ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಹುಲಿ ದಾಳಿ ಪ್ರಕರಣ; ರೈತನಿಗೆ ಗಂಭೀರ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 21, 2023 | 10:03 PM

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವಿಭಾಗದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಮುದ್ದೇನಹಳ್ಳಿ ಗ್ರಾಮದ ರೈತ ರಮೇಶ್​ ಎಂಬುವವರ ಮೇಲೆ ಹುಲಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರಮೇಶ್​ನನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಹುಲಿ ದಾಳಿ ಪ್ರಕರಣ; ರೈತನಿಗೆ ಗಂಭೀರ ಗಾಯ
ಪ್ರಾತಿನಿಧಿಕ
Follow us on

ಮೈಸೂರು, ಸೆ.21: ಇತ್ತೀಚೆಗಷ್ಟೆ ಏಳು ವರ್ಷದ ಬಾಲಕನನ್ನು ಹುಲಿ(Tiger) ಹುತ್ತೊಯ್ದು ಹತ್ಯೆ ಮಾಡಿತ್ತು. ಈ ಪ್ರಕರಣ ಮಾಸುವುದರೊಳಗೆ ಜಿಲ್ಲೆಯಲ್ಲಿ ಮತ್ತೊಂದು ಹುಲಿ ದಾಳಿ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ(Nagarhole National Park) ದ ಆನೆ ಚೌಕೂರು ವಿಭಾಗದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಮುದ್ದೇನಹಳ್ಳಿ ಗ್ರಾಮದ ರೈತ ರಮೇಶ್​ ಎಂಬುವವರ ಮೇಲೆ ಹುಲಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರಮೇಶ್​ನನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೌದು, ಸೆಪ್ಟಂಬರ್​ 04 ರಂದು ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಹುಲಿಯೊಂದು ಬಾಲಕನನ್ನು ಬಲಿಪಡೆದುಕೊಂಡಿತ್ತು. ಶಾಲೆ ಮುಗಿಸಿ ಪೋಷಕರನ್ನು ನೋಡಲು ಜಮೀನಿಗೆ ಬಂದ 7ವರ್ಷದ ಚರಣ್ ಎಂಬಾತ ಹುಲಿ ದಾಳಿಗೆ ಕೊನೆಯುಸಿರೆಳೆದಿದ್ದ. ಹೌದು, ಜಮೀನಿನಲ್ಲಿ ಪೋಷಕರು ಕೆಲಸದಲ್ಲಿ ತೊಡಗಿದ್ದರು. ಇದರಿಂದ ಚರಣ್ ಅಲ್ಲೇ ಇದ್ದ ಮರದ ಕೆಳಗೆ ಕುಳಿತುಕೊಂಡಿದ್ದಾನೆ. ಕೆಲಸ ಮುಗಿಸಿದ ಕೃಷ್ಣ ನಾಯಕ ತಮ್ಮ ಮಗ ಚರಣ್‌ ನೋಡಲು ಮರದ ಬಳಿ ಬಂದಾಗ ಮನ ಕಾಣಿಸಿಲ್ಲ. ಹೀಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ, ಚರಣ್ ಎಲ್ಲೂ ಪತ್ತೆಯಾಗಿಲ್ಲ. ಚರಣ್ ಕುಳಿತಿದ್ದ ಸ್ವಲ್ಪ ದೂರದಲ್ಲಿ ಚರಣ್ ಮೃತದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕೊಡಗಿನಲ್ಲಿ ಮುಂದುವರಿದ ವ್ಯಘ್ರ ಪ್ರತಾಪ: 24 ಗಂಟೆಯಲ್ಲಿ ಹುಲಿ ದಾಳಿಗೆ ಒಂದೇ ಗ್ರಾಮದಲ್ಲಿ ಇಬ್ಬರ ಸಾವು, ಜನರಲ್ಲಿ ಭಾರೀ ಆತಂಕ

ವೃದ್ದೆಯ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಸಾವು

ಆನೇಕಲ್: ಲಾರಿಯೊಂದು ವೃದ್ದೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬೊಮ್ಮಂಡನಹಳ್ಳಿಯಲ್ಲಿ ನಡೆದಿದೆ. ವೆಂಕಟಮ್ಮ(85) ಸಾವನ್ನಪ್ಪಿದ ವೃದ್ದೆ. ಗ್ರಾಮದ ರಸ್ತೆಯಲ್ಲಿ ನಡೆದು ಹೋಗುವಾಗ, ಬೊಮ್ಮಂಡಹಳ್ಳಿಯಿಂದ ಆನೇಕಲ್ ಮಾರ್ಗವಾಗಿ ಲಾರಿ ಬರುತ್ತಿತ್ತು. ಈ ವೇಳೆ ಘಟನೆ ನಡೆದಿದೆ. ಇನ್ನು ಚಾಲಕನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಈ ಕುರಿತು ಸ್ಥಳಕ್ಕೆ ಜಿಗಣಿ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ