ಕಾಂಗ್ರೆಸ್ ನಾಯಕರಿಗೆ ಸೇರಬೇಕಿದ್ದ ಹಾರ ಕಾರ್ಯಕರ್ತರ ಪಾಲು, ಸೇಬಿನ ಹಾರ ಕಿತ್ತು ಹಾಕಿ ಹಣ್ಣಿಗೆ ಮುಗಿಬಿದ್ದ ಬೆಂಬಲಿಗರು

| Updated By: ಆಯೇಷಾ ಬಾನು

Updated on: Jan 03, 2022 | 1:31 PM

ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್​ನಿಂದ ಮೈಸೂರಿನ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.

ಮೈಸೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ಒತ್ತಾಯ. ಪಾದಯಾತ್ರೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ನಿಂದ ಸಮಾವೇಶ. ಕಾಂಗ್ರೆಸ್ ನಾಯಕರಿಗೆ ಸೇರಬೇಕಿದ್ದ ಹಾರ ಕಾರ್ಯಕರ್ತರ ಪಾಲು. ಸೇಬಿನ ಹಾರ ಕಿತ್ತು ಹಾಕಿ ಹಣ್ಣಿಗೆ ಮುಗಿಬಿದ್ದ ಬೆಂಬಲಿಗರು.

ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್​ನಿಂದ ಮೈಸೂರಿನ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಮೈಸೂರಿನ ಬಸವೇಶ್ವರ ವೃತ್ತದಿಂದ ಕಾಂಗ್ರೆಸ್ ಕಚೇರಿವರೆಗೆ ಱಲಿ ನಡೆಯುತ್ತಿದ್ದು ಸಿಎಲ್​ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ. ಡೊಳ್ಳು ಕುಣಿತ, ಗೊಂಬೆ ಕುಣಿತ, ನಗಾರಿ ಜತೆ ನಾಯಕರ ಱಲಿ ನಡೆಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರಿಗೆ ಹಾಕಲು ತಂದಿದ್ದ ಸೇವಿನ ಹಾರವನ್ನು ಕಿತ್ತು ಹಾಕಿ ಹಣ್ಣಿಗೆ ಬೆಂಬಲಿಗರು ಮುಗಿಬಿದ್ದ ಘಟನೆ ನಡೆದಿದೆ.