ರಂಗಭೂಮಿಗೆ ಶೀಘ್ರ ಪರ್ವ ಕಾದಂಬರಿ; ಖುದ್ದು ಎಸ್​.ಎಲ್.ಭೈರಪ್ಪ ಮಾರ್ಗದರ್ಶನ

ಪರ್ವ ಕಾದಂಬರಿ ರಂಗ ಪ್ರದರ್ಶನಕ್ಕೆ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಪರ್ವ ಕಾದಂಬರಿಯ ನಾಟಕ ರೂಪಕ್ಕೆ ಪರ್ವ ವಿರಾಟ ದರ್ಶನ ಎಂದು ಹೆಸರಿಡಲಾಗಿದೆ. ಓದಿನ ಮೂಲಕ ಪಡೆದ ಅನುಭವ ನಾಟಕ ರೂಪದಲ್ಲಿ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ರಂಗಭೂಮಿಗೆ ಶೀಘ್ರ ಪರ್ವ ಕಾದಂಬರಿ; ಖುದ್ದು ಎಸ್​.ಎಲ್.ಭೈರಪ್ಪ ಮಾರ್ಗದರ್ಶನ
ನಾಟಕ ರೂಪದಲ್ಲಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 21, 2021 | 7:09 PM

ಮೈಸೂರು: ಸರಸ್ವತಿ ಸಮ್ಮಾನ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ ಲೋಕದ ಮಿನುಗುವ ನಕ್ಷತ್ರ. ತಮ್ಮ ತೀಕ್ಷ್ಣ ಬರವಣಿಗೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎಸ್. ಎಲ್. ಭೈರಪ್ಪ ತಮ್ಮ ನೇರ ನುಡಿ ನಡೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದವರು. ಅವರ ಬರಹಗಳನ್ನು ಮೆಚ್ಚಿಕೊಂಡ ಓದುಗರು ಕಾದಂಬರಿಯಲ್ಲಿನ ಪಾತ್ರಗಳಲ್ಲಿ ತಾವು ಒಬ್ಬರು ಎನ್ನುವಷ್ಟರಮಟ್ಟಿಗೆ ತಲ್ಲೀನರಾಗುತ್ತಾರೆ. ಅಂತಹ ಕಾದಂಬರಿ ಈಗ ನಾಟಕ ರೂಪದಲ್ಲಿ ರಂಗಭೂಮಿಗೆ ಬರುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಫೆಬ್ರುವರಿ ಇಲ್ಲವೇ ಮಾರ್ಚ್‌ನಲ್ಲಿ ಪ್ರಸಿದ್ಧ ಕಾದಂಬರಿ ಪರ್ವ ನಾಟಕ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.‌ ಇದಕ್ಕಾಗಿ ಮೈಸೂರಿನ ರಂಗಾಯಣದಲ್ಲಿ ವೇದಿಕೆ ಸಜ್ಜಾಗಿದೆ. ತಮ್ಮ ಪರ್ವ ಕಾದಂಬರಿಯನ್ನು ರಂಗಭೂಮಿಗೆ ತರಲು ಭೈರಪ್ಪ ಸಮ್ಮತಿಸಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದ, ನಟ ಪ್ರಕಾಶ್ ಬೆಳವಾಡಿ ಪರ್ವ ಕಾದಂಬರಿಯನ್ನು ರಂಗಭೂಮಿಗೆ ತರುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಅವರೇ ಪರ್ವದ ರಂಗ ಪಠ್ಯವನ್ನು ಸಿದ್ಧಪಡಿಸಿದ್ದಾರೆ.

ಪರ್ವದಂಥ ಬೃಹತ್ ಕಾದಂಬರಿಯನ್ನು ರಂಗಭೂಮಿಗೆ ತರುವುದು ಅಷ್ಟು ಸುಲಭದ ಮಾತಲ್ಲ. ಕನಿಷ್ಠ ಏಳೂವರೆ ಗಂಟೆಯ ಸುದೀರ್ಘ ನಾಟಕ ಇದಾಗಲಿದೆ. ಇದಕ್ಕಾಗಿ ಈಗಾಗಲೇ ತಾಲೀಮು ಆರಂಭವಾಗಿದೆ. ಈ ನಾಟಕದ ಮಧ್ಯೆ 4 ವಿರಾಮಗಳನ್ನು ನೀಡಲು ನಿರ್ಧರಿಸಲಾಗಿದ್ದು, ವಿರಾಮದಲ್ಲೂ ಪರ್ವ ನಾಟಕದ ಬಗ್ಗೆ ಜನರಿಗೆ ತಿಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ರಂಗಾಯಣದ 13ರಿಂದ 17 ಮಂದಿ ಕಲಾವಿದರು, 10 ಜನ ತಂತ್ರಜ್ಞರು ಸೇರಿ ಒಟ್ಟು 40 ಜನರ ತಂಡ ಪರ್ವ ಕಾದಂಬರಿಯನ್ನು ರಂಗಭೂಮಿಗೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಪ್ರತಿದಿನ ಪರ್ವದ ತಾಲೀಮು ನಡೆಯುತ್ತಿದ್ದು, ಈ ತಾಲೀಮನ್ನು ಖುದ್ದು ಸಾಹಿತಿ ಎಸ್.ಎಲ್.ಭೈರಪ್ಪ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ

ಮಾರ್ಚ್ ಮೊದಲ ವಾರ ರಂಗಭೂಮಿಗೆ ಪರ್ವ: ಫೆಬ್ರುವರಿ ಕೊನೇ ವಾರದಿಂದ 3 ತಿಂಗಳು ಪರ್ವ ನಾಟಕದ ಪ್ರದರ್ಶನಕ್ಕೆ ರಂಗಾಯಣದಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ ಫೆಬ್ರವರಿ ಕೊನೆ ವಾರದಲ್ಲಿ ಹಾವೇರಿಯಲ್ಲಿ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ತಂಡ ಕಾಯುತ್ತಿದ್ದು, ಮಾರ್ಚ್ 1 ರಂದು ಪರ್ವ ನಾಟಕ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ನಂತರ ಮಾರ್ಚ್ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಂಗಾಯಣದಲ್ಲಿ ಪರ್ವ ನಾಟಕ ನಿರಂತರವಾಗಿ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ರಂಗಾಯಣ ಮಾತ್ರವಲ್ಲ ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲೂ ಪರ್ವ ನಾಟಕ ಪ್ರದರ್ಶನಕ್ಕೆ ಸಿದ್ಥತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು, ಶಿವಮೊಗ್ಗ ಸೇರಿ ಒಟ್ಟು 10 ಜಿಲ್ಲೆಗಳಲ್ಲಿ ತಲಾ 2 ಪ್ರದರ್ಶನ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಹೊರ ರಾಜ್ಯದ 5 ಸ್ಥಳಗಳನ್ನು ಪರ್ವ ನಾಟಕ ಪ್ರದರ್ಶನಕ್ಕೆ ಗುರುತಿಸಲಾಗಿದೆ.

ಪರ್ವ ರಂಗಭೂಮಿಗೂ ಮುನ್ನ ಹಲವು ಕಾರ್ಯಕ್ರಮ: ಪರ್ವ ಕಾದಂಬರಿಗೆ ರಂಗಭೂಮಿ ಸ್ಪರ್ಶ ನೀಡುತ್ತಿರುವುದು ಒಂದು ಮಹತ್ವದ ಕ್ಷಣ. ಅದನ್ನು ಒಂದು ಐತಿಹಾಸಿಕ ಕಾರ್ಯಕ್ರಮದಂತೆ ಮಾಡಲು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ನಿರ್ಧರಿಸಿದ್ದಾರೆ. ಇದೇ ವೇಳೆ ಪರ್ವ ಮತ್ತು ಮಹಾಭಾರತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಅಷ್ಟೇ ಅಲ್ಲ ಇದೇ ಕಾರ್ಯಕ್ರಮದಲ್ಲಿ ಪರ್ವದ ಚೀನಿ ಹಾಗೂ ರಷ್ಯನ್ ಭಾಷೆ ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮೈಸೂರಿನ ರಂಗಾಯಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪರ್ವ ರಂಗಭೂಮಿಗೆ ಸರ್ಕಾರದ ನೆರವು: ಒಟ್ಟು ₹ 60 ಲಕ್ಷ ವೆಚ್ಚದಲ್ಲಿ ಪರ್ವದ ಬೃಹತ್ ಸರಣಿಯ ಪ್ರದರ್ಶನದ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ರಂಗಾಯಣ ತನ್ನ ವಾರ್ಷಿಕ ಅನುದಾನದ ₹ 10 ಲಕ್ಷ ಮೀಸಲಿರಿಸಿದೆ. ಉಳಿದ ₹ 50 ಲಕ್ಷ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಎಲ್.ನಾಗೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ.

ಪರ್ವ ಮಹಾನ್ ಕಾದಂಬರಿ. ಅದನ್ನು ರಂಗಭೂಮಿಗೆ ತರುವುದು ಸವಾಲಿನ ಕೆಲಸ ಆದರೂ ಅದನ್ನು ನಾವು ಯಶಸ್ವಿಯಾಗಿ ರಂಗಭೂಮಿಗೆ ತರುತ್ತೇವೆ. ಇದರ ಜೊತೆಗೆ ಇದೇ ಸಮಯದಲ್ಲಿ ಪರ್ವ ಕಾದಂಬರಿಯ ಬಗ್ಗೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡುವ ಕೆಲಸ ನಡೆಯಲಿದೆ. ಖುದ್ದು ಕಾದಂಬರಿಕಾರ ಹಿರಿಯ ಸಾಹಿತಿ ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಎಸ್. ಎಲ್. ಭೈರಪ್ಪ ಅವರು ನಮಗೆ ಮಾರ್ಗದರ್ಶಕರಾಗಿರುವುದು ನಮಗೆ ಆನೆ ಬಲ ತಂದಿದೆ. ರಂಗಭೂಮಿ ಇತಿಹಾಸದಲ್ಲಿ ಮಹತ್ವದ ಕಾರ್ಯಕ್ರಮವಾಗಲಿದೆ‌. ಈ ಪ್ರಯೋಗ ಭಾರತೀಯ ರಂಗಭೂಮಿಗೆ ಮೈಲಿಗಲ್ಲಾಗಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳಿದರು.

ಪರ್ವ ಕಾದಂಬರಿ ರಂಗ ಪ್ರದರ್ಶನಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪರ್ವ ಕಾದಂಬರಿಯ ನಾಟಕ ರೂಪಕ್ಕೆ ಪರ್ವ ವಿರಾಟ ದರ್ಶನ ಎಂದು ಹೆಸರಿಡಲಾಗಿದೆ. ಓದಿನ ಮೂಲಕ ಪಡೆದ ಅನುಭವ ನಾಟಕ ರೂಪದಲ್ಲಿ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಆ ರೋಮಾಂಚಕ ಅನುಭವವನ್ನು ಪಡೆಯಲು ಎಲ್ಲರೂ ಕಾತರದಿಂದ ಕಾದು ಕುಳಿತಿದ್ದಾರೆ.

Published On - 7:07 pm, Thu, 21 January 21

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್