ಮೈಸೂರಿನ ಫುಟ್​ಬಾಲ್​ ಆಟಗಾರ ರೋಮ್‌ನಲ್ಲಿ ಸಾವು; ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ

| Updated By: preethi shettigar

Updated on: Aug 11, 2021 | 10:20 AM

ಫುಟ್​ಬಾಲ್ ಟೂರ್ನಿಗೆ ಇಟಲಿಗೆ ತೆರಳಿದ್ದಾಗ ದುರಂತ ಸಂಭವಿಸಿದೆ. ದೇಶದ ವಿವಿಧ ಭಾಗಗಳಿಂದ ಆಟಗಾರರು ಟೂರ್ನಿಗೆ ತೆರಳಿದ್ದರು. ಸದ್ಯ ಮೃತದೇಹದ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ.

ಮೈಸೂರಿನ ಫುಟ್​ಬಾಲ್​ ಆಟಗಾರ ರೋಮ್‌ನಲ್ಲಿ ಸಾವು; ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ
ಯಶವಂತಕುಮಾರ್ (23)
Follow us on

ಮೈಸೂರು: ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೈಸೂರಿನ ಫುಟ್​ಬಾಲ್ ಆಟಗಾರ ಸಾವನ್ನಪ್ಪಿದ್ದಾರೆ. ರೋಮ್​ನಲ್ಲಿ ಯಶವಂತ ಕುಮಾರ್ (23) ಸಾವನ್ನಪ್ಪಿದ್ದಾರೆ. ಮೈಸೂರಿನ ಎನ್. ಆರ್. ಮೊಹಲ್ಲಾದ ನಿವಾಸಿ ಮೃತ ದುರ್ದೈವಿ. ಫುಟ್​ಬಾಲ್ (Football) ಟೂರ್ನಿಗೆ ಇಟಲಿಗೆ ತೆರಳಿದ್ದಾಗ ದುರಂತ ಸಂಭವಿಸಿದೆ. ದೇಶದ ವಿವಿಧ ಭಾಗಗಳಿಂದ ಆಟಗಾರರು ಟೂರ್ನಿಗೆ ತೆರಳಿದ್ದರು. ಸದ್ಯ ಮೃತದೇಹದ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ.

ಮೈಸೂರು: ಮಹಿಳೆಯ ಮಾಂಗಲ್ಯ ಸರ ಕಳ್ಳತನ
ಸರಗಳ್ಳರು ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಮೈಸೂರಿನ ನಂಜನಗೂಡು ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಗೀತಾಗೆ ಸೇರಿದ 80 ಗ್ರಾಂ ತೂಕದ 2.5 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಬೈಕ್‌ನಲ್ಲಿ ಬಂದ ಸರಗಳ್ಳರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ವರುಣಾ ನಾಲೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲು
ವರುಣಾ ನಾಲೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಮೈಸೂರು ತಾಲ್ಲೂಕು ಶ್ಯಾದನಹಳ್ಳಿ ಬಳಿ ನಡೆದಿದೆ. ರಂಗಸ್ವಾಮಿ 14 ಮೃತ ಬಾಲಕ. 9ನೇ ತರಗತಿ ಓದುತ್ತಿದ್ದ ರಂಗಸ್ವಾಮಿ 5 ಜನ ಬಾಲಕರ ಜತೆ ನಾಲೆಯಲ್ಲಿ ಈಜಲು ಹೋಗಿದ್ದಾಗ ದುರಂತ ಸಂಭವಿಸಿದೆ. ರಂಗಸ್ವಾಮಿ ಮೈಸೂರಿನ ಮಂಜುನಾಥ ಪುರದ ನಿವಾಸಿ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಪೊಲೀಸ್ ಕಸ್ಟಡಿಯಲ್ಲಿದ್ದ ಕಾಂಗೋ ಪ್ರಜೆ ಅನುಮಾನಾಸ್ಪದ ಸಾವು; ಮೃತದೇಹ ಕಾಂಗೋ ಎಂಬೆಸಿಗೆ ಹಸ್ತಾಂತರ

ಸಂಜಯನಗರದಲ್ಲಿ ಪಾರಿವಾಳ ಹಿಡಿಯಲು ಹೋದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು

Published On - 9:58 am, Wed, 11 August 21