ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ನಾಟಕ ತಿರುಚಿದ ಆರೋಪ, ಪೊಲೀಸ್ ಆಯುಕ್ತರಿಗೆ ದೂರು

ಮೈಸೂರಿನಲ್ಲಿ ಡಿಸೆಂಬರ್ 31 ರಂದು ಮೈಸೂರಿನ ರಂಗಾಯಣ(Mysore Rangayana)ದ ಭೂಮಿಗೀತಾದಲ್ಲಿ ಸಾಂಬಶಿವ ಪ್ರಹಾಸನ ನಾಟಕ ನಡೆದಿದ್ದು, ಈ ನಾಟಕದಲ್ಲಿ ಕಂಬಾರರ ಸಾಂಬಶಿವ ಪ್ರಹಾಸನ ಕೃತಿಯನ್ನ ತಿರುಚಿ ನಾಟಕ ಪ್ರದರ್ಶನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ನಾಟಕ ತಿರುಚಿದ ಆರೋಪ, ಪೊಲೀಸ್ ಆಯುಕ್ತರಿಗೆ ದೂರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 03, 2023 | 8:43 AM

ಮೈಸೂರು:  ಡಿಸೆಂಬರ್ 31 ರಂದು ರಾತ್ರಿ ಮೈಸೂರಿನ ರಂಗಾಯಣ(Mysore Rangayana)ದ ಭೂಮಿಗೀತಾದಲ್ಲಿ ನಡೆದ ಡಾ. ಚಂದ್ರಶೇಖರ್ ಕಂಬಾರರ(Dr.ChandraShekhar Kambara) ಸಾಂಬಶಿವ ಪ್ರಹಾಸನ ನಾಟಕವನ್ನು ಅಸಹ್ಯಕರವಾಗಿ ತಿರುಚಿ ಪ್ರದರ್ಶಿಸಲಾಗಿದೆ.  ರಂಗಾಯಣದಲ್ಲಿ ನನ್ನ ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದಾರೆ. ನನ್ನ ಯಾವುದೇ ನಾಟಕದಲ್ಲಿ ವ್ಯಕ್ತಿಗತ ನಿಂದನೆ ಇರಲು ಸಾಧ್ಯವೇ ಇಲ್ಲ, ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದವರ ಮೇಲೆ ಹಾಗೂ ಇಲ್ಲದ ಸಾಹಿತ್ಯ ಸೇರಿಸಿದ ನಿರ್ದೇಶಕರ ಮೇಲೂ ಕ್ರಮವಹಿಸಬೇಕು ಎಂದು ಮೈಸೂರು ನಗರದ ಪೊಲೀಸರಿಗೆ ಪತ್ರದ ಮೂಲಕ ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದ್ದಾರೆ.

ಕಳೆದ ಶನಿವಾರ(ಡಿ.31) ರಂದು ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ನಡೆದ ಸಾಂಬಶಿವ ಪ್ರಹಾಸನ ನಾಟಕ ದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ನಾಟಕ ತಂಡದ ವಿರುದ್ಧ ಅಭಿಮಾನಿಗಳು ಹಾಗೂ ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ರಮಣ್ಯ ಅವರಿಂದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:Mysore News: ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಪಮಾನ ಆರೋಪ, ದೂರು ನೀಡಿದ ಅಭಿಮಾನಿಗಳು

ಇನ್ನು  ನಾಟಕದಲ್ಲಿ ವಾಸ್ತವ ಬಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ನಾಟಕ ಪ್ರದರ್ಶನದ ಅಂತ್ಯದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ಅನ್ನಭಾಗ್ಯ ಕೊಟ್ಟು ಸೋಂಬೇರಿ ಮಾಡಿದ್ದೀರಿ ಎಂದು ಯೋಜನೆಯ ಬಗ್ಗೆ ಅಪಹಾಸ್ಯ ಮಾಡಲಾಗಿದೆ. ಈ ಬಾರಿ ಬಾದಾಮಿನು ಸಿಗಲ್ಲ, ಸಿದ್ದು ಗೊರಕೆ ಹೊಡೆದು ರಾಜ್ಯ ಹಾಳುಮಾಡಿದ್ದೀರಿ ಎಂದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಕೇಡಿ ಅಂಕಲ್ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಾಟಕದಲ್ಲಿ ಅಭಿನಯಿಸಿರುವ 18 ಮಂದಿಯ ತಂಡದ ವಿರುದ್ಧವು ದೂರು ನೀಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 am, Tue, 3 January 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ