ಬೆಂಗಳೂರು: ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ನಡೆಯುವ ಸೇವೆಗಳಿಗೆ ಇಲಾಖೆ ಅಸ್ತು ಎಂದಿದೆ. ಹೀಗಾಗಿ, ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆಯಿಂದ ಅನುಮತಿ ಸಿಕ್ಕಿದೆ. Muzrai department
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಈ ಕುರಿತು ಆದೇಶ ಪ್ರಕಟವಾಗಿದೆ. ಭಕ್ತಾದಿಗಳ ಭಾವನೆಗೆ ಧಕ್ಕೆ ಆಗದಿರಲೆಂಬ ಹಿನ್ನೆಲೆಯಲ್ಲಿ ಇಲಾಖೆ ಅನುಮತಿ ನೀಡಿದೆ.
ಕೊವಿಡ್ ಮಾರ್ಗಸೂಚಿ ಪಾಲಿಸುವ ಷರತ್ತು ಒಳಪಟ್ಟು ಆಯಾ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಆಚರಣೆಗೆ ಅವಕಾಶ ನೀಡಲಾಗಿದೆ. ಹಾಗಾಗಿ, ದೇವಸ್ಥಾನಗಳಲ್ಲಿನ ಸೇವೆಗಳು, ಜಾತ್ರೆ ಉತ್ಸವ ಪ್ರಕ್ರಿಯೆ, ಬ್ರಹ್ಮ ರಥೋತ್ಸವ, ಪ್ರಸಾದ ವಿತರಣೆ, ಅನ್ನ ದಾಸೋಹ ಮತ್ತು ಇತರೆ ಪೂಜಾ ಕೈಂಕರ್ಯಗಳನ್ನು ನಡೆಸಲು ಗ್ರೀನ್ ಸಿಗ್ನಲ್ ದೊರೆತಿದೆ. ಈ ಬಗ್ಗೆ, ಎಲ್ಲಾ ಜಿಲ್ಲಾ ಡಿ.ಸಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.