ಸಂಪೂರ್ಣ ಲಾಕ್​ಡೌನ್​ ಮಾಡಿದರೂ ರಾಜ್ಯದಲ್ಲಿ ಜೂನ್​ ವೇಳೆಗೆ 28 ಸಾವಿರ ಸಾವು, ಮಾಡದೇ ಇದ್ದರೆ ಪರಿಸ್ಥಿತಿ ಅಯೋಮಯ: ತಜ್ಞರ ವರದಿ

ಐಐಎಸ್​ಸಿ ಪ್ರೊಫೆಸರ್ ಶಶಿಕುಮಾರ್ ಗಣೇಶನ್ ವರದಿಯಲ್ಲಿ 15 ದಿನ, 21 ದಿನ ಹಾಗೂ 30ದಿನಗಳ ಸಂಪೂರ್ಣ ಲಾಕ್​ಡೌನ್​ ಎಂದು ಮೂರು ಹಂತದಲ್ಲಿ ವಿಂಗಡಣೆ ಮಾಡಲಾಗಿದ್ದು, ಎಷ್ಟು ದಿನಗಳ ದಿನಗಳ ಲಾಕ್​ಡೌನ್ ಯಾವ ರೀತಿಯಲ್ಲಿ ಪರಿಣಾಮಕಾರಿ ಎಂದು ವಿವರಿಸಲಾಗಿದೆ.

ಸಂಪೂರ್ಣ ಲಾಕ್​ಡೌನ್​ ಮಾಡಿದರೂ ರಾಜ್ಯದಲ್ಲಿ ಜೂನ್​ ವೇಳೆಗೆ 28 ಸಾವಿರ ಸಾವು, ಮಾಡದೇ ಇದ್ದರೆ ಪರಿಸ್ಥಿತಿ ಅಯೋಮಯ: ತಜ್ಞರ ವರದಿ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: May 06, 2021 | 12:37 PM

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಈಗಾಗಲೇ ಕರ್ನಾಟಕದಲ್ಲಿ ಹಲವು ಸಾವು-ನೋವು ಸಂಭವಿಸಿವೆ. ಎರಡನೇ ಅಲೆ ಶುರುವಾದ ನಂತರವೂ ಲಾಕ್​ಡೌನ್ ಅವಶ್ಯಕತೆ ಇಲ್ಲ, ಯಾವ ಕಾರಣಕ್ಕೂ ಲಾಕ್​ಡೌನ್​ ಮಾಡುವುದಿಲ್ಲ ಎನ್ನುತ್ತಿದ್ದ ಕರ್ನಾಟಕ ಸರ್ಕಾರ ಕೊನೆಗೆ ಸೋಂಕಿತರ ನಿಯಂತ್ರಣಕ್ಕೆ ಬೇರೆ ಮಾರ್ಗವಿಲ್ಲದೇ ಲಾಕ್​ಡೌನ್ ಮಾದರಿಯ ಕರ್ಫ್ಯೂ ಮೊರೆ ಹೋಗಿದೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲವಾಗಿ ವೈದ್ಯಕೀಯ ವ್ಯವಸ್ಥೆ ಬಸವಳಿದು ಹೋಗಿದೆ. ಇದೀಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ತಜ್ಞರು ವರದಿಯೊಂದನ್ನು ಸಿದ್ಧಪಡಿಸಿದ್ದು ಸಂಪೂರ್ಣ ಲಾಕ್​ಡೌನ್ ಮಾಡದಿದ್ದರೆ ಭೀಕರ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅಂಕಿ ಅಂಶಗಳ ಮುಖೇನ ರಾಜ್ಯ ಸರ್ಕಾರಕ್ಕೆ ರವಾನಿಸಿದ್ದಾರೆ.

ಐಐಎಸ್​ಸಿ ಪ್ರೊಫೆಸರ್ ಶಶಿಕುಮಾರ್ ಗಣೇಶನ್ ವರದಿ ಪ್ರಕಾರ ಕರ್ನಾಟಕದಲ್ಲಿ ಇದೇ ಸ್ಥಿತಿ ಮುಂದುವರೆದರೆ ಜೂನ್ 11 ರವರೆಗೆ ವೇಳೆಗೆ 31 ಲಕ್ಷದ 60 ಸಾವಿರ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿರಲಿವೆ. ಜತೆಗೆ, 55 ಸಾವಿರ ಜನ ಕೊರೊನಾ ಸೋಂಕಿತರು ಮೃತಪಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ರಾಜ್ಯದಲ್ಲಿ ಹೇರಲಾಗಿರುವ ಕರ್ಫ್ಯೂ ಮಾದರಿಯ ಲಾಕ್​ಡೌನ್​ನಲ್ಲಿ ಕೆಲ ವಿನಾಯತಿಗಳಿರುವುದರಿಂದ ಜನ ಸಂಚಾರ ಸಂಪೂರ್ಣ ನಿಂತಿಲ್ಲ. ಅಲ್ಲದೇ ಬೆಳಗ್ಗಿನ ಹೊತ್ತು ಜನ ಮನೆಯಿಂದ ಹೊರ ಬಂದಾಗ ಕೊರೊನಾ ನಿಯಮ ಉಲ್ಲಂಘನೆಯೂ ಆಗುತ್ತಿದ್ದು ಸೋಂಕು ಹರಡುವುದಕ್ಕೆ ರಾಜಮಾರ್ಗ ಹಾಕಿಕೊಟ್ಟಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಜ್ಞರ ವರದಿಯಲ್ಲಿ ಸಂಪೂರ್ಣ ಲಾಕ್​ಡೌನ್​ ಒಂದೇ ತಕ್ಷಣದ ಪರಿಹಾರ ಎನ್ನಲಾಗುತ್ತಿದೆ.

ಸಂಪೂರ್ಣ ಲಾಕ್​ಡೌನ್​ನಿಂದ ಏನು ಉಪಯೋಗ? ಐಐಎಸ್​ಸಿ ಪ್ರೊಫೆಸರ್ ಶಶಿಕುಮಾರ್ ಗಣೇಶನ್ ವರದಿಯಲ್ಲಿ 15 ದಿನ, 21 ದಿನ ಹಾಗೂ 30ದಿನಗಳ ಸಂಪೂರ್ಣ ಲಾಕ್​ಡೌನ್​ ಎಂದು ಮೂರು ಹಂತದಲ್ಲಿ ವಿಂಗಡಣೆ ಮಾಡಲಾಗಿದ್ದು, ಎಷ್ಟು ದಿನಗಳ ದಿನಗಳ ಲಾಕ್​ಡೌನ್ ಯಾವ ರೀತಿಯಲ್ಲಿ ಪರಿಣಾಮಕಾರಿ ಎಂದು ವಿವರಿಸಲಾಗಿದೆ. ಲಾಕ್​ಡೌನ್​ ಮಾಡದಿದ್ದರೆ ಹಾಗೂ ಮಾಡಿದರೆ ಏನು ವ್ಯತ್ಯಾಸವಾಗಲಿದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ಗಮನಿಸಬಹುದು.

15 ದಿನಗಳ ಸಂಪೂರ್ಣ ಲಾಕ್​ಡೌನ್ ಒಂದುವೇಳೆ ಕರ್ನಾಟಕದಲ್ಲಿ 15 ದಿನ ಸಂಪೂರ್ಣ ಲಾಕ್​ಡೌನ್ ಮಾಡಿದರೆ ಜೂನ್ 11 ರ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆಯನ್ನು 8ಲಕ್ಷದ ಆಸುಪಾಸಿನಲ್ಲಿ ನಿಯಂತ್ರಿಸಬಹುದಾಗಿದೆ. ಲಾಕ್​ಡೌನ್​ ಇಲ್ಲದೇ ಹೋದರೆ ಸುಮಾರು 32 ಲಕ್ಷಕ್ಕೆ ಹೋಗಬಹುದಾದ ಸಂಖ್ಯೆಯನ್ನು ಸರಿಸುಮಾರು 4 ಪಟ್ಟು ತಗ್ಗಿಸಬಹುದಾಗಿದೆ. ಜತೆಗೆ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಾಣಲಿದ್ದು 55 ಸಾವಿರಕ್ಕೆ ತಲುಪಬಹುದಾದ ಮರಣಪ್ರಮಾಣವನ್ನು 31ಸಾವಿರದ ಗಡಿಯಲ್ಲಿ ಕಟ್ಟಿಹಾಕಬಹುದು ಎಂದು ವರದಿ ತಿಳಿಸಿದೆ.

21 ದಿನಗಳ ಸಂಪೂರ್ಣ ಲಾಕ್​ಡೌನ್ ಇನ್ನೊಂದು ಲೆಕ್ಕಾಚಾರದ ಪ್ರಕಾರ 15 ದಿನಗಳ ಬದಲು 21 ದಿನ ಲಾಕ್​ಡೌನ್​ ಮಾಡಿದರೆ ಜೂನ್ 11 ರ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 6.86 ಲಕ್ಷ ಇರಲಿದೆ. ಅಂದರೆ ಸುಮಾರು 7ಲಕ್ಷದ ಗಡಿಗೆ ಬಂದು ನಿಲ್ಲಲಿದೆ. ಇದರಲ್ಲಿ ಮರಣ ಪ್ರಮಾಣ ಸುಮಾರು 30 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ

ಒಂದು ತಿಂಗಳ ಸಂಪೂರ್ಣ ಲಾಕ್​ಡೌನ್ ಕರ್ನಾಟಕ ರಾಜ್ಯವನ್ನು ಒಂದು ತಿಂಗಳು ಅಂದರೆ 30 ದಿನ ಸಂಪೂರ್ಣ ಲಾಕ್​ಡೌನ್ ಮಾಡಿದ್ದೇ ಆದಲ್ಲಿ ಜೂನ್ 11 ರ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 4 ಲಕ್ಷದ 73 ಸಾವಿರದ ಆಸುಪಾಸಿಗೆ ತಲುಪಲಿದೆ. ಹೆಚ್ಚೆಂದರೆ 5 ಲಕ್ಷದ ಸಮೀಪಕ್ಕೆ ಬರಲಿದೆ ಎಂದು ಊಹಿಸಲಾಗಿದೆ. ಜತೆಗೆ ಮರಣ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಲಿದ್ದು 28 ಸಾವಿರದ ಆಸುಪಾಸಿನಲ್ಲಿ ಸಾವಿನ ಸಂಖ್ಯೆಯನ್ನು ತಡೆಗಟ್ಟಬಹುದು ಎನ್ನಲಾಗುತ್ತಿದೆ.

ಸದರಿ ವರದಿಯನ್ನು ಗಮನಿಸಿದರೆ ಇನ್ನು ಒಂದು ತಿಂಗಳ ನಂತರದ ಪರಿಸ್ಥಿತಿ ಗಂಭೀರವಾಗಿಯೇ ಇರಲಿದ್ದು, ಕೈ ಚೆಲ್ಲಿ ಕೂರುವ ಪರಿಸ್ಥಿತಿ ಬರಬಾರದೆಂದರೆ ಸರ್ಕಾರ ಕಠಿಣ ನಿಯಮಾವಳಿಗಳ ಮೊರೆ ಹೋಗಲೇಬೇಕಿದೆ. ಅಲ್ಲದೇ, ಜನರು ಸಹ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆಯತ್ತ ಹೆಚ್ಚೆಚ್ಚು ಗಮನ ನೀಡುತ್ತಾ ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ತಮ್ಮನ್ನು ತಾವು ಸೋಂಕಿನಿಂದ ರಕ್ಷಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ 

Covid Lockdown: ಕೋವಿಡ್ 2ನೇ ಅಲೆಗೆ ಕಡಿವಾಣ ಹಾಕಲು ಲಾಕ್​ಡೌನ್ ಹೇರಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಸೂಚನೆ

(Karnataka will record 28 thousand deaths around June even if it goes for Complete Lockdown if it does not the death rate will cross 50K Says report)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್