ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ರಸ್ತೆ ಕುಸಿತವುಂಟಾಗಿದ್ದು, ಸುಮಾರು 70 ಅಡಿಯಷ್ಟು ರಸ್ತೆ ಕುಸಿತವಾಗಿದೆ. ಅಕ್ಟೋಬರ್ 20ರಂದು ಭಾರಿ ಮಳೆಗೆ ರಸ್ತೆ ಕುಸಿದಿತ್ತು. ದುರಸ್ತಿ ಕಾರ್ಯ ವಿಳಂಬವಾದರೆ ಮತ್ತಷ್ಟು ಸಮಸ್ಯೆಯಾಗುವ ಲಕ್ಷಣಗಳಿವೆ. ದೊಡ್ಡ ಕಂದಕ ಸೃಷ್ಟಿಯಾಗುವ ಸಾಧ್ಯತೆಯಿದೆ. ಹೀಗಾಗಿ ಅದಷ್ಟೂ ಬೇಗ ದುರಸ್ತಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ನಿರ್ಧರಿಸಲಾಗಿದೆ.
ಅಕ್ಟೋಬರ್ ಮಳೆಗೆ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿತವಾಗಿತ್ತು:
ಇಡೀ ರಾಜ್ಯ ಸೇರಿದಂತೆ ಮೈಸೂರಿನಲ್ಲೂ ಅಕ್ಟೋಬರ್ ತಿಂಗಳಲ್ಲಿ ಭಾರಿ ಮಳೆಯಾಗಿ, ಮಳೆ ಆರ್ಭಟಕ್ಕೆ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತವಾಗಿತ್ತು. ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿದಿತ್ತು. ಭೂಮಿ ಕುಸಿದ ಮಾರ್ಗದಲ್ಲಿ ಸಂಚರಿಸದಂತೆ ಕ್ರ ಮೈಗೊಳ್ಳಲಾಗಿತ್ತು. ಅಕ್ಟೋಬರ್ 20ರಂದು ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ಗಡಿಯಾರ ವೃತ್ತದ ಬಳಿ ಬೈಕ್‌ಗಳು ಮುಳುಗಡೆಯಾಗಿದ್ದವು. ಮತ್ತೊಂದೆಡೆ ಮೈಸೂರಿನ ಕುವೆಂಪು ನಗರದಲ್ಲಿರುವ ಪೆಟ್ರೋಲ್ ಬಂಕ್ ಮೇಲ್ಚಾವಣಿಗೆ ಹಾನಿಯಾಗಿತ್ತು.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯ ಇಕ್ಕೆಲುಗಳಲ್ಲಿ ಗಜರಾಜನ ಓಡಾಟ |Tv9Kannada|
(due to heavy rains again road collapse in chamundi hill in mysore)
Published On - 8:38 am, Wed, 3 November 21