Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಿನ ಮಲೆನಾಡಿಗರಿಗೆ ಶಾಪವಾದ ಕಾಡು ಪ್ರಾಣಿಗಳು; ಹುಲಿ,ಕಾಡಾನೆ ಕಾಟಕ್ಕೆ ತತ್ತರಿಸಿದ ಮಲೆನಾಡಿಗರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದ ಜನರಿಗೆ ಕಾಡು ಪ್ರಾಣಿಗಳು ಶಾಪವಾಗಿ ಪರಿಣಮಿಸಿದೆ. ಒಂದು ದಿಕ್ಕಿನಿಂದ ಕಾಡಾನೆ ಧಾಂದಲೆ ಮಾಡುತ್ತಿದ್ರೆ, ಮತ್ತೊಂದು ದಿಕ್ಕಿನಿಂದ ಹುಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕಾಡು ಪ್ರಾಣಿಗಳ ಕಾಟಕ್ಕೆ ಜನರು ಜೀವ ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದ್ರು, ಅರಣ್ಯ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದೆ.

ಕಾಫಿನಾಡಿನ ಮಲೆನಾಡಿಗರಿಗೆ ಶಾಪವಾದ ಕಾಡು ಪ್ರಾಣಿಗಳು; ಹುಲಿ,ಕಾಡಾನೆ ಕಾಟಕ್ಕೆ ತತ್ತರಿಸಿದ ಮಲೆನಾಡಿಗರು
ಚಿಕ್ಕಮಗಳೂರು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: May 18, 2023 | 11:30 AM

ಚಿಕ್ಕಮಗಳೂರು: ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈಗೆ ಬಂತು ಅನ್ನುವಷ್ಟರಲ್ಲಿ ನಾಶ ಮಾಡುತ್ತಿರುವ ಕಾಡಾನೆ, ಇತ್ತ ಹುಲಿಯ ಆರ್ಭಟಕ್ಕೆ ಬಲಿಯಾಗಿರುವ ಕಾಮಧೇನು. ಹೌದು ಜಿಲ್ಲೆಯ ಮಲೆನಾಡು ಭಾಗದ ಕಾಡಾಂಚಿನ ಗ್ರಾಮದಲ್ಲಿ ಜನರು ಕಾಡು ಪ್ರಾಣಿಗಳ ಉಪಟಳಕ್ಕೆ ಜೀವ ಭಯದಲ್ಲಿ ಬದುಕುವುದರ ಜೊತೆಗೆ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ನಿರಂತರವಾಗಿ ಕಾಡಾನೆ, ಹುಲಿ ಕಾಟಕ್ಕೆ ಸುಸ್ತಾಗಿ ಹೋಗಿದ್ದಾರೆ. ಮೂಡಿಗೆರೆ (Mudigere) ತಾಲೂಕಿನ ಬಣಕಲ್, ಗುತ್ತಿಹಳ್ಳಿ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮದಲ್ಲಿ ಕಾಡಾನೆ ಹಾವಳಿ ಇಟ್ಟು ಲಕ್ಷಾಂತರ ಮೌಲ್ಯದ ಅಡಿಕೆ ಬಾಳೆ, ಕಾಫಿ ಬೆಳೆ ನಾಶ ಮಾಡುತ್ತಿದ್ರೆ. ಇತ್ತ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಮೂಡಿಗೆರೆ ಸಮೀಪದ ಬಾಳೂರು, ಹೊರಟ್ಟಿ, ಭಾರತಿಬೈಲು, ಮತ್ತಿಕಟ್ಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ಕಳೆದ ಒಂದು ತಿಂಗಳಿನಿಂದ ಸಂಚಾರ ಮಾಡುತ್ತಿದೆ. ಕಾಫಿ ತೋಟ‌, ಗ್ರಾಮದ ರಸ್ತೆಗಳಲ್ಲಿ ಹುಲಿ‌ ಹೆಜ್ಜೆ ಪತ್ತೆಯಾಗುತ್ತಿದ್ದು ಜನ ಜೀವ ಭಾಯದಿಂದ ಗ್ರಾಮಸ್ಥರು ಬದುಕುತ್ತಿದ್ದಾರೆ.

ಹುಲಿ ಭಯದಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ಬರ್ತಿಲ್ಲ ಕಾರ್ಮಿಕರು

ಚಾರ್ಮುಡಿ ಘಾಟ್ ನಲ್ಲೂ ಒಂಟಿ ಸಲಗ ಕಾಟಕ್ಕೆ ವಾಹನ ಸವಾರರು ಪರದಾಟ. ಮೂಡಿಗೆರೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ವ್ಯಾಘ್ರ ಸಂಚಾರ ಮಾಡುತ್ತಿದ್ದು, ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗುತ್ತಿದೆ. ಇದರಿಂದ ಭಯ ಭೀತರಾಗಿರುವ ಕಾಫಿ ತೋಟದ ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಜೀವ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಹುಲಿ ಒಂದು ಕಡೆ ಭಯ ಹುಟ್ಟಿಸುತ್ತಿದ್ದರೆ ಮತ್ತೊಂದು ಕಡೆ ಒಂಟಿ ಸಲಗ ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್​ನಲ್ಲಿ ಪ್ರತ್ಯಕ್ಷವಾಗುತ್ತಿದ್ದು. ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ. ಒಂದು ದಿಕ್ಕಿನಿಂದ ಹುಲಿ ಆತಂಕ ಮೂಡಿಸುತ್ತಿದ್ದರೆ ಮತ್ತೊಂದು ದಿಕ್ಕಿನಿಂದ ಮಲೆನಾಡಿಗರಿಗೆ ಕಾಡಾನೆ ನಿದ್ದೆ ಕೆಡಿಸತೊಡಗಿದೆ.

ಇದನ್ನೂ ಓದಿ:ಹೆಚ್ಚಾದ ಆನೆ ಹಾವಳಿ; ಕೋಲಾರ-ಆಂಧ್ರ ಗಡಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ

ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳು ಶಾಪವಾಗಿ ಪರಿಣಮಿಸಿದೆ. ಅನೇಕ ಬಾರಿ ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದು, ಹುಲಿ ಸಂಚರಿಸುವ ಪ್ರದೇಶದಲ್ಲಿ ಬೋನ್ ಅಳವಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದ್ದು, ನಿರ್ಲಕ್ಷ ತೋರಿಸುತ್ತಿದೆ. ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ನಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.

ವರದಿ: ಅಶ್ವಿತ್ ಟಿವಿ9‌ ಚಿಕ್ಕಮಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ