ಮೈಸೂರು: ಮಹಿಳೆಯೊಬ್ಬರು (woman) ತಮ್ಮ ಉಸಿರು ಚೆಲ್ಲಿ, 6ಕ್ಕೂ ಹೆಚ್ಚು ಜನರ ಬಾಳಿಗೆ (organs) ಬೆಳಕಾಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು ರಸ್ತೆ ಬಳಿ ಮಾಲತಿ ಎನ್ನುವವರಿಗೆ ಅಪಘಾತ ಸಂಭವಿಸಿತ್ತು. ತಕ್ಷಣ ನಿರ್ಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆಯಲ್ಲಿ ನಿರ್ಮಲಾ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಮಿದುಳು ನಿಷ್ಕ್ರಿಯವಾಗಿತ್ತು. ಚಿಕಿತ್ಸೆ ನಂತರವೂ ಮತ್ತೆ ಮೊದಲ ಸ್ಥಿತಿಗೆ ಬಾರದ ಹಿನ್ನೆಲೆ ಮಾಲತಿ ಮನೆಯವರಿಂದ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ.
ಲಂಗ್ಸ್, ಲಿವರ್, ಎರಡು ಕಿಡ್ನಿಗಳು, ಹೃದಯದ ಕವಾಟ, ಕಣ್ಣಿನ ಕಾರ್ನಿಯಾ ಸೇರಿದಂತೆ 61 ಅಂಗಾಂಗ ದಾನ ಮಾಡಲು ಮಾಲತಿ ಮನೆಯವರು ಮುಂದೆ ಬಂದಿದ್ದು, ಮೈಸೂರು, ಬೆಂಗಳೂರು, ಸಿಕಂದರಾಬಾದ್‌ನ 6ಕ್ಕೂ ಹೆಚ್ಚು ಜನರ ಬಾಳಿಗೆ ಮಾಲತಿ ಅಂಗಾಂಗಗಳು ಜೋಡನೆ ಮಾಡಲಾಗುತ್ತಿದೆ. ಸದ್ಯ ಮಾಲತಿ ಮೃತದೇಹಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ನಂತರ ವಿಮಾನದಲ್ಲಿ ಸಿಕಂದರಾಬಾದ್‌ಗೆ ಲಂಗ್ಸ್ನ್ನು ರವಾನೆ ಮಾಡಿದ್ದಾರೆ. ಬಳಿಕ ಜೀರೋ ಟ್ರಾಫಿಕ್ನಲ್ಲಿ ಮೈಸೂರು ಅಪೋಲೋ ಆಸ್ಪತ್ರೆಯಿಂದ ಮಂಡಕಹಳ್ಳಿ ವಿಮಾನ ನಿಲ್ದಾಣದವರೆಗೂ ರವಾನಿಸಲಾಗಿದೆ.
ಇದನ್ನೂ ಓದಿ: Organ Donation: ಸಾವಿನಲ್ಲೂ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಬಡ ಕುಟುಂಬ
ಚಿಕ್ಕಮಗಳೂರು: ಅಪಘಾತ (Accident)ಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಧನ್ಯ ಕುಮಾರ್ ಅವರನ್ನು ವೈದ್ಯರು ಬದುಕಿಸಲು ಎಷ್ಟೇ ಪ್ರಯತ್ನ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ದುಃಖದಲ್ಲೇ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯ (Brain Dead)ಗೊಂಡಿದ್ದು, ಇತರೆ ಅಂಗಾಂಗಗಳಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಹೃದಯ, ಕಿಡ್ನಿ, ಲಿವರ್, ಕಣ್ಣು ಸೇರಿದಂತೆ ದೇಹದ ಪ್ರಮುಖ ಭಾಗಗಳ ಅಂಗಾಂಗ ದಾನ ಮಾಡಲು ಧನ್ಯ ಕುಮಾರ್ ಪೋಕಷರು ಒಪ್ಪಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಗೆ ಬಲಿ ಆಯ್ತು ಜೀವ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ
ಧನ್ಯ ಕುಮಾರ್(37) ಎಂಬುವರು ಬೈಕ್ನಲ್ಲಿ ಹೋಗುತ್ತಿದ್ದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಧನ್ಯಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಯಿತು. ಆದರೆ ತಲೆಗೆ ಗಂಭೀರವಾಗಿ ಏಟು ಬಿದ್ದ ಹಿನ್ನೆಲೆ ಧನ್ಯ ಅವರ ಮೆದುಳು ನಿಷ್ಕ್ರಿಯಗೊಂಡಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಅವರನ್ನು ಬದುಕಿಸಲು ಸಾಧ್ಯವಾಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಧನ್ಯ ಅವರ ಇತರೆ ಅಂಗಾಂಗಗಳು ಸುರಕ್ಷಿತವಾಗಿರುವ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯುತ್ತಿದೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಧನ್ಯಕುಮಾರ್ ಅವರು ತಮ್ಮ 4 ವರ್ಷದ ಮಗಳು, ಪತ್ನಿ ಹಾಗೂ ತಂದೆ-ತಾಯಿಯನ್ನ ಅಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:20 pm, Mon, 2 January 23