ಸಫಾರಿ ವೇಳೆ ಅಪರೂಪದ ಕರಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರು ಫಿದಾ!
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಬಹು ಅಪರೂಪದ ಕರಿಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರ ಅಚ್ಚರಿಗೆ ಕಾರಣವಾಯ್ತು. ಕರಿಚಿರತೆಯನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ. ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಕಾಡುಪ್ರಾಣಿಗಳನ್ನು ಸೆರೆ ಹಿಡಿದಿದ್ದಾರೆ. ಉದ್ಯಾನವನದಲ್ಲಿ ಬಿಸಿಲಿನ ಬೇಗೆಗೆ ನೀರಿನ ಹೊಂಡದಲ್ಲಿದ್ದ ಹುಲಿ ಸಫಾರಿ ತೆರಳುವ ಮಾರ್ಗದಲ್ಲಿ ಪ್ರವಾಸಿಗರ ವಾಹನಕ್ಕೆ ಅಡ್ಡ ಬಂದಿದೆ. ಪ್ರವಾಸಿಗರನ್ನ ಕಂಡರೂ ಬೆಚ್ಚಿಬೀಳದೆ ವಾಹನದ ಬಳಿಯೇ ಸುಳಿದಾಡಿದೆ. ಕಪ್ಪು ಚಿರತೆ ಸೇರಿ ಹುಲಿಗಳ ಓಡಾಟ ಮೊಬೈಲ್ನಲ್ಲಿ ಸೆರೆಯಾಗಿದ್ದು, ಪ್ರವಾಸಿಗರು […]
Follow us on
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಬಹು ಅಪರೂಪದ ಕರಿಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರ ಅಚ್ಚರಿಗೆ ಕಾರಣವಾಯ್ತು. ಕರಿಚಿರತೆಯನ್ನು ಕಂಡ ಪ್ರವಾಸಿಗರು ಫಿದಾ ಆಗಿದ್ದಾರೆ.
ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಕಾಡುಪ್ರಾಣಿಗಳನ್ನು ಸೆರೆ ಹಿಡಿದಿದ್ದಾರೆ. ಉದ್ಯಾನವನದಲ್ಲಿ ಬಿಸಿಲಿನ ಬೇಗೆಗೆ ನೀರಿನ ಹೊಂಡದಲ್ಲಿದ್ದ ಹುಲಿ ಸಫಾರಿ ತೆರಳುವ ಮಾರ್ಗದಲ್ಲಿ ಪ್ರವಾಸಿಗರ ವಾಹನಕ್ಕೆ ಅಡ್ಡ ಬಂದಿದೆ. ಪ್ರವಾಸಿಗರನ್ನ ಕಂಡರೂ ಬೆಚ್ಚಿಬೀಳದೆ ವಾಹನದ ಬಳಿಯೇ ಸುಳಿದಾಡಿದೆ. ಕಪ್ಪು ಚಿರತೆ ಸೇರಿ ಹುಲಿಗಳ ಓಡಾಟ ಮೊಬೈಲ್ನಲ್ಲಿ ಸೆರೆಯಾಗಿದ್ದು, ಪ್ರವಾಸಿಗರು ಸಂತಸಪಟ್ಟಿದ್ದಾರೆ.