ಮೈಸೂರು ಸ್ವಚ್ಛ ನಗರಿ.. ಸಾಂಸ್ಕೃತಿಕ ನಗರಿ. ಜಗತ್ತಿನ ಅತ್ಯಂತ ಸುಂದರ ನಗರಗಳಲ್ಲಿ ಒಂದು. ಇಂತಹ ಅರಮನೆ ನಗರಿಗೆ ಶಾಪವಾಗಿದ್ದು ಫ್ಲೆಕ್ಸ್‌ಗಳು ,ಬ್ಯಾನರ್‌ಗಳು. ರಾಜಕೀಯ ಕಾರ್ಯಕ್ರಮ, ಹುಟ್ಟುಹಬ್ಬದ ಶುಭಾಶಯ ಕೋರಲು ಎಲ್ಲೆಂದರಲ್ಲಿ ಹಾಕಲಾಗುತ್ತಿದ್ದ ಫ್ಲೆಕ್ಸ್‌ಗಳು ನಗರದ ಅಂದ ಕೆಡಿಸುತ್ತಿದ್ದವು.
ಇದಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರು ಅದ್ಯಾಕೋ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ಅಬ್ಬರ ನಿಂತಿರಲಿಲ್ಲ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆ ದಂಡಂ ದಶಗುಣಂ ಮೂಲಕ ಇದಕ್ಕೆ ಕಡಿವಾಣ ಹಾಕಲು ಹೊರಟಿದೆ.
ಇನ್ನು ಮುಂದೆ ಮೈಸೂರು ನಗರ ವ್ಯಾಪ್ತಿಯಲ್ಲಿ ಯಾವುದೇ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ರೆ, 10 ಸಾವಿರದ ತನಕ ದಂಡ ವಿಧಿಸಲು ಮೈಸೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ.
ಒಂದು ವೇಳೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ ನ್ಯಾಯಾಲಯದಲ್ಲಿ ರುಜುವಾತಾದರೆ 6 ತಿಂಗಳು ಜೈಲು ಶಿಕ್ಷೆ ಸಹಾ ಆಗಲಿದೆ. ಈ ಮೂಲಕ ಮೈಸೂರಿನ ಅಂದವನ್ನು ರಕ್ಷಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನು ಮೈಸೂರಿಗರು ಸ್ವಾಗತಿಸಿದ್ದಾರೆ.
ಒಟ್ನಲ್ಲಿ ಸಾಂಸ್ಕೃತಿಕ ನಗರಿಯ ಅಂದವನ್ನ ಫ್ಲೆಕ್ಸ್, ಬ್ಯಾನರ್‌ಗಳು ಹಾಳು ಮಾಡಿದ್ವು. ಇದೀಗ ಪಾಲಿಕೆಯ ಈ ದಿಟ್ಟ ನಿರ್ಧಾರಕ್ಕೆ ಜನ ಕೂಡ ಫುಲ್ ಖುಷ್ ಆಗಿದ್ದಾರೆ.