ಆಸ್ತಿ ವಿಚಾರಕ್ಕೆ ಗಲಾಟೆ; ಮಲಗಿದ್ದ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಂದು ಅಣ್ಣ ಪರಾರಿ

| Updated By: ಆಯೇಷಾ ಬಾನು

Updated on: Apr 11, 2022 | 8:11 AM

ಜಾಗದ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ಇತ್ತು. ಹೀಗಾಗಿ ಮಲಗಿದ್ದ ತಮ್ಮ ಗೋವಿಂದ ನಾಯಕನ ಮೇಲೆ ಅಣ್ಣ ರಂಗಸ್ವಾಮಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಆಸ್ತಿ ವಿಚಾರಕ್ಕೆ ಗಲಾಟೆ; ಮಲಗಿದ್ದ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಂದು ಅಣ್ಣ ಪರಾರಿ
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಆಸ್ತಿ ವಿಚಾರಕ್ಕೆ ನಡೆದ ಗಲಾಟೆ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ಗೋವಿಂದ (35) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಸಹೋದರ ರಂಗಸ್ವಾಮಿ ಪರಾರಿಯಾಗಿದ್ದಾನೆ.

ಜಾಗದ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ಇತ್ತು. ಹೀಗಾಗಿ ಮಲಗಿದ್ದ ತಮ್ಮ ಗೋವಿಂದ ನಾಯಕನ ಮೇಲೆ ಅಣ್ಣ ರಂಗಸ್ವಾಮಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕುಟುಂಬಸ್ಥರು ಕೂಡಲೇ ಗೋವಿಂದನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲಿಸದೆ ಕೆ.ಆರ್.ಆಸ್ಪತ್ರೆಯಲ್ಲಿ ಗೋವಿಂದ ಮೃತಪಟ್ಟಿದ್ದಾರೆ. ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಅಣ್ಣ ರಂಗಸ್ವಾಮಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ
ಕಲಬುರಗಿಯ ಎಸ್.ಎಂ.ಕೃಷ್ಣ ಕಾಲೋನಿಯಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಉಮಾಕಾಂತ್(21) ಕೊಲೆಯಾದ ಯುವಕ. ಹಳೆಯ ವೈಷಮ್ಯಕ್ಕೆ ಕಲಬುರಗಿ ನಗರದ ದೀನದಯಾಳ ಉಪಾಧ್ಯಾಯ ನಗರದ ನಿವಾಸಿ ಉಮಾಕಾಂತ್​ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆಯ ಮುಂದೆ ಯುವಕನ ಹೈಡ್ರಾಮಾ
ಇನ್ನು ಬೆಂಗಳೂರಿನ ಗೋವಿಂದಪುರ ಠಾಣೆಯ ಮುಂದೆ ಕುಡಿದ ಮತ್ತಲ್ಲಿ ಯುವಕನ ಹೈಡ್ರಾಮಾ ನಡೆದಿದೆ. ಪೆಟ್ರೋಲ್ ಹಾಕಿ ಸುಟ್ಟು, ಚಾಕು ಇರಿದಿದ್ದಾರೆಂದು ಕವರ್‌ನಲ್ಲಿ ಪೆಟ್ರೋಲ್, ಚಾಕು ತಂದು ಯುವಕ ಕಿರಿಕ್ ಮಾಡಿದ್ದಾನೆ. ಠಾಣೆಯ ಮುಂದೆ ಕಿರಿಕಿರಿ ಮಾಡುತ್ತಿದ್ದ ಇಮ್ರಾನ್ನನ್ನು ಗೋವಿಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಠಾಣೆ ಮುಂದೆ ಬಂದೋನೆ ನನಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚಾಕುವಿನಿಂದ ಇರಿದು ಕೊಲ್ಲಲ್ಲು ಬಂದಿದ್ದಾರೆ ಅಂತ ಠಾಣೆ ಮುಂದೆ ಹೈಡ್ರಾಮ ಮಾಡಿದ್ದ. ಮೈ ಮೇಲೆ ಚಾಕುವಿನಿಂದ ಸಣ್ಣದಾಗಿ ಪರಚಿಕೊಂಡು ಡ್ರಾಮ ಕ್ರಿಯೆಟ್ ಮಾಡಿದ್ದಾನೆ. ಗಾಂಜಾ ಮತ್ತಲ್ಲಿ ಕಿರಿಕ್ ಮಾಡ್ತಿರುವ ಶಂಕೆ ಹಿನ್ನಲೆ ಠಾಣೆ ಮುಂದೆ ಕಿರಿಕ್ ಮಾಡ್ತಿದ್ದ ಇಮ್ರಾನ್ ನನ್ನ ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯಲಾಗಿದೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಇಮ್ರಾನ್ ಬಳಿ ಒಂದು ಚಾಕು ಪತ್ತೆಯಾಗಿದೆ.

ದ್ಯಾವನೂರಿನಲ್ಲಿ ಸಿಡಿಲು ಬಡಿದು 14 ಕುರಿ, ಕುದುರೆ ಸಾವು
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದ್ಯಾವನೂರಿನಲ್ಲಿ ಸಿಡಿಲು ಬಡಿದು 14 ಕುರಿ, ಕುದುರೆ ಮೃತಪಟ್ಟಿದೆ. ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆ ವೇಳೆ ಸಿಡಿಲು ಬಡಿದು 14 ಕುರಿ ಮತ್ತು ಒಂದು ಕುದುರೆ ಮೃತಪಟ್ಟಿದೆ. ವಿಠ್ಠಲ ಲಟ್ಟಣ್ಣವರಗೆ ಸೇರಿದ ಕುರಿಗಳು ಮೃತಪಟ್ಟಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿ ಮತ್ತು ಕುದುರೆ ಕಳೆದುಕೊಂಡು ವಿಠ್ಠಲ ಲಟ್ಟಣ್ಣ ಕಂಗಾಲಾಗಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Liver Health: ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ಲಿವರ್ ತೊಂದರೆಗೆ ಒಳಗಾಗಬಹುದು ಎಚ್ಚರ..!

ಸರ್ಕಾರದಲ್ಲಿ ಇದ್ದು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ: ಜೆಸಿ ಮಾಧುಸ್ವಾಮಿ

Published On - 7:13 am, Mon, 11 April 22