ಪ್ರತಾಪ್​ ಸಿಂಹ ಒಬ್ಬ ಪೇಟೆ ರೌಡಿ- ಸುಮಲತಾ ಹೇಳಿಕೆಗೆ ಸಂಸದ ಪ್ರತಾಪ್ ಖಾರವಾದ ಪ್ರತಿಕ್ರಿಯೆ

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅವರು ಏನೂ ಕೆಲಸ ಮಾಡೋರಲ್ಲ ಎಂದು ಮೈಸೂರು ಸಂಸದ ಪ್ರತಾಪ್​ ಸಿಂಹ ಹೇಳಿದ್ದನ್ನು ಕೇಳಿಸಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರತಾಪ್​ ಸಿಂಹ ಒಬ್ಬ ಪೇಟೆ ರೌಡಿ ಎಂದು ಪ್ರತಿಕ್ರಿಯಿಸಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಪ್ರತಾಪ್​ ಸಿಂಹ ಮತ್ತಷ್ಟು ಖಾರವಾಗಿ ಸುಮಲತಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಅವರು ನನಗೆ ಪೇಟೆ ರೌಡಿ ಎಂದು ಹೇಳಿದ್ದಾರೆ ಅಂದ್ರೆ ನಂಬಿಕೆ ಬರ್ತಾ ಇಲ್ಲ! ಒಂದು […]

ಪ್ರತಾಪ್​ ಸಿಂಹ ಒಬ್ಬ ಪೇಟೆ ರೌಡಿ- ಸುಮಲತಾ ಹೇಳಿಕೆಗೆ ಸಂಸದ ಪ್ರತಾಪ್ ಖಾರವಾದ ಪ್ರತಿಕ್ರಿಯೆ

Updated on: Nov 17, 2020 | 1:11 PM

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅವರು ಏನೂ ಕೆಲಸ ಮಾಡೋರಲ್ಲ ಎಂದು ಮೈಸೂರು ಸಂಸದ ಪ್ರತಾಪ್​ ಸಿಂಹ ಹೇಳಿದ್ದನ್ನು ಕೇಳಿಸಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರತಾಪ್​ ಸಿಂಹ ಒಬ್ಬ ಪೇಟೆ ರೌಡಿ ಎಂದು ಪ್ರತಿಕ್ರಿಯಿಸಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಪ್ರತಾಪ್​ ಸಿಂಹ ಮತ್ತಷ್ಟು ಖಾರವಾಗಿ ಸುಮಲತಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್ ಅವರು ನನಗೆ ಪೇಟೆ ರೌಡಿ ಎಂದು ಹೇಳಿದ್ದಾರೆ ಅಂದ್ರೆ ನಂಬಿಕೆ ಬರ್ತಾ ಇಲ್ಲ! ಒಂದು ವೇಳೆ ಹೇಳಿದ್ರೆ ನಾಗರ ಹಾವು ಸಿನಿಮಾದ ಜಲೀಲನ ಪಾತ್ರ ನೆನಪಿಸಿಕೊಂಡು ಅವರು ಹಾಗೆ ಹೇಳಿರಬೇಕು. ಮೊದಲೇ ಅವರು ಸಿನೆಮಾದವರು. ಹೀಗಾಗಿ ಸಂಸದೆ ಸುಮಲತಾರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಸಂಸದ ಪ್ರತಾಪ್ ಕೆಂಡಕಾರಿದ್ದಾರೆ.