ಮೈಸೂರು: ನಗರದಲ್ಲಿ ಐಶಾರಾಮಿ ಕಾರು ಕಳ್ಳತನ(Car Theft) ಹೆಚ್ಚಾಗಿದ್ದು ಉದ್ಯಮಿಗಳು, ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳ ಮನೆ ಮುಂದೆ ನಿಂತ ಕಾರುಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ವಿಜಯನಗರ, ನಿವೇದಿತಾ ನಗರದಲ್ಲಿ ತಿಂಗಳ ಅವಧಿಯಲ್ಲಿ ಒಂದೇ ಏರಿಯಾದಲ್ಲಿ 3 ಐಶಾರಾಮಿ ಕಾರುಗಳು ಕಳ್ಳತನವಾಗಿದೆ. 2 ಇನ್ನೋವಾ, ಒಂದು ಫಾರ್ಚುನರ್. ಹೌದು ನಿರ್ಮಿತಿ ಕೇಂದ್ರದ ನಿವೃತ್ತ ನಿರ್ದೇಶಕ ಮಂಜುನಾಥ್ ಅವರು ಮನೆ ಮುಂದೆ ನಿಲ್ಲಿಸಿದ ಇನ್ನೋವಾ ಕ್ರಿಸ್ಟಾ ಕಾರು, ಉದ್ಯಮಿ ಸಂತೋಷ ಅವರ ಫಾರ್ಚುನರ್ ಜೊತೆಗೆ ಇದೇ ತಿಂಗಳ 5ರಂದು ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೊವಾ ಕ್ರಿಸ್ಟಾ ಕಾರನ್ನ ಕಳ್ಳತನ ಮಾಡಿದ್ದರು. ಇದು ಸಿಸಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿತ್ತು. ಆದರೂ ಕೂಡ ಇನ್ನು ಸಿಗದ ಕಳ್ಳರು, ಮೈಸೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನ ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದ ಆಸಾಮಿಯನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಂಧಿತ ಆರೋಪಿ. ಇತ ಬಾಣಸವಾಡಿ, ರಾಮೂರ್ತಿನಗರ ಸೇರಿ ಕೆಆರ್ ಪುರಂ ಸುತ್ತಾ ತನ್ನ ಕೈಚಳಕ ತೋರಿಸಿದ್ದ. ಇನ್ನು ಈ ಆರೋಪಿ ಆನಂದ್ ಕದ್ದ ಬೈಕ್ಗಳಲ್ಲಿ ವ್ಹೀಲಿಂಗ್ ಮಾಡಿ, ಬಳಿಕ ಕಡಿಮೆ ಹಣಕ್ಕೆ ಅದನ್ನ ಮಾರಾಟ ಮಾಡುತ್ತಿದ್ದ. ಸುಲಭವಾಗಿ ಹ್ಯಾಂಡಲ್ ಲಾಕ್ ಬ್ರೇಕ್ ಮಾಡಬಹುದು ಎಂದು ಹೆಚ್ಚು ಡಿಯೋ ಬೈಕ್ಗಳನ್ನೇ ಇತ ಕಳ್ಳತನ ಮಾಡುತ್ತಿದ್ದ. ಇದೀಗ ಇತನನ್ನ ಬಂಧಿಸಿ, 12 ಲಕ್ಷ ಮೌಲ್ಯದ ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಕಾರು ಕಳ್ಳತನದ ವಿರುದ್ಧ ರಕ್ಷಣೆ ನೀಡುವ ಸಮಗ್ರ ಪಾಲಿಸಿ ತೆರೆಯಿರಿ; ನೆನಪಿಡಬೇಕಾದ ಅಂಶಗಳು ಇಲ್ಲಿವೆ
ಲಕ್ಷಾಂತರ ರೂಪಾಯಿ ಬೆಳೆಬಾಳುವ ವಾಹನಗಳು ಕಳ್ಳತನವಾದರೆ ಮಾಲೀಕರಿಗೆ ಅದಕ್ಕಿಂತ ದೊಡ್ಡ ಆರ್ಥಿಕ ಆಘಾತ ಇನ್ನೊಂದಿಲ್ಲ, ಇದರಿಂದಾಗಿ ಅವರು ಹತಾಶೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನ ವಿಮಾ ಪಾಲಿಸಿಯುವ ನಿಮ್ಮ ಮಂಕಾದ ಪರಿಸ್ಥಿತಿಯನ್ನು ಪರಿಹರಿಸಲಿದೆ. ಹೆಚ್ಚಿನ ಸಮಗ್ರ ಕಾರು ವಿಮಾ ಪಾಲಿಸಿಗಳು ವಾಹನ ಕಳ್ಳತನದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಅದಾಗ್ಯೂ ನಿಮ್ಮ ಪಾಲಿಸಿಯು ಅದೇ ಕವರ್ ಅನ್ನು ಒದಗಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಪಾಲಿಸಿ ಖರೀದಿಸುವಾಗ ನೀವು ಆಯ್ಕೆಮಾಡಿದ ಕವರೇಜ್‌ನ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ.
ಹೊಣೆಗಾರಿಕೆ ಮಾತ್ರ (ಮೂರನೇ ವ್ಯಕ್ತಿ) ಮತ್ತು ಪ್ಯಾಕೇಜ್ ಪಾಲಿಸಿಗಳು (ಸಮಗ್ರ) ಎಂಬ ಎರಡು ವಿಧದ ವಿಮಾ ಪಾಲಿಸಿಗಳನ್ನು ಪ್ರಮುಖ ವಿಮಾದಾರರು ಒದಗಿಸುತ್ತಾರೆ. ಕಾರು ವಿಮಾ ಕಂಪನಿಗಳು ನಿರ್ದಿಷ್ಟ ಮಿತಿಯವರೆಗೆ ಮೂರನೇ ವ್ಯಕ್ತಿಯ ಹಾನಿಗಳಿಗೆ ಪಾವತಿಸುತ್ತವೆ.
ಬಜಾಜ್ ಕ್ಯಾಪಿಟಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಪ್ರಕಾರ, ಕಾರು ಕಳ್ಳತನ ಮತ್ತು ವೈಯಕ್ತಿಕ ಅಪಘಾತ ಹಾನಿಗಳು ಸಮಗ್ರ ನೀತಿಯ ಅಡಿಯಲ್ಲಿ ಒಳಗೊಳ್ಳುತ್ತವೆ. ಯೋಜನೆಯು ODC ರಕ್ಷಣೆ ಮತ್ತು ಇತರ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ನಿಮ್ಮ ಕದ್ದ ವಾಹನಗಳಿಗೆ ವಿಮೆಯನ್ನು ಪಡೆಯಲು ಬಯಸಿದರೆ ಸಮಗ್ರ ಪಾಲಿಸಿಯ ಅಗತ್ಯವಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ