AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್ ಬ್ಲಾಕಿಂಗ್ ಪ್ರಕರಣ; ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ. ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ, ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು ಎಂದು ಕಾಂಗ್ರೆಸ್ ಟ್ವೀಟ್​ ಮಾಡಿದೆ.

ಬೆಡ್ ಬ್ಲಾಕಿಂಗ್ ಪ್ರಕರಣ; ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ
ಸಾಂದರ್ಭಿಕ ಚಿತ್ರ
sandhya thejappa
|

Updated on: May 06, 2021 | 1:18 PM

Share

ಬೆಂಗಳೂರು: ಮಂಗಳವಾರದಂದು ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ದಕ್ಷಿಣ ವಯಲದ ವಾರ್ ರೂಂ ನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದಿದ್ದರು. ಈ ಸುದ್ದಿ ಹರಿದಾಡುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಎದುರಾಯಿತು. ಈ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಶಾಮೀಲಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಸತೀಶ್ ರೆಡ್ಡಿಯನ್ನು ಬಂಧಿಸಬೇಕೆಂದು ಆಗ್ರಹಿಸಿದೆ.

ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ. ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ, ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು. ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಇದನ್ನೂ ಓದಿ

ಸಂಪೂರ್ಣ ಲಾಕ್​ಡೌನ್​ ಮಾಡಿದರೂ ರಾಜ್ಯದಲ್ಲಿ ಜೂನ್​ ವೇಳೆಗೆ 28 ಸಾವಿರ ಸಾವು, ಮಾಡದೇ ಇದ್ದರೆ ಪರಿಸ್ಥಿತಿ ಅಯೋಮಯ: ತಜ್ಞರ ವರದಿ

ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್

(Congress is demanding on Twitter that BJP MLA Satish Reddy should be arrested)