ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಗೆ ಬಲಿ ಆಯ್ತು ಜೀವ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ
ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಅಂದಾಜು 1 ಲಕ್ಷ ಮೌಲ್ಯದ ಅಡಿಕೆ ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು: ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ (girl) ಬಲಿಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿರುವಂತಹ ಘಟನೆ ನಡೆದಿದೆ. ತಾಲೂಕಿನ ಸೋಮನಹಳ್ಳಿ ತಾಂಡ್ಯದ ರಕ್ಷಿತಾ ಮೃತ ಯುವತಿ. ಬಸ್ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ರಕ್ಷಿತಾ ವ್ಯಾಸಂಗ ಮಾಡುತ್ತಿದ್ದಳು. ಮಗಳ ಅಂಗಾಂಗ (organs) ದಾನಕ್ಕೆ ಪೋಷಕರಾದ ತಾಯಿ ಲಕ್ಷ್ಮಿ ಬಾಯಿ, ತಂದೆ ಸುರೇಶ್ ನಾಯಕ್ ಒಪ್ಪಿಗೆ ನೀಡಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ರಕ್ಷಿತಾ ನಾಯಕ್ ಮೃತ ದೇಹವಿದ್ದು, ಇಂದು ಸಂಜೆ ತಜ್ಞರ ತಂಡ ಚಿಕ್ಕಮಗಳೂರಿಗೆ ಆಗಮಿಸಲಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ 2 ಹೆಲಿಕ್ಯಾಪ್ಟರ್ನಲ್ಲಿ ಅಂಗಾಂಗ ರವಾನೆ ಮಾಡಲಿದ್ದು, ಇದೇ ಮೊದಲ ಬಾರಿಗೆ ಅಪರೂಪದ ಪ್ರಕರಣಕ್ಕೆ ಕಾಫಿನಾಡು ಸಾಕ್ಷಿಯಾಗಲಿದೆ.
ಅಡಿಕೆ ಕಳ್ಳರ ಬಂಧನ; 1 ಲಕ್ಷ ಮೌಲ್ಯದ ಅಡಿಕೆ ವಶಕ್ಕೆ
ಕಾರವಾರ: ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಅಂದಾಜು 1 ಲಕ್ಷ ಮೌಲ್ಯದ ಅಡಿಕೆ ವಶಕ್ಕೆ ಪಡೆದಿದ್ದಾರೆ. ಶೇಕರ್ ಗೌಡ (42), ರಾಘವೇಂದ್ರ ಶಿರಟ್ಟಿ (30) ಬಂಧಿತರು. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ ಭದ್ರಾವತಿ ಗ್ರಾಮದಲ್ಲಿ ಆಗಸ್ಟ್ 30ರಂದು ಘಟನೆ ನಡೆದಿದೆ. ಅಬ್ದುಲ್ ಮಮ್ಮದ ಸಾಬ್ ಅವರ ತೋಟದ ಮನೆಯಲ್ಲಿಟ್ಟದ್ದ 4 ಕ್ವಿಂಟಲ್ ಅಡಿಕೆಯನ್ನು ಖದೀಮರು ಕಳ್ಳತನ ಮಾಡಿದ್ದರು. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರೋ ರಾತ್ರಿ 5 ಕ್ವಿಂಟಾಲ್ ಅಡಿಕೆ ಕದ್ದು ಕಳ್ಳರು ಪರಾರಿ
ಮಂಡ್ಯ: ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ 5 ಕ್ವಿಂಟಾಲ್ನಷ್ಟು ಅಡಿಕೆ ಕದ್ದು ಕಳ್ಳರು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ. ಅಡಿಕೆ ಕದ್ದ ಕಳ್ಳರಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಜವರೇಗೌಡ ಎನ್ನುವವರು 2 ಎಕರೆಯಲ್ಲಿ ಅಡಿಕೆ ಬೆಳೆ ಬೆಳೆದಿದ್ದರು. ರಾತ್ರಿ ಕಳೆದು ಬೆಳಗಾಗುವುದರಲ್ಲಿ ತೋಟದಲ್ಲಿದ್ದ ಅಡಿಕೆ ಮಂಗ ಮಾಯವಾಗಿದ್ದು, ಸಂವೃದ್ದವಾಗಿ ಬೆಳೆದಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ಆರೋಪಿಗಳಿಗಾಗಿ ಪೊಲೀಸರಿಂದ ಶೋಧಕಾರ್ಯ ನಡೆದಿದೆ. ಕಿಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೊಲೆರೊ ಪಿಕ್ ಅಪ್ ಗೂಡ್ಸ್ ಕಾರಿಗೆ ಡಿಕ್ಕಿ, ಕಾರು ಚಾಲಕ ಸಾವು
ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಅಡಿಹುಡಿ ಗ್ರಾಮದ ಬಳಿ ಬೊಲೆರೊ ಪಿಕ್ ಅಪ್ ಗೂಡ್ಸ್ ಡಿಕ್ಕಿಯಾಗಿ ಕಾರು ಚಾಲಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸುಧೀರ್ ಸಿಂಧೆ(29) ಎಂದು ಗುರುತಿಸಲಾಗಿದೆ. ಚಿಕ್ಕಲಕಿ ಗ್ರಾಮದಿಂದ ಅಥಣಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಾವಳಗಿ ಪೊಲೀಸರ ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿ
ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿ ಬಂಧನ ಮಾಡಲಾಗಿದೆ. ಕಟಕೋಳ ಠಾಣೆ ಪೊಲೀಸರಿಂದ ಪತ್ನಿ, ಆಕೆಯ ಪ್ರಿಯಕರ ಬಂಧನ ಮಾಡಲಾಗಿದೆ. ಹೊಸೂರು ಪೂಲ್ ಬಳಿ ಪಾಂಡಪ್ಪ ಜಟಕನ್ನವರ (35) ಶವ ಪತ್ತೆಯಾಗಿತ್ತು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಕಟಕೋಳ ಪೊಲೀಸರು. ಇತನ ಪತ್ನಿ ಲಕ್ಷ್ಮೀ ಕೃಷಿ ಉಪಕರಣದಿಂದ ಪಾಂಡಪ್ಪ ಜಟಕನ್ನವರ್‌ನ್ನ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರಿಯಕರ ರಮೇಶ್ ಬಡಿಗೇರ ಎಂಬಾತನ ಜೊತೆಗೂಡಿ ಕೃತ್ಯ ಮಾಡಿದ್ದಾಳೆ. ಬಳಿಕ ಪಾಂಡಪ್ಪನ ಬೈಕ್ ಮೇಲೆ ಶವ ಹೊತ್ತೊಯ್ದು ಬಿಸಾಕಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಹಗ್ಗದಿಂದ ಕಟ್ಟಿ ಕಿರುಸೇತುವೆ ಬಳಿ ಬೈಕ್ ಬಿಸಾಕಿ ಪರಾರಿಯಾಗಿದ್ದಾರೆ. ಕೊಲೆ ಮಾಡಿ ಅಪಘಾತವೆಂಬ ರೀತಿ ಬಿಂಬಿಸಲು ಯತ್ನ ಮಾಡಿದ್ದಾರೆ.
ತನಗೆ ಏನೂ ಗೊತ್ತೆ ಇಲ್ಲದ ರೀತಿ ಮನೆಗೆ ಹೋಗಿದ್ದ ಪತ್ನಿ ಲಕ್ಷ್ಮೀ. ಮಾರನೇ ದಿನ ಗಂಡ ಮನೆಗೆ ಮರಳಿಲ್ಲ ಎಂದು ನಾಟಕವಾಡಿದ್ದಾಳೆನ. ಪತ್ನಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಪ್ರಕರಣ ಸಂಬಂಧ ರಮೇಶ್ ಬಡಿಗೇರ (36), ಲಕ್ಷ್ಮಿ ಜಟಕನ್ನವರ ಬಂಧನವಾಗಿದೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.