ಮೈಸೂರು: ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆ 27 ವರ್ಷದ ಮದನ್ ಎಂಬ ಯುವಕನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್, ಕಾವೇರಿ ಆಸ್ಪತ್ರೆ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದ.
ಅಪಘಾತದಲ್ಲಿ ಮದನ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಮಿದುಳು ನಿಷ್ಕ್ರಿಯಗೊಂಡ ಕಾರಣ ಹೃದಯ ಸೇರಿ ಹಲವು ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮದನ್ ಹೃದಯ, ಶ್ವಾಸಕೋಶ, ಲಿವರ್, ಕಿಡ್ನಿ, ಕಾರ್ನಿಯಾ ಸೇರಿ ಹಲವು ಅಂಗಾಂಗ ದಾನ ಮಾಡಲಾಗಿದೆ. ಬರೋಬ್ಬರಿ 9 ಜನರ ಬಾಳಿಗೆ ಮದನ್ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಹೃದಯ ರವಾನೆ ಮಾಡಲಾಗಿದೆ. ಇದನ್ನೂ ಓದಿ: Mysore: ಯುವಕನ ಅಂಗಾಂಗ ದಾನದಿಂದ 8 ಮಂದಿಯ ಬಾಳಿಗೆ ಬೆಳಕು
ಯುವಕನ ಅಂಗಾಂಗ ದಾನದಿಂದ 8 ಮಂದಿಯ ಬಾಳಿಗೆ ಬೆಳಕು
ಮೈಸೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ (Brain Dead)ಗೊಂಡ ಹಿನ್ನೆಲೆ ಆತನ ಅಂಗಾಂಗಗಳನ್ನು ದಾನ (Organs Donate) ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮರೆದಿದ್ದಾರೆ. ಯುವಕನ ಅಂಗಾಂಗ ದಾನದಿಂದಾಗಿ ಒಟ್ಟು 8 ಜನರ ಬಾಳಿಗೆ ಬೆಳಕು ನೀಡಿದಂತಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ನಿವಾಸಿ ಲೋಹಿತ್ ಕಳೆದ ವಾರ ಕಾರು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನದ ಮೂಲಕ ಸಾರ್ಥಕ ಜೀವನ ಮರೆದಿದ್ದಾರೆ.
ಕಳೆದ ವಾರ ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕನಾಗಿದ್ದ ಪಿರಿಯಾಪಟ್ಟಣ ನಿವಾಸಿ ಲೋಹಿತ್ ಅವರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದವು. ಅದರಂತೆ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಲೋಹಿತ್ನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ