ಮೈಸೂರು: ರೇಣುಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನ ಕೂಡಿಹಾಕಿ ಟ್ರಸ್ಟಿಗಳ ಗಲಾಟೆ!
ರೇಣುಕಾ ಮತ್ತು ಅಶೋಕ್ ಕುಮಾರ್ ದಂಪತಿ. ಸಲೋನಿ, ರುನಾಲ್ ಇಬ್ಬರು ವನಿತಾ ಮಕ್ಕಳು. ಶುಲ್ಕದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರೇಣುಕಾ ಮತ್ತು ಪತಿ ಅಶೋಕ್ ಕುಮಾರ್ನ ಟ್ರಸ್ಟ್ನಿಂದ ವಜಾ ಮಾಡಲಾಗಿದೆ.
ಮೈಸೂರು: ವಿದ್ಯಾರ್ಥಿಗಳನ್ನ ಕೂಡಿಹಾಕಿ ಟ್ರಸ್ಟಿಗಳು ಗಲಾಟೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದ ರೇಣುಕಾ ಪಿಯು ಕಾಲೇಜಿನಲ್ಲಿ ನಡೆದಿದೆ. ಆಕೃತಿ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ 5 ಜನ ಟ್ರಸ್ಟಿಗಳು ಕಾಲೇಜು ನಡೆಸುತ್ತಿದ್ದರು. ವನಿತಾ, ಸಲೋನಿ, ರುನಾಲ್, ರೇಣುಕಾ ಹಾಗೂ ಅಶೋಕ ಕುಮಾರ್ ಎಂಬುವವರು ಕಾಲೇಜು ನಡೆಸುತ್ತಿದ್ದರು. ರೇಣುಕಾ ಶುಲ್ಕದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವನಿತಾ ರೇಣುಕಾರನ್ನ ಟ್ರಸ್ಟ್ನಿಂದ ವಜಾ ಮಾಡಿದ್ದಾರೆ.
ರೇಣುಕಾ ಮತ್ತು ಅಶೋಕ್ ಕುಮಾರ್ ದಂಪತಿ. ಸಲೋನಿ, ರುನಾಲ್ ಇಬ್ಬರು ವನಿತಾ ಮಕ್ಕಳು. ಶುಲ್ಕದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರೇಣುಕಾ ಮತ್ತು ಪತಿ ಅಶೋಕ್ ಕುಮಾರ್ನ ಟ್ರಸ್ಟ್ನಿಂದ ವಜಾ ಮಾಡಲಾಗಿದೆ. ಟ್ರಸ್ಟ್ನಿಂದ ವಜಾ ಮಾಡಿದಕ್ಕೆ ಆಕ್ರೋಶಗೊಂಡ ರೇಣುಕಾ, ಕಾಲೇಜು ಜಾಗದ ಲೀಸ್ನ ರದ್ದುಗೊಳಿಸಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾಗದ ಲೀಸ್ನ ರದ್ದುಗೊಳಿಸಿದ್ದು, ಅದೇ ಜಾಗವನ್ನು ಬೇರೆ ಟ್ರಸ್ಟ್ಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಹೊಸದಾಗಿ ಲೀಸ್ಗೆ ಪಡೆದವರು ನಿತ್ಯ ಕಾಲೇಜು ಬಳಿ ಗಲಾಟೆ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಒಳಗೆ ಸೇರಿಸಿ ಬೀಗ ಹಾಕಿ ಗಲಾಟೆ ಮಾಡುತ್ತಿದ್ದಾರೆ. ಅಲ್ಲದೇ ಕಾಲೇಜಿನ ಗೇಟ್ ಮುರಿದು, ಸಿಸಿ ಕ್ಯಾಮೆರಾಗಳನ್ನ ಧ್ವಂಸ ಮಾಡಿದ್ದಾರೆ.
ಸ್ಥಳಕ್ಕೆ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳು ಒಳಗೆ ಇರುವಾಗಲೇ ಶಿವಕುಮಾರ್ ಎಂಬುವವರು ಕಾಲೇಜಿಗೆ ಬೀಗ ಹಾಕಿದ್ದಾರೆ. ಪೊಲೀಸರು ಹೇಳಿದರೂ ಬೀಗ ತೆರೆಯದ ಶಿವಕುಮಾರ್, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕಾಲೀಜಿನ ಬೀಗ ತೆಗೆಯಲಾಗಿದೆ.
ಇದನ್ನೂ ಓದಿ
9 ಬ್ಯಾಂಕ್ಗಳಿಗೆ ವಂಚನೆ; ಗುಜರಾತ್ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.
Petrol Rate: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಮಾಹಿತಿ