AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು ಮೆಟ್ರೋ ಮೂಲಕ ಮನೆಗೆ ಬಂದ ಯುವಕ

ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು, ತಾನು ಮೆಟ್ರೋ ಮೂಲಕ ಮನೆಗೆ ಬಂದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆತ ದೆಹಲಿಯ ಗ್ರೇಟರ್ ಕೈಲಾಶ್​-2ನಲ್ಲಿ ವಾಸಿಸುತ್ತಿದ್ದರು.

ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು ಮೆಟ್ರೋ ಮೂಲಕ ಮನೆಗೆ ಬಂದ ಯುವಕ
ಮದ್ಯಪಾನ ಆರೋಗ್ಯಕ್ಕೆ ಹಾನಿಕರImage Credit source: iStock
ನಯನಾ ರಾಜೀವ್
|

Updated on: Jun 13, 2023 | 8:30 AM

Share

ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು, ತಾನು ಮೆಟ್ರೋ ಮೂಲಕ ಮನೆಗೆ ಬಂದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆತ ದೆಹಲಿಯ ಗ್ರೇಟರ್ ಕೈಲಾಶ್​-2ನಲ್ಲಿ ವಾಸಿಸುತ್ತಿದ್ದರು. ಅಂದು ಕುಡಿಯುವ ಮನಸ್ಸಾಯಿತೆಂದು ಕೆಲಸ ಮುಗಿಸಿ ಗುರುಗ್ರಾಮಕ್ಕೆ ತೆರಳಿದ್ದಾರೆ. ಅಪರಿಚಿತನ ಜತೆಗೆ ಕುಳಿತು ಕುಡಿದಿದ್ದಾರೆ. ಆತನಿಗೆ ಎಚ್ಚರವಾದಾಗ ಕಾರು ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಮೆಟ್ರೋ ಏರಿ ಮನೆಗೆ ತಲುಪಿದ್ದಾರೆ. ವ್ಯಕ್ತಿ ಮತ್ತೊಬ್ಬ ಅಪರಿಚಿತ ಇಬ್ಬರೂ ಕಾರಿನಲ್ಲಿಯೇ ಕುಡಿದಿದ್ದಾರೆ, ಬಳಿಕ ಆತ ಕಾರಿನಿಂದ ಇಳಿಯುವಂತೆ ಈತನಿಗೆ ಹೇಳಿದ್ದಾನೆ ಇವರಿಗೆ ಅದು ತನ್ನ ಸ್ವಂತ ಕಾರು ಎಂಬ ಅರಿವಿಲ್ಲದೆ ಕಾರಿನಿಂದ ಇಳಿದಿದ್ದಾರೆ.

ಬಳಿಕ ಆತ ಕಾರು ಕದ್ದು ಪರಾರಿಯಾಗಿದ್ದಾರೆ, ಅದರಲ್ಲಿ ಲ್ಯಾಪ್​ಟಾಪ್, ಮೊಬೈಲ್, 18 ಸಾವಿರ ರೂ ನಗದು ಇತ್ತು ಎಂದು ಪ್ರಕಾಶ್ ಹೇಳಿದ್ದಾರೆ. ಪೊಲೀಸರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 379 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮದ್ಯದ ಅಮಲಿನಲ್ಲಿ ಎಣ್ಣೆಗೆ 20,000 ರೂಪಾಯಿ ನೀಡಿದ್ದೆ. ಬಾಟಲಿ ಕೇವಲ 2 ಸಾವಿರ ರೂಪಾಯಿದ್ದಾಗಿತ್ತು.

ಅಂಗಡಿ ಮಾಲೀಕರು ನನಗೆ 18,000 ರೂಪಾಯಿ ನಗದು ವಾಪಸ್ ಕೊಟ್ಟಿದ್ದರು. ಇದಾದ ನಂತರ ನಾನು ನನ್ನ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದೆ. ಅಷ್ಟರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದು ಒಟ್ಟಿಗೆ ಡ್ರಿಂಕ್ಸ್ ಮಾಡೋಣ ಎಂದು ಕೇಳಿದ್ದ ನಾನು ಒಪ್ಪಿಕೊಂಡೆ. ಇದಾದ ಬಳಿಕ ಕಾರು ಚಲಾಯಿಸಿಕೊಂಡು ಸುಭಾಷ್ ಚೌಕ್ ತಲುಪಿದ್ದಾಗಿ ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪ್ರಕಾಶ್​ನನ್ನು ಕಾರಿನಿಂದ ಕೆಳಗಿಳಿಸಿ ಆ ವ್ಯಕ್ತಿ ಕಾರು ಸಮೇತ ಪರಾರಿಯಾಗಿದ್ದಾರೆ.

ಮತ್ತಷ್ಟು ಓದಿ: Mysuru News: ಮೈಸೂರಿನಲ್ಲಿ ಮಾಜಿ ಸಚಿವರ ಕಾರನ್ನೇ ಕದ್ದ ಖದೀಮ, ಕಳ್ಳನ ಕೈಚಳ ಸಿಸಿಟಿವಿಯಲ್ಲಿ ಸೆರೆ

ದೂರುದಾರ ಯುವಕನಿಗೆ ಅಪರಿಚಿತ ವ್ಯಕ್ತಿಯ ಬಗ್ಗೆ ಹೆಚ್ಚು ನೆನಪಿಲ್ಲ ಎಂದು ಗುರುಗ್ರಾಮ್ ಪೊಲೀಸ್ ವಕ್ತಾರ ಸುಭಾಷ್ ಬೋಕನ್ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ