ಮೈಸೂರು: ಹುಲಿ ದಾಳಿಗೆ ಬಾಲಕ ಸಾವು, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಅರಣ್ಯ ಇಲಾಖೆ

ಶಾಲೆ ಮುಗಿಸಿ ಜಮೀನಿಗೆ ಬಂದ 7ವರ್ಷದ ಚರಣ್ ಎಂಬ ಬಾಲಕ ಹುಲಿ ದಾಳಿಗೆ ಬಲಿಯಾಗಿದ್ದಾನೆ. ಇನ್ನು ಅರಣ್ಯ ಇಲಾಖೆ ಮೃತ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದೆ. ಹಾಗೂ ಹುಲಿ ಪತ್ತೆ ಹಚ್ಚಿ ಸೆರೆ ಹಿಡಿಯುವ ಭರವಸೆ ನೀಡಿದೆ. ಸಂಜೆ ಬಳಿಕ ಹೊರಗೆ ಓಡಾಡದಂತೆ ಗ್ರಾಮಸ್ಥರಿಗೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ.

ಮೈಸೂರು: ಹುಲಿ ದಾಳಿಗೆ ಬಾಲಕ ಸಾವು, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಅರಣ್ಯ ಇಲಾಖೆ
ಹುಲಿ ದಾಳಿಗೆ ಬಲಿಯಾದ ಚರಣ್
Follow us
| Updated By: ಆಯೇಷಾ ಬಾನು

Updated on:Sep 05, 2023 | 9:57 AM

ಮೈಸೂರು, ಸೆ.05: ಮೈಸೂರಿನ ಗಡಿ ತಾಲೂಕು ಹೆಚ್.ಡಿ.ಕೋಟೆ(HD Kote) ತಾಲೂಕಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ಮುಂದುವರೆದಿದೆ. ಹುಲಿಯೊಂದು ಬಾಲಕನನ್ನು ಬಲಿಪಡೆದುಕೊಂಡಿದೆ. ಶಾಲೆ ಮುಗಿಸಿ ಜಮೀನಿಗೆ ಬಂದ 7ವರ್ಷದ ಚರಣ್ ಎಂಬ ಬಾಲಕ ಹುಲಿ ದಾಳಿಗೆ ಬಲಿಯಾಗಿದ್ದಾನೆ. ಇನ್ನು ಅರಣ್ಯ ಇಲಾಖೆ ಮೃತ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದೆ. ಹಾಗೂ ಹುಲಿ ಪತ್ತೆ ಹಚ್ಚಿ ಸೆರೆ ಹಿಡಿಯುವ ಭರವಸೆ ನೀಡಿದೆ. ಸಂಜೆ ಬಳಿಕ ಹೊರಗೆ ಓಡಾಡದಂತೆ ಗ್ರಾಮಸ್ಥರಿಗೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ಹೊರವಲಯದಲ್ಲಿ ಗ್ರಾಮದ ಕೃಷ್ಣನಾಯಕ ಪುತ್ರ ಚರಣ್ ಹುಲಿ ದಾಳಿಗೆ ಬಲಿಯಾಗಿದ್ದಾನೆ. ಸೆ.04ರ ಬೆಳಿಗ್ಗೆ ಶಾಲೆಗೆ ಹೋಗಿದ್ದ ಚರಣ್ ವಾಪಸ್ಸು ಬಂದು ಪೋಷಕರನ್ನ ನೋಡಲು ಜಮೀನಿಗೆ ಬಂದಿದ್ದ. ಈ ವೇಳೆ ಜಮೀನಿನಲ್ಲಿ ಪೋಷಕರು ಮೆಣಸಿಕಾಯಿ ಬಿಡಿಸುತ್ತಿದ್ದರು. ಇದರಿಂದ ಚರಣ್ ಅಲ್ಲೇ ಇದ್ದ ಮರದ ಕೆಳಗೆ ಕುಳಿತಿದ್ದ. ಕೆಲಸ ಮುಗಿಸಿದ ಕೃಷ್ಣ ನಾಯಕ ತಮ್ಮ ಮಗ ಚರಣ್‌ ನೋಡಲು ಮರದ ಬಳಿ ಬಂದಾಗ ಮನ ಕಾಣಿಸಿಲ್ಲ. ಹೀಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಚರಣ್ ಎಲ್ಲೂ ಪತ್ತೆಯಾಗಿಲ್ಲ. ಚರಣ್ ಕುಳಿತಿದ್ದ ಸ್ವಲ್ಪ ದೂರದಲ್ಲಿ ಚರಣ್ ಮೃತದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿತ್ತು. ಚರಣ್ ಒಂದು ಕಾಲಿನ ಭಾಗವನ್ನು ಹುಲಿ ತಿಂದು ಹಾಕಿತ್ತು.

ಇದನ್ನೂ ಓದಿ: ಕಾಫಿನಾಡಿನ ಮಲೆನಾಡಿಗರಿಗೆ ಶಾಪವಾದ ಕಾಡು ಪ್ರಾಣಿಗಳು; ಹುಲಿ,ಕಾಡಾನೆ ಕಾಟಕ್ಕೆ ತತ್ತರಿಸಿದ ಮಲೆನಾಡಿಗರು

ಸ್ಥಳಕ್ಕೆ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಚರಣ್ ಪೋಷಕರು ಮೃತದೇಹವನ್ನು ಅಲ್ಲಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಮೊದಲು ಚರಣ್‌ನನ್ನು ಕೊಂದ ಹುಲಿಯನ್ನು ಪತ್ತೆ ಹಚ್ಚುವಂತೆ ಒತ್ತಾಯ ಮಾಡಿದ್ರು. ಸದ್ಯ ಅರಣ್ಯ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಹುಡುಕಾಟಕ್ಕಾಗಿ ಸಿದ್ದವಾಗಿದೆ. ಅದಕ್ಕಾಗಿ ದುಬಾರೆ ಕ್ಯಾಂಪ್ ನ ಸುಗ್ರೀವ, ಪ್ರಶಾಂತ ಆನೆಗಳನ್ನು ಕರೆಸಲಾಗಿದೆ.

ಇನ್ನು ಈ ಬಗ್ಗೆ ನಿನ್ನೆ ಸಚಿವ ಈಶ್ವರ್ ಖಂಡ್ರೆಯವರು ಕೂಡ ಟ್ವೀಟ್ ಮಾಡಿದ್ದರು.

ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ

ಇನ್ನು ಮತ್ತೊಂದೆಡೆ ಮೈಸೂರಿನ ಟಿ.ನರಸೀಪುರ ತಾಲ್ಲೂಕಿನಲ್ಲಿ ಮತ್ತೆ ಚಿರತೆ ಉಪಟಳ ಶುರುವಾಗಿದೆ. ಸಾಕು ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ಮಾಡುತ್ತಿವೆ. ತಾಲೂಕಿನ ಕಾವೇರಿಪುರ ಮೂಡಲಹುಂಡಿ ಗ್ರಾಮದಲ್ಲಿ ಎರಡು ಮೇಕೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ನಿನ್ನೆ ಅದೇ ಗ್ರಾಮದ ಕಾಲುವೆ ಏರಿ ಸಮೀಪ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ಉಪಟಳದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೊಲ,ಗದ್ದೆಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಸದ್ಯ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:28 am, Tue, 5 September 23