ವಾಮಾಚಾರ ಮಾಡಿ ಕೊಲೆ ಆರೋಪ: ಕೆರೆಯಲ್ಲಿ ಬಾಲಕನ ಶವ ಪತ್ತೆ, ಮೂವರು ಅಪ್ರಾಪ್ತ ಸ್ನೇಹಿತರನ್ನು ವಶಕ್ಕೆ ಪಡೆದ ಪೊಲೀಸ್
ಪೊಲೀಸರ ವಶದಲ್ಲಿರುವ ಒಬ್ಬ ಆರೋಪಿ, ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ. ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ. ಇದೇ ದೃಷ್ಟಿಯಿಂದ ಮಹೇಶ್ನನ್ನು ಪುಸಲಾಯಿಸಿದ ಮೂವರು ಆರೋಪಿಗಳು ಕೆರೆ ಬಳಿಗೆ ಕರೆತಂದಿದ್ದಾರೆ.
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹಳೆಪುರ ಬಳಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು ಹತ್ಯೆ ಆರೋಪ ಕೇಳಿ ಬಂದಿದೆ. ಮಹೇಶ್ ಅಲಿಯಾಸ್ ಮನು(16) ಮೃತದೇಹ ಪತ್ತೆಯಾಗಿದೆ. ಮಹೇಶ್‌ನ ಮೂವರು ಅಪ್ರಾಪ್ತ ಸ್ನೇಹಿತರ ವಿರುದ್ಧ ಆರೋಪ ಕೇಳಿ ಬಂದಿದೆ.
ಮೈಸೂರಿನ ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಸ್ನೇಹಿತರಿಂದಲೇ ಬಾಲಕನ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವಾಮಾಚಾರ ಮಾಡಿ ಮಹೇಶ್‌ನನ್ನು ಕೆರೆಗೆ ತಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಾವಾಸೆ ದಿನದಂದು ಕೆರೆ ಬಳಿ ವಾಮಾಚಾರ ಮಾಡಿ ಬಾಲಕನ ಕೊಲೆ ಮಾಡಲಾಗಿದೆ ಎಂಬ ಶಂಖೆ ವ್ಯಕ್ತವಾಗಿದೆ. ಸದ್ಯ ಬಾಲಕನ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಶದಲ್ಲಿರುವ ಒಬ್ಬ ಆರೋಪಿ, ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ. ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ. ಇದೇ ದೃಷ್ಟಿಯಿಂದ ಮಹೇಶ್ನನ್ನು ಪುಸಲಾಯಿಸಿದ ಮೂವರು ಆರೋಪಿಗಳು ಕೆರೆ ಬಳಿಗೆ ಕರೆತಂದಿದ್ದಾರೆ. ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದಿದ್ದಾರೆ. ನಂತರ ಪೂಜೆ ಮಾಡಿ ಮಹೇಶ್ ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ. ಕೃತ್ಯವೆಸಗಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಮಹೇಶ್ ಕೆರೆಗೆ ಬಿದ್ದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಸಿಕ್ಕಿದೆ. ಕೆರೆಯಲ್ಲಿ ಶೋಧ ಮಾಡಿದಾಗ ಮಹೇಶ್ ಮೃತದೇಹ ಪತ್ತೆಯಾಗಿದೆ. ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿವೆ. ಗೊಂಬೆ, ಕೋಳಿ, ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ಸಿಕ್ಕಿವೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Badava Rascal: ಬಡವ ರಾಸ್ಕಲ್ ಬೆನ್ನುತಟ್ಟಿದ ಪ್ರಶಾಂತ್ ನೀಲ್; ಚಿತ್ರತಂಡಕ್ಕೆ ಹೇಳಿದ್ದೇನು?