ಮೈಸೂರು ದಸರಾ 2023: ಉರ್ದು ಕವಿಗೋಷ್ಠಿಗೆ ಬಿಜೆಪಿ ಶಾಸಕ ಆಕ್ಷೇಪ; ಸರಣಿ ಟ್ವೀಟ್​ ಮೂಲಕ ಸುನಿಲ್​​ ಕುಮಾರ್ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Oct 09, 2023 | 3:16 PM

ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿಯನ್ನೂ ಆಯೋಜಿಸಿದ್ದು, ಇದಕ್ಕೆ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್​ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ ಮಾಡಿದ ಅವರು "ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ?

ಮೈಸೂರು ದಸರಾ 2023: ಉರ್ದು ಕವಿಗೋಷ್ಠಿಗೆ ಬಿಜೆಪಿ ಶಾಸಕ ಆಕ್ಷೇಪ; ಸರಣಿ ಟ್ವೀಟ್​ ಮೂಲಕ ಸುನಿಲ್​​ ಕುಮಾರ್ ವಾಗ್ದಾಳಿ
ವಿ ಸುನೀಲ್​ ಕುಮಾರ್​
Follow us on

ಮೈಸೂರು ಅ.09: ವಿಶ್ವವಿಖ್ಯಾತ ಮೈಸೂರು ದಸರಾ 2023 (Mysore Dasara) ಪ್ರಯುಕ್ತ ಅಕ್ಟೋಬರ್ 17 ರಿಂದ 21 ರವರೆಗೆ ಮೈಸೂರಿನ ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿ (Dasara Kavigosti) ನಡೆಸಲಾಗುತ್ತದೆ. ಚಿಗುರು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿಯನ್ನೂ (Urdu Kavigosti) ಆಯೋಜಿಸಿದ್ದು, ಇದಕ್ಕೆ ಬಿಜೆಪಿ ಶಾಸಕ ವಿ ಸುನಿಲ್ (Sunil Kumar)​ ಕುಮಾರ್​ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ ಮಾಡಿದ ಅವರು “ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ? ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ” ಎಂದು ವಾಗ್ದಾಳಿ ಮಾಡಿದ್ದಾರೆ.

“ಟಿಪ್ಪು ನಿಜಗನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಮಹಿಷ ದಸರಾ, ಉರ್ದು ಕವಿಗೋಷ್ಠಿ ಜತೆಗೆ ಇನ್ನೆಷ್ಟು ಸಾಂಸ್ಕ್ರತಿಕ ದೌರ್ಜನ್ಯಕ್ಕೆ ನಿಮ್ಮ ಸಹಮತ ? ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕ್ರತಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ 2023: ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಜಿಲ್ಲಾಡಳಿತ ಸಿದ್ದತೆ, ಸಾಂಪ್ರದಾಯಿಕ ದಸರಾಗೆ ಎಳ್ಳು ನೀರು?

“ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಸೂಕ್ಷ್ಮತೆ ಹಾಗೂ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವರ್ಷಪೂರ್ತಿ ಕರ್ನಾಟಕ ಸಂಭ್ರಮ ಆಚರಿಸಲು ಹೊರಟವರು ದಸರಾದಲ್ಲಿ ಉರ್ದು ಸಂಭ್ರಮ ನಡೆಸಿದರೆ ಹೇಗೆ ?” ಎಂದು ಪ್ರಶ್ನಿಸಿದ್ದಾರೆ.

ಹಿಂದಿ ಕವಿಗೋಷ್ಠಿಗೆ ವಿರೋಧಿಸಿದ್ದ ಕಾಂಗ್ರೆಸ್​

2022ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಹಿಂದಿ ಕವಿಗೋಷ್ಠಿ ಆಯೋಜಿಸಿತ್ತು. ಇದಕ್ಕೆ ಕನ್ನಡಪರ ಸಂಘಟನೆಗಳು ಮತ್ತು ಕಾಂಗ್ರೆಸ್​​ ವಿರೋಧ ವ್ಯಕ್ತಪಡಿಸಿತ್ತು. “ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ಯಾವುದೇ ಕ್ರಮವನ್ನು ವಿರೋಧಿಸುತ್ತೇವೆ. ಹಿಂದಿಯೇತರ ರಾಜ್ಯಗಳು ಮತ್ತು ಜನರ ಮೇಲೆ ಪರೋಕ್ಷವಾಗಿ ಹಿಂದಿ ಹೇರಲಾಗುತ್ತಿದೆ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಕಾಂಗ್ರೆಸ್ ಸರ್ಕಾರವಿದ್ದು ಉರ್ದು ಕವಿಗೋಷ್ಠಿ ನಡೆಸಲು ಮುಂದಾಗಿದೆ. ಇದಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ