ಬ್ರ್ಯಾಂಡ್​ ಬೆಂಗಳೂರು: ನಾಗರಿಕರ ಸಮಸ್ಯೆ ಆಲಿಸಲು “ಸಹಾಯ ಹಸ್ತ” ವೆಬ್​ಸೈಟ್

ಶಾಲೆಗಳ ಸಮಯ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಸ ವಿಂಗಡಣೆಯ ಬಗ್ಗೆ ಪ್ರತ್ಯೇಕ ಕ್ರಮ ಕೈಗೊಳ್ಳುತ್ತೇವೆ. ಸಿಟಿಯ ಹೊರಭಾಗದಲ್ಲಿ ಕಸ ವಿಂಗಡಣೆ ಆಗುತ್ತಿದೆ. ಅದು ನಗರದಲ್ಲೇ ಆಗಬೇಕು ಎಂಬುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಹೇಳಿದರು.

ಬ್ರ್ಯಾಂಡ್​ ಬೆಂಗಳೂರು: ನಾಗರಿಕರ ಸಮಸ್ಯೆ ಆಲಿಸಲು ಸಹಾಯ ಹಸ್ತ ವೆಬ್​ಸೈಟ್
ಡಿಸಿಎಂ ಡಿಕೆ ಶಿವಕುಮಾರ್​, ಸಚಿವ ರಾಮಲಿಂಗಾ ರೆಡ್ಡಿ
Follow us
Anil Kalkere
| Updated By: ವಿವೇಕ ಬಿರಾದಾರ

Updated on: Oct 09, 2023 | 2:48 PM

ಬೆಂಗಳೂರು ಅ.09: ಬೆಂಗಳೂರಿನಲ್ಲಿ 1 ಕೋಟಿ‌ 40 ಜನರು ವಾಸವಾಗಿದ್ದಾರೆ. ಹೊಸ ಮನೆಗಳು ನಿರ್ಮಾಣವಾಗುತ್ತಿರುವುದು ವಿದ್ಯುತ್ ಸಂಪರ್ಕದಿಂದ ಗೊತ್ತಾಗುತ್ತಿದೆ. ನೀರಿನ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಟ್ರಾಫಿಕ್ (Traffic) ಸಮಸ್ಯೆ ಸಹ ದಟ್ಟವಾಗಿ ಕಾಡುತ್ತಿದೆ. ಹೀಗಾಗಿ ಎಂಟು ಜನರ ತಂಡ ರಚಿಸಲಾಗಿದೆ. ಬೆಂಗಳೂರು ಯಾವ ನಿಟ್ಟಿನಲ್ಲಿ ಬದಲಾವಣೆ ಆಗಬೇಕು ಅಂತ ಈಗಾಗಲೇ 70 ಸಾವಿರ ಸಲಹೆಗಳು ಬಂದಿದೆ. ಎಂಟು ಜನರ ತಂಡ ಈ ಸಲಹೆಗಳನ್ನು ಪರಿಶೀಲಿಸಿ, ಸದ್ಯದರಲ್ಲೇ ಅವರು ವರದಿ ನೀಡಲಿದ್ದಾರೆ. “ಸಹಾಯ ಹಸ್ತ” ವೆಬ್ ಸೈಟ್ ಓಪನ್ ಮಾಡಲಿದ್ದೇವೆ. ನೀರು, ವಿದ್ಯುತ್, ಕಸ ಇತ್ಯಾದಿ ಬಗ್ಗೆ ಜನರು ದೂರು ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar)​​ ಹೇಳಿದರು.

ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಗರೀಕರ ಧ್ವನಿಯೇ ಸರ್ಕಾರ ಧ್ವನಿ ಎಂಬ ಶೀರ್ಷಿಕೆಯಡಿ ನಡೆದ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸದಾಗಿ ತೆರಿಗೆ ಹಾಕುವ ಅವಶ್ಯಕತೆ ಇಲ್ಲ. ಯಾರು ತೆರಿಗೆ ಪಾವತಿ ಮಾಡುವುದಿಲ್ಲ, ಅಂತವರ ಆಸ್ತಿ ಪಟ್ಟಿಯನ್ನು ಅವರಿಗೆ ಕೊಡುತ್ತೇವೆ. ಮೇಲ್ಸುತುವೆ, ಸುರಂಗ ಮಾರ್ಗ, ಮೆಟ್ರೋ ಈ ಮೂರರಿಂದ ಮಾತ್ರ ಟ್ರಾಫಿಕ್ ಸಮಸ್ಯೆ ಬಗೆಹರಿಸಲು‌ ಸಾಧ್ಯ. ಇದಕ್ಕೆಲ್ಲ ಜಾಸ್ತಿ ಹಣ ಬೇಕಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಇರುವ ಪಟಾಕಿ ಅಂಗಡಿ ಪರಿಶೀಲನೆಗೆ ಡಿಕೆ ಶಿವಕುಮಾರ್​​ ಸೂಚನೆ

ರಾಜಕಾಲುವೆಯಲ್ಲಿ ನೀರು ಹೋಗಬೇಕು ಅಂತ ಬಿಬಿಎಂಪಿಗೆ ಸೂಚನೆ ನೀಡಿದ್ದೇವೆ. ಐಟಿ ಪಾರ್ಕ್ ಭಾಗಗಳಲ್ಲಿ ಟೈಂ ಬಗ್ಗೆ ಮಾತನಾಡಲು ಹೇಳಿದ್ದೇವೆ. ಶಾಲೆಗಳ ಸಮಯ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಸ ವಿಂಗಡಣೆಯ ಬಗ್ಗೆ ಪ್ರತ್ಯೇಕ ಕ್ರಮ ಕೈಗೊಳ್ಳುತ್ತೇವೆ. ಸಿಟಿಯ ಹೊರಭಾಗದಲ್ಲಿ ಕಸ ವಿಂಗಡಣೆ ಆಗುತ್ತಿದೆ. ಅದು ನಗರದಲ್ಲೇ ಆಗಬೇಕು ಎಂಬುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನನ್ನ ಕಚೇರಿಯಿಂದಲೇ ಸಮಸ್ಯೆ ಬಗ್ಗೆ ಬಗೆಹರಿಸುವ ವ್ಯವಸ್ಥೆ ಮಾಡುತ್ತೇನೆ. ಕಾವೇರಿ ಐದನೇ ಹಂತ 750 ಎಂಎಲ್‌ಡಿ ನೀರು ಅಂತಿಮ‌ ಹಂತಕ್ಕೆ ಬಂದಿದೆ. ಅತ್ತಿಬೆಲೆ ಸೇರಿ 110 ಹಳ್ಳಿಗಳಿಗೆ ನೀರು ಸರಬರಾಜು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.

ಬೆಂಗಳೂರು ಸರ್ವತೋಮುಖ ಅಭಿವೃದ್ದಿ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ, ಶಾಸಕ ಎನ್ .ಎ ಹ್ಯಾರೀಸ್, ರವಿ ಸುಬ್ರಹ್ಮಣ್ಯ, ಎಂಎಲ್ ಸಿ ಶರವಣ‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?