಗಡಿಗಳ ಮುಂದೆ ಜನವೋ ಜನ
ಪಾಪಣ್ಣ ಮಟನ್ ಸ್ಟಾಲ್
Follow us on

ಬೆಂಗಳೂರು: ಮಹಾಮಾರಿ ಕೊರೊನಾದ 2ನೇ ಅಲೆ ನಡುವೆಯೂ ಯುಗಾದಿ ಹಬ್ಬ ಸಂಭ್ರಮದಿಂದ ನಡೆದಿದೆ. ಇಂದು ಹೊಸ ತೊಡಕಿಗೆ ಗ್ರಾಹಕರು ಮಟನ್, ಚಿಕನ್ ಸ್ಟಾಲ್​ಗಳ ಮುಂದೆ ಕ್ಯೂ ನಿಂತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮಟನ್ ಶಾಪ್​ಗಳ ಮುಂದೆ ಗ್ರಾಹಕರು ನಿಲ್ಲಲು ಸಾಮಾಜಿಕ ಅಂತಕ ಕಾಪಾಡಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಯುಗಾದಿ ಮರುದಿನ ಹೊಸ ತಡಕು ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಪಾಪಣ್ಣ ಮಟನ್ ಸ್ಟಾಲ್ ಎದುರು ಬೆಳಂ ಬೆಳಗ್ಗೆ ನೂರಾರು ಜನರು ಕ್ಯೂನಲ್ಲಿ ನಿಂತಿದ್ದಾರೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ದೇಹದ ಉಷ್ಣತೆ ಪರೀಕ್ಷಿಸಿದ ಬಳಿಕವೇ ಮಟನ್ ಖರೀದಿಗೆ ಸಿಬ್ಬಂದಿ ಬಿಡುತ್ತಿದ್ದಾರೆ.

ರಾಮನಗರ, ಮಂಡ್ಯ, ಕೋಲಾರ, ಹುಬ್ಬಳ್ಳಿಯಲ್ಲೂ ಮಟನ್ ಖರೀದಿ ಜೋರಾಗಿದೆ. ಮಾಂಸ ಪ್ರಿಯರು ಬ್ಯಾಗ್ ಹಿಡಿದು ಸಾಲಲ್ಲಿ ನಿಂತಿದ್ದು ದೈಹಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಬಳಿ ಮಾರ್ಕಿಂಗ್ ಮಾಡಲಾಗಿದೆ. ಆದ್ರೆ ಕೆಲವೆಡೆ ಗ್ರಾಹಕರು ಮಾಸ್ಕ್ ಧರಿಸದೆ, ದೈಹಿಕ ಅಂತರ ಪಾಲಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ.

ಪಾಪಣ್ಣ ಮಟನ್ ಸ್ಟಾಲ್ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ಜನ

ತುಮಕೂರಿನಲ್ಲಿ ಇಂದು ಮಾಂಸ ಮಾರಾಟ ನಿಷೇಧ
ಇಂದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ ಚಿಕನ್, ಮಟನ್ ಮಾರಾಟ ನಿಷೇಧಿಸಲಾಗಿದೆ. ಹೊಸ ತಡಕು ಇದ್ದರೂ ಯಾವುದೇ ಮಾಂಸದಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ನಿನ್ನೆ ತಡರಾತ್ರಿಯೇ ನಗರ ವಾಸಿಗಳು ಚಿಕನ್, ಮಟನ್ ಖರೀದಿಸಿದ್ದಾರೆ.

ಕೋಲಾರದ ಮಾಂಸದ ಅಂಗಡಿಯಲ್ಲಿ ಕಂಡು ಬಂದ ದೃಶ್ಯ

ಬಿಕೋ ಎನ್ನುತ್ತಿದೆ ಮಾಂಸದಂಗಡಿಗಳು
ಮೈಸೂರು, ಚಿತ್ರದುರ್ಗ, ನೆಲಮಂಗಲ ಸೇರಿದಂತೆ ಕೆಲ ಕಡೆ ಮಾಂಸದ ಅಂಗಡಿಗಳಿಗೆ ಜನ ಬರ್ತಿಲ್ಲ. ಯುಗಾದಿ ಹೊಸ ತೊಡಕಿದ್ದರೂ ಮಾಂಸದ ಅಂಗಡಿಗಳು ಖಾಲಿ ಖಾಲಿ ಇವೆ. ಕೆಲ ಕಡೆ ಅಂಗಡಿಗಳೇ ತೆರೆದಿಲ್ಲ. ಸಾಮಾನ್ಯವಾಗಿ ನೂರಾರು ಜನರಿಂದ ತುಂಬಿರುತ್ತಿದ್ದ ಮಾಂಸದ ಅಂಗಡಿಗಳು ಈ ಬಾರಿ ಖಾಲಿ ಖಾಲಿ ಕಾಣುತ್ತಿವೆ. ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಕಡೆ ನಿರ್ಬಂಧ ಹೇರಳಾಗಿದೆ. ಮತ್ತೆ ಕೆಲ ಕಡೆ ಮಾಂಸ ಖರೀದಿಗೆ ಜನರೇ ಆಸಕ್ತಿ ತೋರಿಸುತ್ತಿಲ್ಲ.

(Mutton Stall Filled With People Over Ugadi Hosa Todaku in Karnataka)

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕು; ಮಾಂಸಾಹಾರ ಪ್ರಿಯರಿಗೆ ಭರ್ಜರಿ ಊಟ

Published On - 8:33 am, Wed, 14 April 21