‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ

| Updated By: preethi shettigar

Updated on: Oct 04, 2021 | 10:59 AM

ಅಕ್ಟೋಬರ್ 7ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯಲಿದ್ದು, ಸಂಜೆ 4.36 ರಿಂದ 5.30ರ ಶುಭ ಮೀನ ಲಗ್ನದಲ್ಲಿ ಪೂಜೆ ನಡೆಯಲಿದೆ.

‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ
ಮೈಸೂರು ದಸರಾ
Follow us on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2021ಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಮೈಸೂರು ದಸರಾ ಆಹ್ವಾನ ಪತ್ರಿಕೆ ಕೂಡ ಸಿದ್ಧವಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂದೇಶ ಸದ್ಯ ಎಲ್ಲರನ್ನೂ ಆಕರ್ಷಿಸಿದೆ. ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ. ಜೀವನದೊಂದಿಗೆ ಜೀವವೂ ಮುಖ್ಯವೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸೋಣ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯಲಿದ್ದು, ಸಂಜೆ 4.36 ರಿಂದ 5.30ರ ಶುಭ ಮೀನ ಲಗ್ನದಲ್ಲಿ ಪೂಜೆ ನಡೆಯಲಿದೆ.

 

ಮೈಸೂರು ದಸರಾ ಆಹ್ವಾನ ಪತ್ರಿಕೆ

ಮೈಸೂರಿನ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 7 ರಿಂದ 15ರವರೆಗೆ ವಾಹನ ನಿಲುಗಡೆ ನಿಷೇಧಿಸಿ ಮೈಸೂರು ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಮಧ್ಯಾಹ್ನ 4 ರಿಂದ ಮಧ್ಯರಾತ್ರಿ 12ರವರೆಗೆ ಆದೇಶ ಜಾರಿಯಾಗಿರಲಿದೆ.

ಅಂಬಾವಿಲಾಸ ಅರಮನೆ ಸುತ್ತಮುತ್ತ, ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತ, ಪುರಂದರ ರಸ್ತೆ, ಬಿ.ರಾಚಯ್ಯ ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್, ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆಯ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.

ಇನ್ನಿತರ ಪ್ರದೇಶಗಳಲ್ಲೂ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ
ಅಶೋಕ ರಸ್ತೆಯ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ, ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ, ಬಲರಾಮ ದ್ವಾರದ ಮುಂಭಾಗ, ಡಾ.ರಾಜ್‌ಕುಮಾರ್‌ ವೃತ್ತದಿಂದ ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ಬಿ.ಎನ್.ನರಸಿಂಹಮೂರ್ತಿ ವೃತ್ತ, ಬಿ.ಎನ್.ರಸ್ತೆ ಜಂಕ್ಷನ್‌ನಿಂದ ಮೃಗಾಲಯದ ರಸ್ತೆಯವರೆಗೆ, ಮಾನಸರ ರಸ್ತೆಯ ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ ರಸ್ತೆ ವರೆಗೆ, ಮಲೆ ಮಹದೇಶ್ವರ ರಸ್ತೆಯ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯ ಸರ್ಕಾರಿ ಭವನದ ದ್ವಾರದ ರಾಜೇಂದ್ರ ಒಡೆಯರ್ ವೃತ್ತದವರೆಗೆ ಹಲವು ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:

Mysuru Dasara: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ತಯಾರಾಗುತ್ತಿದೆ ಮೈಸೂರು; ಸಿದ್ಧತೆ ಹೇಗಿದೆ?

ವಿಶ್ವವಿಖ್ಯಾತ ದಸರಾ ಮಹೋತ್ಸವ; ಮೈಸೂರಿನ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ

 

Published On - 9:07 am, Mon, 4 October 21