AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Badava Rascal: ಬಡವ ರಾಸ್ಕಲ್ ಬೆನ್ನುತಟ್ಟಿದ ಪ್ರಶಾಂತ್ ನೀಲ್; ಚಿತ್ರತಂಡಕ್ಕೆ ಹೇಳಿದ್ದೇನು?

Prashanth Neel | Dhananjaya: ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ನಟಿಸಿರುವ ‘ಬಡವ ರಾಸ್ಕಲ್’ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರತಂಡಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

Badava Rascal: ಬಡವ ರಾಸ್ಕಲ್ ಬೆನ್ನುತಟ್ಟಿದ ಪ್ರಶಾಂತ್ ನೀಲ್; ಚಿತ್ರತಂಡಕ್ಕೆ ಹೇಳಿದ್ದೇನು?
ಪ್ರಶಾಂತ್ ನೀಲ್ (ಎಡ), ಬಡವ ರಾಸ್ಕಲ್ ಚಿತ್ರದ ಪೋಸ್ಟರ್ (ಬಲ)
TV9 Web
| Edited By: |

Updated on: Jan 04, 2022 | 7:00 AM

Share

ಸ್ಯಾಂಲಡ್​ವುಡ್​​ 2021ರ ವರ್ಷಾಂತ್ಯವನ್ನು ಅಭೂತಪೂರ್ವ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದ್ದು, 2022ರಲ್ಲೂ ಜಯಭೇರಿ ಮುಂದುವರೆದಿದೆ. ಹೌದು. ಧನಂಜಯ್ (Dhananjay) ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ನಟನೆಯ ‘ಬಡವ ರಾಸ್ಕಲ್’ (Badava Rascal) ಚಿತ್ರಕ್ಕೆ ನಾಡಿನೆಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2021ರಲ್ಲಿ ಬಿಡುಗಡೆಯಾದ ಚಂದನವನದ 100ನೇ ಚಿತ್ರ ಎಂಬ ಹೆಗ್ಗಳಿಕೆಯೂ ‘ಬಡವ ರಾಸ್ಕಲ್​’ಗಿದೆ. ವರ್ಷಾಂತ್ಯಕ್ಕೆ ಬಿಡುಗಡೆಯಾದ ಈ ಚಿತ್ರ ಗೆಲುವಿನ ನಾಗಾಲೋಟ ಮುಂದುವರೆಸುತ್ತಿದ್ದು, ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡವೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದೆ. ಶಿವರಾಜ್​ಕುಮಾರ್ (Shiva Rajkumar) ಸೇರಿದಂತೆ ಚಿತ್ರ ನೋಡಿದ ತಾರೆಯರು ಈಗಾಗಲೇ ಚಿತ್ರತಂಡಕ್ಕೆ ಶಹಬ್ಬಾಸ್ ಎಂದಿದ್ದರು. ಇದೀಗ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಚಿತ್ರತಂಡದ ಬೆನ್ನುತಟ್ಟಿದ್ದಾರೆ.

ಟ್ವಿಟರ್​ನಲ್ಲಿ ‘ಬಡವ ರಾಸ್ಕಲ್’ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಪ್ರಶಾಂತ್ ನೀಲ್, ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ‘2021 ಎಲ್ಲರಿಗೂ ಏರಿಳಿತ ನೀಡಿದ ವರ್ಷ. ಆದರೆ ನಮ್ಮದೇ ಚಿತ್ರ ‘ಬಡವ ರಾಸ್ಕಲ್’  ಅದ್ದೂರಿಯಾಗಿ 2021ನ್ನು ಮುಗಿಸಿರುವುದು ಸಂತಸದ ವಿಚಾರ’ ಎಂದು ಪ್ರಶಾಂತ್ ನೀಲ್ ಬರೆದಿದ್ದಾರೆ. ಅಲ್ಲದೇ ಇದಕ್ಕೆ ಕಾರಣರಾದ ಧನಂಜಯ್, ಅಮೃತಾ ಅಯ್ಯಂಗಾರ್ ಹಾಗೂ ನಿರ್ದೇಶಕ ಶಂಕರ್ ಗುರು ಅವರಿಗೆ ಅಭಿನಂದನೆ ಹೇಳಿದ್ದಾರೆ.

ಪ್ರಶಾಂತ್ ನೀಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರ ನೋಡಿದ್ದ ಶಿವರಾಜ್​ಕುಮಾರ್ ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿದ್ದರು. ಜತೆಗೆ ಭಾವನಾತ್ಮಕ ದೃಶ್ಯಗಳಲ್ಲಿ ಧನಂಜಯ್ ನಟನೆಯನ್ನು ಹೊಗಳಿ, ನಿರ್ಮಾಪಕರಾಗಿಯೂ ಅವರು ಗೆದ್ದಿದ್ದಾರೆ ಎಂದಿದ್ದರು. ‘ಬಡವ ರಾಸ್ಕಲ್’ ಚಿತ್ರದಲ್ಲಿ ರಂಗಾಯಣ ರಘು, ತಾರಾ, ನಾಗಭೂಷಣ ಮೊದಲಾದವರು ನಟಿಸಿದ್ದು, ಡಾಲಿ ಪಿಚ್ಚರ್ಸ್ ಬ್ಯಾನರ್​ನಲ್ಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಣ ಮಾಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ:

Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್​ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?

Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ