ಮೈಸೂರು: ನವರಾತ್ರಿಯ ಸಂಭ್ರಮ ಸಡಗರ ಇಂದಿಗೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವವು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ಜನರು, ಭಕ್ತರು, ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಇಂದು ಮೈಸೂರು ದಸರಾ (Mysore Dasara) ಉತ್ಸವದಲ್ಲಿ ಸಾಂಸ್ಕೃತಿ ಕಾರ್ಯಕ್ರಮ (cultural programs), ಸಾಕು ನಾಯಿ ಪ್ರದರ್ಶನ (Pet show) ಸೇರಿದಂತೆ ವಿವಿಧ ಕಾರ್ಯಕ್ರಮಗಳು, ಸ್ಪರ್ಧೆಗಳು ಜರುಗಲಿವೆ. ಯಾವೆಲ್ಲಾ ಕಾರ್ಯಕ್ರಮಗಳು ಇಂದು ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಇಂದು ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಪೈಕಿ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆ ಒಂದಾಗಿದೆ. ಈ ಸ್ಪರ್ಧೆಯು ಬೆಳಗ್ಗೆ 7.30ಕ್ಕೆ ಆರಂಭಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ಮೈದಾನದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾಗಿ ಕನ್ನಡದ ಸೂಪರ್ ಹಿಟ್ ಚಾರ್ಲಿ ಸಿನಿಮಾದಲ್ಲಿ ನಟಿಸಿದ ನಾಯಿ ಆಗಮಿಸಲಿದೆ.
ಅಲ್ಲದೆ, ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಆಯೋಜಿಸಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಖ್ಯಾತ ಗಾಯಕಿ ಮಂಗ್ಲಿಯಿಂದ ಗಾಯನ ಕಾರ್ಯಕ್ರಮವೂ ನಡೆಯಲಿದೆ. ನಂತರ ಖ್ಯಾತ ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ಕಾರ್ಯಕ್ರಮ ಜರುಗಲಿದೆ. ಇದರೊಂದಿಗೆ ಇಂದು ಎರಡನೇ ಬಾರಿ ಪೊಲೀಸ್ ವಾದ್ಯಗಳು ಕೂಡ ಮೊಳಗಳಿವೆ. ರಾತ್ರಿ 7 ಗಂಟೆಗೆ ಅರಮನೆ ಆವರಣದಲ್ಲಿ ಪೊಲೀಸ್ ವಾದ್ಯ ವಾದನ ನಡೆಯಲಿದೆ. ರಾತ್ರಿ 8ಕ್ಕೆ ಮನೋಜ್ ವಸಿಷ್ಟ್ ಮತ್ತು ಅರುಂದತಿ ವಸಿಷ್ಠ ಅವರಿಂದ ಸಂಗೀತ ಕಛೇರಿ ನಡೆಯಲಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Sun, 2 October 22