Humanity in Distress: ಪುಟ್ಟ ಮಗನ ಮೈಮೇಲೆ ಬಿಸಿ ನೀರು ಬಿದ್ದು ಅಸುನೀಗಿದ್ದರೂ ಆ್ಯಂಬುಲೆನ್ಸ್ ಡ್ರೈವರ್ ಆಗಿರುವ ಅಪ್ಪ ಕರ್ತವ್ಯಕ್ಕೆ ಹಾಜರು

| Updated By: ಸಾಧು ಶ್ರೀನಾಥ್​

Updated on: Jun 15, 2021 | 4:57 PM

Ambulance Driver: ಡ್ರೈವರ್ ಮುಬಾರಕ್ ಅವರ ಪುತ್ರನ ಮೈಮೇಲೆ ಬಿಸಿನೀರು ಬಿದ್ದ ಕಾರಣ ಆತ ಸಾವನ್ನಪ್ಪಿದ್ದ. ಅಂತಹ ಕ್ಲಿಷ್ಟಕರ ಸಮಯದಲ್ಲೂ ನಿನ್ನೆ ತಡರಾತ್ರಿ ಮುಬಾರಕ್ ಕರ್ತವ್ಯಕ್ಕೆ ತೆರಳಿದ್ದಾರೆ. ಸಹಾಯವಾಣಿಗೆ ಕರೆ ಬಂದಾಗ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಸಾಗಿಸುವ ಮೂಲಕ ಡ್ರೈವರ್ ಮುಬಾರಕ್ ಮಾನವೀಯತೆ ಮೆರೆದಿದ್ದಾರೆ.

Humanity in Distress: ಪುಟ್ಟ ಮಗನ ಮೈಮೇಲೆ ಬಿಸಿ ನೀರು ಬಿದ್ದು ಅಸುನೀಗಿದ್ದರೂ ಆ್ಯಂಬುಲೆನ್ಸ್ ಡ್ರೈವರ್ ಆಗಿರುವ ಅಪ್ಪ ಕರ್ತವ್ಯಕ್ಕೆ ಹಾಜರು
Humanity in Distress: ಪುಟ್ಟ ಮಗನ ಮೈಮೇಲೆ ಬಿಸಿ ನೀರು ಬಿದ್ದು ಅಸುನೀಗಿದ್ದರೂ... ಆ್ಯಂಬುಲೆನ್ಸ್ ಡ್ರೈವರ್ ಆಗಿರುವ ಅಪ್ಪ ಕರ್ತವ್ಯಕ್ಕೆ ಹಾಜರು
Follow us on

ಮೈಸೂರು: ತನ್ನ ಪುಟ್ಟ ಕಂದನ ಸಾವಿನ ಸಂದರ್ಭದಲ್ಲಿ ತಂದೆ ಕರ್ತವ್ಯ ಪ್ರಜ್ಞೆ ತೋರಿದ ಕರುಳು ಹಿಂಡುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಗನ ಸಾವಿನ ಸುದ್ದಿ ಕೇಳಿಯೂ ತಂದೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದ ವ್ಯಕ್ತಿ ಸಹಾಯವಾಣಿ ಕೇಂದ್ರದ ಆ್ಯಂಬುಲೆನ್ಸ್ ಡ್ರೈವರ್ ಮುಬಾರಕ್. ಇವರು ಮೈಸೂರಿನ ಸಿದ್ದಿಕ್ ನಗರದ ನಿವಾಸಿ.

ಡ್ರೈವರ್ ಮುಬಾರಕ್ ಅವರ ಪುತ್ರನ ಮೈಮೇಲೆ ಬಿಸಿನೀರು ಬಿದ್ದ ಕಾರಣ ಆತ ಸಾವನ್ನಪ್ಪಿದ್ದ. ಅಂತಹ ಕ್ಲಿಷ್ಟಕರ ಸಮಯದಲ್ಲೂ ನಿನ್ನೆ ತಡರಾತ್ರಿ ಮುಬಾರಕ್ ಕರ್ತವ್ಯಕ್ಕೆ ತೆರಳಿದ್ದಾರೆ. ಸಹಾಯವಾಣಿಗೆ ಕರೆ ಬಂದಾಗ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಸಾಗಿಸುವ ಮೂಲಕ ಡ್ರೈವರ್ ಮುಬಾರಕ್ ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಇವರ ಕರ್ತವ್ಯಪ್ರಜ್ಞೆಗೆ ಮೂಕ ವಿಸ್ಮಿತರಾಗಿದ್ದಾರೆ.

ತನ್ನ ಪುಟ್ಟ ಕಂದನ ಸಾವಿನ ವೇಳೆಯೂ ಕರ್ತವ್ಯ ಪ್ರಜ್ಞೆ ತಂದೆ

ಸಾವಿನಲ್ಲೂ ಸಾರ್ಥಕತೆ: ನಟ ಸಂಚಾರಿ ವಿಜಯ್​  ಅಂಗಾಂಗಗಳು ಯಾರಿಗೆಲ್ಲ ಜೀವ ತುಂಬಿದೆ ಗೊತ್ತಾ? 
ಬೆಂಗಳೂರು:  ನಡುರಾತ್ರಿ ನಡೆದಿದ್ದ ಆಕಸ್ಮಿಕ ಅಪಘಾತದಲ್ಲಿ ಅಕಾಲಿಕವಾಗಿ ಪ್ರಾಣತೆತ್ತ ಯುವ ಪ್ರತಿಭಾನ್ವಿತ ನಟ  ಸಂಚಾರಿ ವಿಜಯ್  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ,  ಸಂಚಾರಿ ವಿಜಯ್​ ಅವರ ಅಂಗಾಂಗ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿ ನಡೆದಿದೆ.

ಸಂಚಾರಿ ವಿಜಯ್​  ಅವರ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿದ್ದು ಮಹಿಳೆಯೊಬ್ಬರಿಗೆ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್  ಮಾಡಲಾಗಿದೆ.  34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ನಡೆದಿದೆ.

ಇನ್ನು  ನಟ ಸಂಚಾರಿ ವಿಜಯ್ ಅವರ ಕಣ್ಣುಗಳು​  ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಜೋಡಣೆಯಾಗಿದೆ.  ಒಬ್ಬರಿಗೆ ಕಣ್ಣು ಜೋಡಣೆ ಈಗಾಗಲೇ ಯಶಸ್ವಿಯಾಗಿದೆ. ಮತ್ತೊಬ್ಬರಿಗೆ ಕಣ್ಣು ಜೋಡಣೆ ಕಾರ್ಯ ನಡೆಯುತ್ತಾ ಇದೆ.

(Ambulance Driver Mubarak exhibits Humanity in Distress in mysuru even as he loses son)

Hunting: ನಾಲ್ವರು ಸ್ನೇಹಿತರು ಕಳೆದ ರಾತ್ರಿ ಬೇಟೆಗೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ಸ್ನೇಹಿತ ಸ್ಥಳದಲ್ಲೇ ಸಾವು

ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ

Published On - 4:43 pm, Tue, 15 June 21