ಲೋಕಸಭೆಗಾಗಿ ಕಾಂಗ್ರೆಸ್​​ 30 ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿಲ್ಲವಾ? ಎಂದು ಜೆಡಿಎಸ್ ​ಮೈತ್ರಿ ಸಮರ್ಥಿಸಿಕೊಂಡ ಬಿಜೆಪಿ ಸಂಸದ ಶ್ರೀನಿವಾಸ​​ ಪ್ರಸಾದ್

| Updated By: ಸಾಧು ಶ್ರೀನಾಥ್​

Updated on: Oct 02, 2023 | 6:13 PM

ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ ಆರೋಪ ವಿಚಾರ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ತುಂಬಾ ಆಘಾತಕಾರಿಯಾದುದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು ಎಂದಿದ್ದಾರೆ ಸಂಸದ ವಿ ಶ್ರೀನಿವಾಸಪ್ರಸಾದ್.

ಲೋಕಸಭೆಗಾಗಿ ಕಾಂಗ್ರೆಸ್​​ 30 ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿಲ್ಲವಾ? ಎಂದು ಜೆಡಿಎಸ್ ​ಮೈತ್ರಿ ಸಮರ್ಥಿಸಿಕೊಂಡ ಬಿಜೆಪಿ ಸಂಸದ ಶ್ರೀನಿವಾಸ​​ ಪ್ರಸಾದ್
ರೀ ಸಿದ್ದರಾಮಯ್ಯ, ಇದನ್ನು ನೀವು ಹೇಳುವ ಅವಶ್ಯಕತೆ ಇಲ್ಲ - ಸಂಸದ ಶ್ರೀನಿವಾಸಪ್ರಸಾದ್ ಫುಲ್ ಗರಂ
Follow us on

ಮೈಸೂರು, ಅಕ್ಟೋಬರ್​ 2: ಲೋಕಸಭೆ ಚುನಾವಣೆಗಾಗಿ (Lok Sabha elections 2024) ಕಾಂಗ್ರೆಸ್ಸಿಗರು (Congress) 30 ಪಕ್ಷಗಳ ಜತೆ ಮೈತ್ರಿ (Alliance) ಮಾಡಿಕೊಂಡಿದ್ದಾರೆ. ಅಂತಹುದರಲ್ಲಿ ಜೆಡಿಎಸ್ ಜೊತೆ ಬಿಜೆಪಿ ​ಮೈತ್ರಿ ಮಾಡಿಕೊಂಡರೆ ತಪ್ಪೇನು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವನ್ನು (BJP-JDS alliance) ಬಿಜೆಪಿ ಸಂಸದ ವಿ. ಶ್ರೀನಿವಾಸ​​ ಪ್ರಸಾದ್ (MP V Srinivas Prasad) ಸಮರ್ಥಿಸಿಕೊಂಡಿದ್ದಾರೆ. ಅವರು ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಇವರು ಮಾಡಿಕೊಂಡ್ರೆ ತಪ್ಪಾ? ಮೈತ್ರಿ ಪಕ್ಷಗಳ ಸೋಲು, ಗೆಲುವಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಸಂಸದ ಶ್ರೀನಿವಾಸ​​ ಪ್ರಸಾದ್ ಇತ್ತೀಚಿನ ಮೈತ್ರಿ ರಾಜಕಾರಣಗಳ ಬಗ್ಗೆ ಷರಾ ಬರೆದಿದ್ದಾರೆ.

ಇನ್ನು ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ ಆರೋಪ ವಿಚಾರ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ತುಂಬಾ ಆಘಾತಕಾರಿಯಾದುದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು ಎಂದಿದ್ದಾರೆ ಸಂಸದ ವಿ ಶ್ರೀನಿವಾಸಪ್ರಸಾದ್.

ರೀ ಸಿದ್ದರಾಮಯ್ಯ, ಇದನ್ನು ನೀವು ಹೇಳುವ ಅವಶ್ಯಕತೆ ಇಲ್ಲ – ಸಂಸದ ಶ್ರೀನಿವಾಸಪ್ರಸಾದ್

ಕಾವೇರಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಸಂಸದ ವಿ. ಶ್ರೀನಿವಾಸ ​ಪ್ರಸಾದ್ ತಿರುಗೇಟು ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಮಾತನಾಡುವ ಅವಶ್ಯಕತೆ ಇಲ್ಲ. ನಾವು ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾವೇರಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ​ಪ್ರಸಾದ್​ ಸೂಕ್ಷ್ಮವಾಗಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ