ಮೈಸೂರು: ಮೈಸೂರು ಕಲಾವಿದನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Kariappa) ವಿರುದ್ಧ ಆರೋಪ ಮಾಡಲಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬಾಯಲ್ಲಿ ಕೀಳು ಮಟ್ಟದ ಭಾಷೆ ಪ್ರಯೋಗ ಮಾಡಿದ್ದು, ಕಲಾವಿದನಿಗೆ ಕಚಡಾ ಎಂಬ ಪದ ಪ್ರಯೋಗ ಮಾಡಲಾಗಿದೆ ಎನ್ನಲಾಗುತ್ತಿದೆ. ಅನುರಾಗ್ ಶರ್ಮಾ ಎಂಬ ಕಲಾವಿದನಿಗೆ ಪೋನ್ನಲ್ಲಿ ನಿಂದನೆ ಮಾಡಲಾಗಿದೆ ಎನ್ನುವ ಆಡಿಯೋ ವೈರಲ್ ಆಗಿದೆ. ಕಲಾವಿದರ ಆಯ್ಕೆ ಸಂದರ್ಶನಕ್ಕೆ ಅನುರಾಗ್ ಶರ್ಮ ಹೋಗಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸಂದರ್ಶನ ಮಾಡದೇ ಹೊರಗೆ ಕಳುಹಿಸಿದ್ದ ಅಡ್ಡಂಡ ಕಾರ್ಯಪ್ಪ, ಬೆಳಿಗ್ಗೆ ಪೋನ್ ಮಾಡಿ ಕೇಳಿದ್ದಕ್ಕೆ ಕಲಾವಿದನ ವಿರುದ್ಧ ವಾಗ್ದಾಳಿ ಮಾಡಲಾಗಿದೆ. ಅಡ್ಡಂಡ ಕಾರ್ಯಪ್ಪ ವಿರುದ್ಧ ಕನ್ನಡ ಸಂಸ್ಕೃತಿ ಇಲಾಖೆಗೆ ಕಲಾವಿದ ದೂರು ನೀಡಿದ್ದಾನೆ.
ಇದನ್ನೂ ಓದಿ: Srirangapatna Travel Guide: ಶ್ರೀರಂಗಪಟ್ಟಣದ ವಿಶೇಷತೆ ಮತ್ತು ನೀವು ಭೇಟಿ ನೀಡಬೇಕಾದ ಸ್ಥಳಗಳು ಇಲ್ಲಿವೆ
ರಂಗಾಯಣದ ಸಂದರ್ಶನ ಪಾರದರ್ಶಕತೆ ಇಲ್ಲ. ಸಂದರ್ಶನ ರದ್ದು ಮಾಡಿ ಹೊಸ ಸಂದರ್ಶನ ಮಾಡುವಂತೆ ಒತ್ತಾಯ ಮಾಡಲಾಗಿದೆ. ಬಹುರೂಪಿ ಉದ್ಘಾಟನೆಗೆ ಚಕ್ರವರ್ತಿ ಸೂಲಿ ಬೆಲೆ ಆಗಮನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಲಾವಿದ ಅನುರಾಗದ ಶರ್ಮಾ ಆರೋಪ ಮಾಡಿದರು.
ಇದನ್ನೂ ಓದಿ: ನಾವೇನೂ ಯಾರದೇ ಆಸ್ತಿ ಕಬಳಿಸುತ್ತಿಲ್ಲ; ಸರ್ಕಾರಗಳಿಂದ ರಾಜ ಮನೆತನಕ್ಕೆ ಕಿರುಕುಳವೇ ಹೆಚ್ಚು: ರಾಜವಂಶಸ್ಥೆ ಪ್ರಮೋದಾದೇವಿ