ಮೈಸೂರು: ಆಷಾಢ ಮಾಸದ (Ashad Masa) ಕೊನೆ ಶುಕ್ರವಾರದಂದು (Friday) ಲಕ್ಷ್ಮಿ (Laxmi) ಪೂಜೆಗೆ ತುಂಬಾನೇ ಮಹತ್ವವಿದೆ, ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗುವುದು. ಈ ಹಿನ್ನೆಲೆ ಇಂದು (ಜು.12) ಮೈಸೂರಿನ ಚಾಮುಂಡಿಬೆಟ್ಟದಲ್ಲಿ (Chamundi Hill) ಸಡಗರ ಸಂಭ್ರಮ ಮೆನೆಮಾಡಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ (Chamundeshwari) ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆ ನಂತರ ಮಹಾಮಂಗಳಾರತಿ ನೆರವೇರಿತು. ದೇವಾಲಯದ ಆವರಣವನ್ನು ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಿಗ್ಗೆ 5.30 ರಿಂದ ಭಕ್ತರಿಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ನಾಲ್ಕನೇ ವಾರವೂ ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದ್ದು, 300 ರೂ. ಹಾಗೂ 50 ರೂ. ಟಿಕೆಟ್ ಪಡೆದ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ 50 ರೂ. ಟಿಕೆಟ್ ಸಾಲಿನಲ್ಲಿ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಆಷಾಢ ಮಾಸದ ಮಹತ್ವ, ತಾಯಿ ಚಾಮುಂಡೇಶ್ವರಿಯ ಇತಿಹಾಸ ತಿಳಿಸಿದ ಅರ್ಚಕ
ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧಿಸಿದ ಹಿನ್ನೆಲೆ ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಇನ್ನು ಭಕ್ತರು ಮೆಟ್ಟುಲುಗಳ ಮೂಲಕ ತಾಯಿ ದರ್ಶನಕ್ಕೆ ಆಗಮಿಸುತ್ತಿದ್ದು, ಬೆಳಗ್ಗೆ 5.30 ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ದಾಸೋಹ ಪ್ರಸಾದ ವಿತರಿಸಲಾಗುತ್ತಿದೆ.
ನೀವು ಆಷಾಢ ಕೊನೆಯ ಶುಕ್ರವಾರದಂದು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಈ ಮಂತ್ರಗಳನ್ನು ಹೇಳಿದರೆ ಹಣಕಾಸಿನ ಸಮಸ್ಯೆ ದೂರಾಗಿ ಸಂಪತ್ತು ವೃದ್ಧಿಸುವುದು.
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರ ಪೂಜಿತೇ| ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||
ಅರ್ಥ: ಹೇ ಮಹಾಮಾಯೇ ಸ್ವರೂಪಳೇ ಶ್ರೀ ಚಕ್ರವಾಸಿನಿ, ದೇವತೆಗಳಿಂದ ಪೂಜಿತಳಾಗಿರುವ ಶಂಖಚಕ್ರ ಗದೆಗಳನ್ನು ಧರಿಸಿದ ಶ್ರೀ ಮಹಾಲಕ್ಷ್ಮಿಯೇ ನಿನಗೆ ನಮಸ್ಕಾರಗಳು