ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ದಕ್ಷಿಣ ವಯಲದಲ್ಲಿ ಮೊದಲ ಪ್ರಮಾಣೀಕೃತ ರೈಲು ಎಂದು ಹೆಸರು ಪಡೆದುಕೊಂಡಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಶತಾಬ್ದಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ: 12007/12008) ದಕ್ಷಿಣ ವಲಯದ ಮೊದಲ ರೈಲು ಸೇವೆಯಾಗಿದೆ. ಜೊತೆಗೆ ಇದು ಐಎಂಎಸ್ (Integrated Management System) ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಭಾರತೀಯ ರೈಲ್ವೆಯ ಚೆನ್ನೈ ವಿಭಾಗದ ಬೇಸಿನ್ ಬ್ರಿಡ್ಜ್ ಕೋಚಿಂಗ್ ಡಿಪೋ ನಿರ್ವಹಿಸುತ್ತದೆ.
ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಸಾಧಿಸಿದ ಕೆಲವು ಮಹತ್ವದ ಮೈಲಿಗಲ್ಲುಗಳು ಈ ಕೆಳಗಿನಂತಿವೆ:
• ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು 11 ಮೇ 1994 ರಂದು ಪರಿಚಯಿಸಲಾಯಿತು.
• ಇದು ದಕ್ಷಿಣ ರೈಲ್ವೆ ವಲಯದಲ್ಲಿ ಮೊದಲ (ISO 9001:2001) ಪ್ರಮಾಣೀಕೃತ ರೈಲು.
• ರೈಲನ್ನು 1 ಜುಲೈ 2009 ರಂದು ಅತ್ಯಾಧುನಿಕ ಲಿಂಕ್ ಹಾಫ್‌ಮನ್ ಬುಶ್ ಕೋಚ್ನೊಂದಿಗೆ ಸೇರಿಸಲಾಯಿತು.
• ಇದು ಹೆಚ್ಒಜಿ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಖರ್ಚನ್ನು ಕಡಿಮೆ ಮಾಡುತ್ತದೆ.
• ಶೇಕಡಾ 100 ರಷ್ಟು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ವಹಿಸಲು ಹೆಸರುವಾಸಿಯಾಗಿದೆ. ಶೇಕಡಾ 100 ರಷ್ಟು ಹೆಚ್ಒಜಿ, ಶೇಕಡಾ 100 ರಷ್ಟು ಬಯೋಡೈಜೆಸ್ಟರ್ ಶೌಚಾಲಯ ವ್ಯವಸ್ಥೆ ಹೊಂದಿದೆ.
• ಗುಣಮಟ್ಟದ ವಿದ್ಯುತ್ ಸೌಕರ್ಯಗಳ ಜೊತೆಗೆ ಆಂತರಿಕ ಬೆಳಕನ್ನು ಒದಗಿಸುತ್ತದೆ.
• ಸ್ವಚ್ಛತೆಗೆ ಹೆಸರುವಾಸಿಯಾಗಿದೆ.
• ಎಲ್ಇಡಿ ದೀಪಗಳು ಹಾಗೂ ಇನ್ನಿತರ ವ್ಯವಸ್ಥೆಯಿಂದ ವಿದ್ಯುತ್ ಶಕ್ತಿಯ ಸಂರಕ್ಷಣೆ ಮಾಡಲಾಗುತ್ತದೆ.
• ಬ್ರೈಲ್ ಚಿಹ್ನೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.
• ವೈಫೈ ವ್ಯವಸ್ಥೆಯನ್ನು ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಹೊಂದಿದೆ.
• ಪ್ರಯಾಣಿಕರ ಅನುಕೂಲಕ್ಕಾಗಿ ಮುಖ್ಯವಾಗಿ ಶೌಚಾಲಯಗಳಲ್ಲಿ ಸ್ವಯಂಚಾಲಿತ ಏರ್ ಫ್ರೆಶನರ್‌ಗಳು ಇದೆ.
• ಶತಾಬ್ದಿಯು ಆರಾಮದಾಯಕ ಆಸನಗಳನ್ನು ಹೊಂದಿದೆ.
• ಎಲ್ಲಾ ಚೆನ್ನೈ-ಮೈಸೂರು ಶತಾಬ್ದಿ ರೈಲುಗಳಿಗೆ ಪವರ್ ಕಾರ್‌ಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಮಾಡಲಾಗಿದೆ.
• ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಬೋಗಿಗಳಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುತ್ತದೆ.
ಇದನ್ನೂ ಓದಿ:
ಮುಂಬೈ ರೈಲುಗಳಲ್ಲಿ ಪ್ರಯಾಣಿಸಲು ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯ
ಸರ್ಕಾರಿ ಶಾಲೆಗೆ ಆಕರ್ಷಕ ರೈಲು ಬಂಡಿ ಪೇಂಟಿಂಗ್; ಮಕ್ಕಳನ್ನು ಶಾಲೆಗೆ ಕರೆತರಲು ವಿನೂತನ ಪ್ರಯತ್ನ