ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿದ್ರೆ ಹುಷಾರ್.. ಕ್ರಿಮಿನಲ್ ಕೇಸ್ ಹಾಕಿ, 6 ತಿಂಗಳು ಜೈಲು ಶಿಕ್ಷೆ ಕೊಡ್ತಾರೆ

ಮೈಸೂರಿಗರೇ ಎಚ್ಚರ.. ಇನ್ಮುಂದೆ ಸಭೆ, ಸಮಾರಂಭ, ಅದು ಇದು ಅಂತಾ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಿದ್ರೋ ನಿಮ್ಮ ಗ್ರಹಚಾರ ಕೆಟ್ಟಂತೆ. ಅಪ್ಪಿ ತಪ್ಪಿ ಹಾಕಿದ್ರೆ ದುಬಾರಿ ದಂಡದ ಜೊತೆಗೆ ಜೈಲು ಗ್ಯಾರಂಟಿ.

ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿದ್ರೆ ಹುಷಾರ್.. ಕ್ರಿಮಿನಲ್ ಕೇಸ್ ಹಾಕಿ, 6 ತಿಂಗಳು ಜೈಲು ಶಿಕ್ಷೆ ಕೊಡ್ತಾರೆ
ಮೈಸೂರು ಮಹಾನಗರ ಪಾಲಿಕೆ
Follow us
ಆಯೇಷಾ ಬಾನು
|

Updated on: Jan 21, 2021 | 7:21 AM

ಮೈಸೂರು ಸ್ವಚ್ಛ ನಗರಿ.. ಸಾಂಸ್ಕೃತಿಕ ನಗರಿ. ಜಗತ್ತಿನ ಅತ್ಯಂತ ಸುಂದರ ನಗರಗಳಲ್ಲಿ ಒಂದು. ಇಂತಹ ಅರಮನೆ ನಗರಿಗೆ ಶಾಪವಾಗಿದ್ದು ಫ್ಲೆಕ್ಸ್‌ಗಳು ,ಬ್ಯಾನರ್‌ಗಳು. ರಾಜಕೀಯ ಕಾರ್ಯಕ್ರಮ, ಹುಟ್ಟುಹಬ್ಬದ ಶುಭಾಶಯ ಕೋರಲು ಎಲ್ಲೆಂದರಲ್ಲಿ ಹಾಕಲಾಗುತ್ತಿದ್ದ ಫ್ಲೆಕ್ಸ್‌ಗಳು ನಗರದ ಅಂದ ಕೆಡಿಸುತ್ತಿದ್ದವು.

ಇದಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರು ಅದ್ಯಾಕೋ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ಅಬ್ಬರ ನಿಂತಿರಲಿಲ್ಲ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆ ದಂಡಂ ದಶಗುಣಂ ಮೂಲಕ ಇದಕ್ಕೆ ಕಡಿವಾಣ ಹಾಕಲು ಹೊರಟಿದೆ.

ಇನ್ನು ಮುಂದೆ ಮೈಸೂರು ನಗರ ವ್ಯಾಪ್ತಿಯಲ್ಲಿ ಯಾವುದೇ ಫ್ಲೆಕ್ಸ್‌, ಬ್ಯಾನರ್ ಅಳವಡಿಸಿದ್ರೆ, 10 ಸಾವಿರದ ತನಕ ದಂಡ ವಿಧಿಸಲು ಮೈಸೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ.

ಒಂದು ವೇಳೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ ನ್ಯಾಯಾಲಯದಲ್ಲಿ ರುಜುವಾತಾದರೆ 6 ತಿಂಗಳು ಜೈಲು ಶಿಕ್ಷೆ ಸಹಾ ಆಗಲಿದೆ. ಈ ಮೂಲಕ ಮೈಸೂರಿನ ಅಂದವನ್ನು ರಕ್ಷಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನು ಮೈಸೂರಿಗರು ಸ್ವಾಗತಿಸಿದ್ದಾರೆ.

ಒಟ್ನಲ್ಲಿ ಸಾಂಸ್ಕೃತಿಕ ನಗರಿಯ ಅಂದವನ್ನ ಫ್ಲೆಕ್ಸ್, ಬ್ಯಾನರ್‌ಗಳು ಹಾಳು ಮಾಡಿದ್ವು. ಇದೀಗ ಪಾಲಿಕೆಯ ಈ ದಿಟ್ಟ ನಿರ್ಧಾರಕ್ಕೆ ಜನ ಕೂಡ ಫುಲ್ ಖುಷ್ ಆಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ