ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ: ‘ಸಂವಿಧಾನ ಬಚಾವೋ, ದೇಶ್​ ಬಚಾವೋ’ ಹೆಸರಲ್ಲಿ ಕಾಂಗ್ರೆಸ್ ಪ್ರತಿಭಟನೆ

|

Updated on: Apr 02, 2023 | 3:04 PM

ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ. ಮೀಸಲಾತಿ ಹೆಚ್ಚಳ ಬಿಜೆಪಿಗೆ ತಿರುಗುಬಾಣ ಆಗುತ್ತಿದೆ. ಸಂವಿಧಾನದ ಮಾನ್ಯತೆ ಇಲ್ಲದ ರೀತಿ ಮೀಸಲಾತಿ ಹೆಚ್ಚಿಸಲಾಗಿದೆ ಎಂದ ಸಿದ್ದರಾಮಯ್ಯ.

ಮೈಸೂರು: ರಾಜ್ಯ ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ‘ಸಂವಿಧಾನ ಬಚಾವೋ, ದೇಶ್​ ಬಚಾವೋ’ ಹೆಸರಲ್ಲಿ ಕಾಂಗ್ರೆಸ್ ಧರಣಿ ನಡೆಸಿದೆ. ಮೈಸೂರಿನ ಪುರಭವನದ ಮುಂಭಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ‘ಕೈ’ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮ್ಮದ್ ಪ್ರತಿಭಟನೆ ನಡೆಸಿದ್ದಾರೆ.

ಮೀಸಲಾತಿ ಹೆಚ್ಚಳ ಬಿಜೆಪಿಗೆ ತಿರುಗುಬಾಣ ಆಗುತ್ತಿದೆ

ಇನ್ನು ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೀಸಲಾತಿ ಹೆಚ್ಚಳ ಬಿಜೆಪಿಗೆ ತಿರುಗುಬಾಣ ಆಗುತ್ತಿದೆ. ಸಂವಿಧಾನದ ಮಾನ್ಯತೆ ಇಲ್ಲದ ರೀತಿ ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳವೇ ಅವೈಜ್ಞಾನಿಕ. ಹಿಂದೆಯೂ ಹಲವು ಬಾರಿ ಮೀಸಲಾತಿ ಹೆಚ್ಚಳವಾಗಿದೆ ಅದೆಲ್ಲಾ ಸಂವಿಧಾನ್ಮಾತಕವಾಗಿ ನಡೆದಿತ್ತು. ಚುನಾವಣೆಗಾಗಿ ಬಿಜೆಪಿ ಈ ಗಿಮಿಕ್ ಮಾಡಿದೆ ಎಂದರು. ಇದೇ ವೇಳೆ ಏಪ್ರಿಲ್​ 9ರಂದು ಮೈಸೂರಿಗೆ ಪ್ರಧಾನಮಂತ್ರಿ ಮೋದಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೀತಿಸಂಹಿತೆ ಜಾರಿ ಇದ್ದಾಗ ಪಿಎಂ ಹೇಗೆ ಸರ್ಕಾರಿ ಕಾರ್ಯಕ್ರಮಕ್ಕೆ ಬರ್ತಾರೆ? ಸರ್ಕಾರಿ ಕಾರ್ಯಕ್ರಮ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ. ಪ್ರಧಾನಿಗೂ ಒಂದೇ ನೀತಿ ಸಂಹಿತೆ, ಸಿಎಂಗೂ ಒಂದೇ ನೀತಿ ಸಂಹಿತೆ. ಚುನಾವಣೆ ಆಯೋಗ ವಿಶೇಷ ಅನುಮತಿ ನೀಡಿದರೆ ಕಾರ್ಯಕ್ರಮ ಮಾಡಬಹುದು. ವಿಶೇಷ ಅನುಮತಿ ನೀಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಹೆಚ್​ಡಿ ಕುಮಾರಸ್ವಾಮಿಗೆ ಬೃಹತ್​ ಸೀರೆ ಹಾರ ಹಾಕಿದ ಅಭಿಮಾನಿಗಳು

ಸುಪ್ರಿಂನಿಂದ ಶೇ 50 ರಷ್ಟು ಮೀಸಲಾತಿ ಮೀರಬಾರದು ಎಂಬ ಅದೇಶ ಇದೆ

ಪ್ರತಿಭಟನೆ ವೇಳೆ ಭಾಷಣ ಮಾಡಿದ ತನ್ವೀರ್ ಸೇಠ್, ಒಳ ಮೀಸಲಾತಿ ನೀಡಬೇಕು ಎಂಬ ವಿಚಾರ ಕಾನೂನು ರೀತಿಯಲ್ಲಿ ಆಗಬೇಕು ಎಂದು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ರಾಜಭವನ ಚಲೋ ನಡೆಸಿದೆ, ವಿಧಾನ ಸೌಧ ಒಳಗೆ ಧರಣಿ ಮಾಡಿದೆ. ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದೆ. ಆದರೆ ಇದನ್ನು ಕಾನೂನು ಬದ್ದವಾಗಿ ಮಾಡಿಲ್ಲ. ಇದು ಕೇವಲ ಭಾಷಣಗಳಲ್ಲಿ ಮಾತ್ರ ಮಾಡಿದ್ದಾರೆ. ಇದಕ್ಕೆ ಒಂದು ಮಸೂದೆ ತಂದು ತರಾತುರಿಯಲ್ಲಿ ಮಂಡನೆ ಮಾಡಿದ್ದಾರೆ ಎಂದರು.

ಬಜೆಟ್ ಅಧಿವೇಶನದ ವೇಳೆ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಆಗಿಲ್ಲ. ಇದು ಸಂಸತ್ ಅಲ್ಲಿ ಬಂದಿದೆ. ಕ್ಯಾಟಗರಿ 2 b ಅಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದರು. ಒಂದು ಜನಾಂಗ ಮತ್ತೊಂದು ಜನಾಂಗದ ನಡುವೆ ಗೊಂದಲ ಸೃಷ್ಟಿ ಮಾಡಿ ಚುನಾವಣೆಗಾಗಿ ಮಾಡಿದ್ದಾರೆ. ಸುಪ್ರಿಂನಿಂದ ಶೇ 50 ರಷ್ಟು ಮೀಸಲಾತಿ ಮೀರಬಾರದು ಎಂಬ ಅದೇಶ ಇದೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದ್ದಾರೆ. ದಲಿತರಿಗೆ ಜಾಸ್ತಿ ಮಾಡಿದ್ದೇವೆ ಎಂಬುದನ್ನು ಯಾಕೆ ಉಲ್ಲೇಖ ಮಾಡಿಲ್ಲ‌. ಮುಸ್ಸಿಂ ಸಮಯದಾಯ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿದ್ದೇವೆ. ಜಾತ್ಯಾತೀತದ ಮೇಲೆ ಬಿಜೆಪಿ ಅವರಿಗೆ ನಂಬಿಕೆ ಇಲ್ಲ‌. ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತಾರೆ. ಈ ರಾಷ್ಟ್ರದ ಸಂವಿಧಾನ ಉಳಿಸಬೇಕು ಎಂಬುದು ಕಾಂಗ್ರೆಸ್ ಆಶಯ. ಅದಕ್ಕಾಗಿ ಈ ಧರಣಿ ಮಾಡುತ್ತಿದ್ದೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:37 pm, Sun, 2 April 23