ಸ್ಪೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ‘ಸೀಮಾ’ ಇನ್ನಿಲ್ಲ
2016ರಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ್ದ ಸೀಮಾ ಶ್ವಾನ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.
ಮೈಸೂರು: ಶ್ವಾನ ದಳದ ಸ್ಪೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಎಂಬ ಶ್ವಾನ ಮೃತಪಟ್ಟಿದೆ. 2016ರಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ್ದ ಸೀಮಾ ಶ್ವಾನ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.
ನವೆಂಬರ್ 14, 2009 ರಲ್ಲಿ ಸೂಕ್ತ ತರಬೇತಿಯೊಂದಿಗೆ ಸೀಮಾ ಇಲಾಖೆಗೆ ಸೇರಿತ್ತು. ಬಳಿಕ ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿತ್ತು. ಡಾಗ್ ಶೋ, ಮಾಕ್ ಡ್ರಿಲ್ (ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.
ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬದ ಸಮಯದಲ್ಲಿ ಎಎಸ್‍ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಲಾಖೆಯಲ್ಲಿ 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಶ್ವಾನ ಎಲ್ಲರನ್ನು ಬಿಟ್ಟು ಅಗಲಿದೆ. DCP ಶಿವರಾಜು ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೀಮಾ ಅಂತಿಮ ವಿಧಿ ವಿಧಾನ ನೆರವೇರಿದೆ.
Yulin dog meat festival ಚೀನಾದಲ್ಲಿ ನಾಯಿ ಮಾಂಸದ ಸಂತೆ ಮತ್ತೆ ಆರಂಭ!