ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿದೆ: ಶಿದ್ದರಾಮಯ್ಯ
ಶಿಥಿಲಗೊಂಡಿರುವ ಸರ್ಕಾರೀ ಶಾಲಾ ಕಾಲೇಜು ಕಟ್ಟಡಗಳು ದುರಸ್ತಿ, ಹೊಸ ಕಟ್ಟಡಗಳು, ಅಗತ್ಯವಿರುವ ಲ್ಯಾಬ್ ಗಳು, ಶೌಚಾಲಯ, ಕುಡಿಯುವ ನೀರು ಮೊದಲಾದ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಕಳೆದ ಅಯವ್ಯಯ ಪಟ್ಟಿಯಲ್ಲಿ 600 ಕೋಟಿ ರೂ. ಮೀಸಲಿಡಲಾಗಿತ್ತು, ಪ್ರಸಕ್ತ ಸಾಲಿನಲ್ಲಿ 850 ಕೋಟಿ ರೂ. ಗಳನ್ನು ತೆಗೆದಿರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ ಮತ್ತ ಶಾಲೆಗಳಲ್ಲಿ ಇತರ ಸೌಲಭ್ಯಗಳನ್ನು ಪೂರೈಸುವುದರ ಜೊತೆಗೆ ಅಲ್ಲಿ ಓದುವ ಮಕ್ಕಳಿಗೆ ಗುಣಾತ್ಮಕ ಮತ್ತು ಉನ್ನತ ಗುಣಮಟ್ಟದ ಶಿಕ್ಷಣ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಬಜೆಟ್ ಭಾಷಣದಲ್ಲಿ (budget speech) ಹೇಳಿದರು. ಸರ್ಕಾರಿ ಶಾಲೆಗಳ ಬಗ್ಗೆ ಮಾತು ಅರಂಭಿಸುವ ಮೊದಲು; ರಾಷ್ಟ್ರಧರ್ಮ ಯಾವುದು ಅಂತ ಕೇಳಿದಾಗ ಭಾವೈಕ್ಯತೆ, ಸಾಮರಸ್ಯ, ಮತ್ತು ಪ್ರಜಾಪ್ರಭುತ್ವಗಳೇ ನಮ್ಮ ರಾಷ್ಟ್ರಧರ್ಮ ಹಾಗೂ ಸಂವಿಧಾನವೇ ನಮ್ಮ ರಾಷ್ಟ್ರಗ್ರಂಥ ಎಂದು ಮಕ್ಕಳಿಗೆ ಹೇಳಿಕೊಡಬೇಕು ಎಂದು ಪದ್ಮಶ್ರೀ ಇಬ್ರಾಹಿಂ ಸುತಾರ (Padma Shri Ibrahim Sutar) ಹೇಳಿದ್ದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೀಳರಿಮೆಯಿಂದ ಬಳಲದೆ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಬೇಕಾಗುವ ಆತ್ಮವಿಶ್ವಾಸ ಅವರಲ್ಲಿ ಮೂಡುವ ಶಿಕ್ಷಣ ಒದಗಿಸಲಾಗುವುದು ಎಂದು ಹೇಳಿದರು. ಶಿಥಿಲಗೊಂಡಿರುವ ಸರ್ಕಾರೀ ಶಾಲಾ ಕಾಲೇಜು ಕಟ್ಟಡಗಳು ದುರಸ್ತಿ, ಹೊಸ ಕಟ್ಟಡಗಳು, ಅಗತ್ಯವಿರುವ ಲ್ಯಾಬ್ ಗಳು, ಶೌಚಾಲಯ, ಕುಡಿಯುವ ನೀರು ಮೊದಲಾದ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಕಳೆದ ಅಯವ್ಯಯ ಪಟ್ಟಿಯಲ್ಲಿ 600 ಕೋಟಿ ರೂ. ಮೀಸಲಿಡಲಾಗಿತ್ತು, ಪ್ರಸಕ್ತ ಸಾಲಿನಲ್ಲಿ 850 ಕೋಟಿ ರೂ. ಗಳನ್ನು ತೆಗೆದಿರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ