ಮೈಸೂರು: ಕರ್ನಾಟಕ ಸರ್ಕಾರವು (Karnataka Government) 2020 ರಲ್ಲಿ ಡಿಜಿಟಲ್ ಗ್ರಂಥಾಲಯವನ್ನು (Digital Library) ಆರಂಭ ಮಾಡಿದ್ದು, ನೋಂದಣಿ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರು ಪುಸ್ತಕಗಳನ್ನು ಉಚಿತವಾಗಿ ಓದಬಹುದಾಗಿದೆ. ಇದೀಗ ಮೈಸೂರು (Mysore) ಜಿಲ್ಲೆಯ 22,41,801 ಜನರು ನೋಂದಣಿ ಮಾಡಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. 1.22 ಕೋಟಿ ಜನರು ನೋಂದಿಣಿ ಮಾಡಿಕೊಳ್ಳುವ ಮೂಲಕ ಬೆಂಗಳೂರು (Bengaluru) ಮೊದಲನೇ ಸ್ಥಾನದಲ್ಲಿದೆ. ಈ ಮಹತ್ವಾಕಾಂಕ್ಷೆಯ ಡಿಜಿಟಲ್ ಲೈಬ್ರರಿ ಯೋಜನೆಗೆ ಈಗ 3.48 ಕೋಟಿ ಸದಸ್ಯರು ನೋದಂಣಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯ ಪ್ರಕಾರ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರು ಈ ಡಿಜಿಟಲ್ ಸೌಲಭ್ಯವನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಈ ಉಚಿತ ಕಲಿಕೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತೊಡಗುವಂತೆ ಮಾಡಲು ಇಲಾಖೆಯು ಈಗ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುತ್ತಿದೆ.
ಕರ್ನಾಟಕ ಡಿಜಿಟಲ್ ಲೈಬ್ರರಿಯಲ್ಲಿ 10.63 ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು/ವಿಡಿಯೋಗಳು, 344 ಸಿಮ್ಯುಲೇಶನ್ ಲ್ಯಾಬ್‌ಗಳು, 63,150 ಜರ್ನಲ್‌ಗಳು, 6,858 ಮೌಲ್ಯಮಾಪನ ಪರಿಕರಗಳು ಲಭ್ಯವಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಇ-ಸಾರ್ವಜನಿಕ ಗ್ರಂಥಾಲಯ (E-Sarvajanika Granthalaya Lab) 100 ಸಾವಿರ ಡೌನ್‌ಲೋಡ್‌ಗಳನ್ನು ದಾಖಲಿಸಿದೆ, ಇದು ಸರ್ಕಾರಿ ಯೋಜನೆಗೆ ಮತ್ತೊಂದು ದಾಖಲೆಯಾಗಿದೆ.
ಇದನ್ನೂ ಓದಿ: Budget 2023: ಮಕ್ಕಳು ಮತ್ತು ಹದಿಹರೆಯದವರಿಗೆ ಪುಸ್ತಕಗಳು ಸುಲಭವಾಗಿ ಸಿಗಲು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆ
ಮೈಸೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ ಮಂಜುನಾಥ್ ಮಾತನಾಡಿ, ಈ ಡಿಜಿಟಲ್ ವೇದಿಕೆಯಲ್ಲಿ ಸಾಕಷ್ಟು ಓದುವ ಮತ್ತು ಕಲಿಕಾ ಸಾಮಗ್ರಿಗಳಿರುವುದರಿಂದ ಸದಸ್ಯರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದ್ದೇವೆ ಎಂದರು.
ನಿಯಮಿತ ಬಳಕೆದಾರರ ಪ್ರಕಾರ, ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ದೊಡ್ಡ ಪ್ರಯೋಜನವೆಂದರೆ ಇದು ಸಾಮಾನ್ಯ ಭೌತಿಕ ಲೈಬ್ರರಿ ಸೆಟಪ್‌ಗಳಲ್ಲಿ ಲಭ್ಯವಿರುವ ಹೆಚ್ಚಿನ ಪುಸ್ತಕಗಳನ್ನು ಹೊಂದಿದೆ. ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ, ಇದು ಸಾಕಷ್ಟು ಅಧ್ಯಯನ ಸಾಮಗ್ರಿಗಳು ಮತ್ತು ಜರ್ನಲ್‌ಗಳನ್ನು ಹೊಂದಿದೆ.
ವಿದ್ಯಾರ್ಥಿಗಳು ಈ ಉಪಕ್ರಮದ ಪ್ರಮುಖ ಪಾಲುದಾರರಾಗಿರುವುದರಿಂದ ಪುಸ್ತಕಗಳು, ಮೌಲ್ಯಮಾಪನ ಪರಿಕರಗಳು ಮತ್ತು ವಿವಿಧ ಪ್ರವೇಶ ಪರೀಕ್ಷೆಯ ಕಲಿಕಾ ಸಾಮಗ್ರಿಗಳನ್ನು ನಿರಂತರವಾಗಿ ನವೀಕರಿಸಬೇಕೆಂದು ಇಲಾಖೆಗೆ ಅರವಿಂದ ಹೆಬ್ಬರ್ ಎಂಬ ಓದುಗರು ವಿನಂತಿಸಿದ್ದಾರೆ.
ಡಿಜಿಟಲ್ ಲೈಬ್ರರಿ ಯೋಜನೆ ಈ ಡಿಜಿಟಲ್ ಲೈಬ್ರರಿಯನ್ನು ಫೆಬ್ರವರಿ 2020 ರಲ್ಲಿ ಅಂದಿನ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಉದ್ಘಾಟಿಸಿದರು. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಅಪ್ಲಿಕೇಶನ್ ಮೂಲಕ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಇ-ಪುಸ್ತಕ ರೂಪದಲ್ಲಿ ಓದಲು ಲಭ್ಯವಾಗುವಂತೆ ಮಾಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ