ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ 3 ಕಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ರೈತರ ದೆಹಲಿ ಚಲೋ ಚಳುವಳಿಯ ಕಾವು ಆರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ, ಮುಕೇಶ್ ಅಂಬಾನಿ ಪಂಜಾಬ್ ಮತ್ತು ಹರಿಯಾಣ ರೈತರ ಕೆಂಗಣ್ಣಿಗೆ ಗುರಿಯಾಗಿದ್ದು ಉದ್ಯಮಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆಯ ಮೊಬೈಲ್ ಟವರ್ಗಳನ್ನು ರೈತರು ಹಾನಿ ಮಾಡಿದ್ದ ಪ್ರಸಂಗಗಳು ವರದಿಯಾಗಿತ್ತು.
ಇದೀಗ, ಅರಮನೆ ನಗರಿಯಲ್ಲಿ ಸಹ ಅಂಬಾನಿ, ಅದಾನಿ ವಿರುದ್ಧ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಬಾನಿಯನ್ನು ವಿರೋಧಿಸಿ ಇಂದು ರೈತರು ಜಿಯೋ ಕಂಪನಿಯ ಸಿಮ್ ಕಾರ್ಡ್ ವಾಪಸ್ ಮಾಡಿದರು. ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಜಿಯೋ ಮಳಿಗೆ ಮುಂದೆ ಧರಣಿ ಸಹ ನಡೆಸಿದರು. ಈ ವೇಳೆ, ಜಿಯೋ ಕಂಪನಿ ಸಿಮ್ಗೆ ಉಗಿದು ಪ್ರತಿಭಟಿಸಿದ ರೈತರು ಬಳಿಕ ಅದನ್ನು ವಾಪಸ್ ಮಾಡಿದರು.
ಅವೈಜ್ಞಾನಿಕ ಕಾಯ್ದೆ ಮೂಲಕ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಿರತ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ರಿಲಾಯನ್ಸ್ ಕಂಪನಿಗೆ ಲಾಭಮಾಡಿಕೊಡಲು ಇದು ಕೇಂದ್ರದ ಯತ್ನ. ಹಾಗಾಗಿ, ರಿಲಾಯನ್ಸ್ ಕಂಪನಿಯನ್ನು ಬಾಯ್ಕಾಟ್ ಮಾಡುತ್ತಿದ್ದೇವೆ. ಜಿಯೋ ಸಿಮ್ ಹಿಂದಿರುಗಿಸಿ ಬೇರೆ ಸಿಮ್ ಬಳಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್ ಹೇಳಿದರು.
ಭತ್ತ ಬೆಳೆದಿದ್ದರೂ ಖರೀದಿ ಮಾಡದ ಸರ್ಕಾರ, ದಲ್ಲಾಳಿಗಳು: ಹತಾಶೆಯಿಂದ ರೈತ ಆತ್ಮಹತ್ಯೆಗೆ ಶರಣು
Published On - 5:44 pm, Sat, 9 January 21