ಮೈಸೂರು: ಜಿಲ್ಲೆಯಲ್ಲಿ ದಿನ ಸಾಗುತ್ತಿದ್ದಂತೆ ಕೊರೊನಾ ಸೋಂಕು ಹರಡುವಿಕೆ ಉಲ್ಬಣಗೊಳ್ಳುತ್ತಿದೆ. ಜೀವ ಕೈಯ್ಯಲ್ಲಿ ಹಿಡಿದು ಅದೆಷ್ಟೋ ಮಂದಿ ಕೊರೊನಾ ಜೊತೆ ಹೋರಾಡುತ್ತಿದ್ದಾರೆ. ಆಕ್ಸಿಜನ್ ಬೆಡ್ಗಳಿಗಾಗಿ ಸೆಣೆಸಾಡುತ್ತಿದ್ದಾರೆ. ಹೀಗಿರುವಾಗ ಮೈಸೂರು ಡಿಹೆಚ್‌ಒ ಅಮರನಾಥ್ ತಮ್ಮ ಅಸಹಾಯಕತೆಯನ್ನು ಫೋನಿನಲ್ಲಿ ಹೇಳಿಕೊಂಡ ಮಾತು ಇದೀಗ ವೈರಲ್ ಆಗಿದೆ. ‘ನನ್ನ ಪತ್ನಿಗೂ ವೆಂಟಿಲೇಟರ್ ಕೊಡಿಸುವ ಯೋಗ್ಯತೆ ಇಲ್ಲ’ ಎಂದು ಹೇಳಿಕೊಂಡ ಮಾತು ಇದೀಗ ವೈರಲ್ ಆಗಿದೆ.
ಮೈಸೂರು ಡಿಹೆಚ್‌ಒ ಅಮರ್ನಾಥ್ ಅವರಿಗೆ, ಕೊವಿಡ್ ಸೋಂಕಿತನ ಸಂಬಂಧಿಕರೊಬ್ಬರು ಕರೆ ಮಾಡಿ ವೆಂಟಿಲೇಟರ್ ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮರ್ನಾಥ್ ಅವರು ವಾರ್ರೂಂಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ. ಕರೆ ಮಾಡಿದರೆ ಯಾರೂ ಕೂಡಾ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ರೋಗಿಯ ಸಂಬಂಧಿಕರು ಹೇಳಿದಾಗ, ನನಗೂ ಬೆಡ್ಗೂ ಸಂಬಂಧವಿಲ್ಲ, ನನಗೆ ಬೆಡ್ ಕೊಡಿಸಲು ಆಗಲ್ಲ. ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ. ನನ್ನ ಕೈ ಸೋತೋಗಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಇದನ್ನು ಕೇಳಿದ ರೋಗಿಯ ಸಂಬಂಧಿಕ, ನಿಮಗೆ ಜವಾಬ್ದಾರಿ ಏಕೆ? ಕೆಲಸ ಬಿಟ್ಟೋಗಿ ಎಂದು ಹೇಳಿದ್ದಾರೆ. ಕೆಲಸದಿಂದ ಕಳುಹಿಸಿ ಬಿಡಲು ನಾನು ರೆಡಿ ಇದ್ದೇನೆ. ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿರುವ ಆಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ
FMR CM Siddaramaiah: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ